ಹರಿದ್ವಾರ, ಋಷಿಕೇಶದ ಸನ್ನಿಧಿಯಲ್ಲಿ ನ. 16ರಂದು ರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವದ ಲಾಂಛನ ಬಿಡುಗಡೆ

varthajala
0

 *ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘ ಮತ್ತು ಬಿಬಿಎಂಪಿ ನೌಕರರ ಕನ್ನಡ ಸಂಘದಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ*

ಹರಿದ್ವಾರ, ಋಷಿಕೇಶದ ಸನ್ನಿಧಿಯಲ್ಲಿ ನ. 16ರಂದು ರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವದ ಲಾಂಛನ ಬಿಡುಗಡೆ






ಬೆಂಗಳೂರು: ಬಿಬಿಎಂಪಿ ಕೇಂದ್ರ ಕಛೇರಿಯಲ್ಲಿ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘ ಮತ್ತು ಬಿಬಿಎಂಪಿ ನೌಕರರ ಕನ್ನಡ ಸಂಘದ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವ ಮತ್ತು  ಉತ್ತರಖಂಡ್ ರಾಜ್ಯದ  ಹರಿದ್ವಾರ ಮತ್ತು ಋಷಿಕೇಶದ ಗಂಗಾ ನದಿ ತೀರದಲ್ಲಿ ನವಂಬರ್ 16ರಂದು ರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವ ಸಮಾರಂಭದ ಲಾಂಛನ ಮತ್ತು ಭಿತ್ತಿಪತ್ರ(ಪೊಸ್ಟರ್) ಬಿಡುಗಡೆ ಸಮಾರಂಭ.

ಕನ್ನಡ ಧ್ವಜಾರೋಹಣ ಮಾಡಿ ಮೇರುನಟ ಡಾ||ರಾಜ್ ಕುಮಾರ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್  ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ಆಡಳಿತಗಾರರಾದ ಎಸ್.ಆರ್.ಉಮಾಶಂಕರ್, ಬಿಬಿಎಂಪಿ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ರವರು ಮತ್ತು ಮಾಜಿ ಮಹಾಪೌರರಾದ ಜೆ.ಹುಚ್ಚಪ್ಪ, ವಿಶೇಷ ಆಯುಕ್ತರಾದ ಸುರಳ್ಕರ್ ವಿಕಾಸ್ ಕಿಶೋರ್, ಡಾ. ಕೆ. ಹರೀಶ್ ಕುಮಾರ್, ಅವಿನಾಶ್ ಮೆನನ್ ರಾಜೇಂದ್ರನ್, ಉಪ ಆಯುಕ್ತರಾದ ಮಂಜುನಾಥ ಸ್ವಾಮಿ, ಪ್ರಧಾನ ಅಭಿಯಂತರರಾದ ಪ್ರಹ್ಲಾದ್, ಜಂಟಿ ಆಯುಕ್ತರಾದ ಲಕ್ಷ್ಮಿದೇವಿ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷರಾದ ಎ.ಅಮೃತ್ ರಾಜ್ ರವರು, ಬಿಬಿಎಂಪಿ ನೌಕರರ ಕನ್ನಡ ಸಂಘದ ಅಧ್ಯಕ್ಷರಾದ ಸಾಯಿಶಂಕರ್ ರವರು ಪದಾಧಿಕಾರಿಗಳು ಲಾಂಛನ, ಭೀತ್ತಿ ಪತ್ರ (ಪೊಸ್ಟರ್)* ಅನಾವರಣಗೊಳಿಸಿದರು. 

*ಮುಖ್ಯ ಆಡಳಿತಗಾರರಾದ ಎಸ್.ಆರ್.ಉಮಾಶಂಕರ್* ರವರು ಮಾತನಾಡಿ ಬೆಂಗಳೂರು ಇಡಿ ದೇಶದ ಪ್ರಮುಖ ನಗರ, ರಾಜ್ಯದ ಹೆಮ್ಮೆಯ ನಗರವಾಗಿದೆ. ಕನ್ನಡ ಭಾಷೆಯನ್ನು ಎತ್ತಿಹಿಡಿಯುವ ಕೆಲಸ ಬಿಬಿಎಂಪಿ  ಉತ್ತಮವಾಗಿ ನಿರ್ವಹಣೆ ಮಾಡುತ್ತಿದೆ.


ಕನ್ನಡ ಆಡಳಿತ ಭಾಷೆಯಾಗಿದೆ, 6.5ಕೋಟಿ ಜನರ ಮನದಾಳದ ಭಾಷೆಯಾಗಿದೆ. ಕನ್ನಡ ಭಾಷೆಗೆ 8 ಜ್ಞಾನಪೀಠ ಪ್ರಶಸ್ತಿ ಬಂದಿದೆ. ರಾಜ್ಯದ ಬೆಂಗಳೂರುನಗರದಲ್ಲಿ ಕನ್ನಡ ಭಾಷೆ ಬಳಕೆ ಕಡಿಮೆ ಇರಬಹುದು ಹಳ್ಳಿ, ಗ್ರಾಮ, ತಾಲ್ಲೂಕು ಮಟ್ಟದಲ್ಲಿ ಕನ್ನಡ ಭಾಷೆ ಹೆಚ್ಚು ಬಳಕೆಯಾಗುತ್ತಿದೆ.


ನಾಮಫಲಕಗಳಲ್ಲಿ ಕನ್ನಡ ಭಾಷೆ ಬಳಕೆ ಕಡ್ಡಾಯವಾಗಿ ಜಾರಿಗೆ ತರಲಾಗುತ್ತಿದೆ.

*ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್* ರವರು ಮಾತನಾಡಿ ಈ ವರ್ಷ ವಿಶೇಷವಾಗಿ ರಾಜ್ಯದಲ್ಲಿ ಕನ್ನಡ ರಾಜ್ಯೋತ್ಸವ ಅಚರಿಸಲಾಗುತ್ತಿದೆ. ಉಪಮುಖ್ಯಮಂತ್ರಿ ಸಾಮಾಜಿಕ ಜಾಲತಾಣದ ಮೂಲಕ ಐ.ಟಿ.ಬಿಟಿ ಮತ್ತು ವಾಣಿಜ್ಯ ಮಳಿಗೆ ಕನ್ನಡ ಬಾವುಟ ಪ್ರದರ್ಶನ ಮಾಡಬೇಕು ಕಟ್ಟಪ್ಪಣೆ ನೀಡಲಾಗಿದೆ.

ಕನ್ನಡ ಭಾಷೆ ಸಂಪೂರ್ಣ ಬಳಕೆ ಮಾಡಬೇಕು. ಕನ್ನಡ ಭಾಷೆ ಬಳಸಿ, ಬೆಳಸಬೇಕು, ಬಿಬಿಎಂಪಿಯಲ್ಲಿ ಸಂಪೂರ್ಣ ಆಡಳಿತ ವ್ಯವಹಾರ ಕನ್ನಡ ನಡೆಯುತ್ತದೆ ಎಂದು ಹೇಳಿದರು.

*ಜೆ.ಹುಚ್ಚಪ್ಪರವರು ಮಾತನಾಡಿ* ಕನ್ನಡ ಭಾಷೆ ಉಳಿಸಿ, ಬೆಳಸಲು ಅಧಿಕಾರಿಗಳು ಪರಿಶ್ರಮ ಮುಖ್ಯ, ಕನ್ನಡದಲ್ಲಿ ನಾಮಫಲಕ ಕಡ್ಡಾಯವಾಗಿ ಕನ್ನಡ ಬಳಕೆ ಮಾಡಿ ಎಂದು ನೋಟಿಸ್ ಕೊಡಿ, ನೋಟಿಸ್ ಮಣಿಯದೇ ಹೋದರೆ ವಾಣಿಜ್ಯ ಮಳಿಗ ಬೀಗ ಜಡಿಯಬೇಕು. 

*ಅಧ್ಯಕ್ಷರಾದ ಎ.ಅಮೃತ್ ರಾಜ್* ರವರು ಮಾತನಾಡಿ ಕನ್ನಡ ಭಾಷೆ ಉಳಿಸಿ, ಬೆಳಸಬೇಕು, ಕನ್ನಡ ಭಾಷೆ ವಿಶ್ವ ಭಾಷೆಯಾಗಬೇಕು ಎಂಬ ನಿಟ್ಟಿನಲ್ಲಿ ಸಂಘದ ವತಿಯಿಂದ ಉತ್ತರಖಂಡ್ ರಾಜ್ಯದಲ್ಲಿ ಅದ್ದೂರಿಯಾಗಿ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ನವಂಬರ್ 16ನೇ ತಾರೀಖು ಹಮ್ಮಿಕೊಳ್ಳಲಾಗಿದೆ.

ಹಿಂದೆ ಅಂತರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವವನ್ನು ನೇಪಾಳದಲ್ಲಿ ಹಾಗೂ ಕಾಶಿಯಲ್ಲಿ ರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವ ಅಚರಿಸಲಾಯಿತು.

ಕನ್ನಡ ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ರಾಜ್ಯದಿಂದ ಹೊರ ರಾಜ್ಯ, ರಾಷ್ಟ್ರಗಳಿಗೆ ಪರಿಚಯಿಸುವ ವಿಶ್ವವ್ಯಾಪಿಯಲ್ಲಿರುವ ಕನ್ನಡಿಗರನ್ನು ತಲುಪುಬೇಕು ಮತ್ತು ಕನ್ನಡೇತರಿಗೆ ಕನ್ನಡ ನಾಡಿನ ಪರಿಚಯ, ಕನ್ನಡ ಭಾಷೆ ಕಲಿಸುವ ಕಾರ್ಯಕ್ರಮ ನಮ್ಮ ಸಂಘಟನೆಯಿಂದ ಮಾಡಲಾಗುತ್ತಿದೆ ಎಂದು ಹೇಳಿದರು.

ಸಂಘದ ಪದಾಧಿಕಾರಿಗಳಾದ ಬಾಬಣ್ಣ, ಡಾ.ಶೋಭಾ, ಡಿ.ರಾಮಚಂದ್ರ, ಕೆ.ಜಿ.ರವಿ, ರುದ್ರೇಶ್ ಬಿ., ಸೋಮಶೇಖರ್ ಎನ್.ಎಸ್., ಹೆಚ್.ಕೆ.ತಿಪ್ಪೇಶ್, ಹರೀಶ್ ಹೆಚ್.ಬಿ., ನರಸಿಂಹ, ಮಂಜೇಗೌಡ, ಆರ್.ರೇಣುಕಾಂಬ,ಎಸ್.ಜಿ.ಸುರೇಶ್, ಮಂಜುನಾಥ್, ಉಮೇಶ್ ವಿ, ಸಂತೋಷ್ ಕುಮಾರ್ ನಾಯ್ಕ್, ಶ್ರೀಧರ್, ಸಂತೋಷ್ ಕುಮಾರ್ ರವರು ಉಪಸ್ಥಿತರಿದ್ದರು.

Post a Comment

0Comments

Post a Comment (0)