ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ 2025 ನೆ, ಜನವರಿ18/01/2025 ಶನಿವಾರ ಮತ್ತು 19/01/2025 ಭಾನುವಾರ ಹಮ್ಮಿಕೊಂಡಿರುವ 11ನೇ ಬ್ರಾಹ್ಮಣ ಮಹಾ ಸಮ್ಮೇಳನ ಸುವರ್ಣ ಮಹೋತ್ಸವ ಅಂಗವಾಗಿ ಲೋಕಕಲ್ಯಾಣಾರ್ಥವಾಗಿ ಗಾಯತ್ರಿ ಯಾಗವನ್ನು ಹಮ್ಮಿಕೊಂಡಿದ್ದು , ಈ ಯಾಗ ಸಂಪನ್ನ ವಾಗಲು 24 ಕೋಟಿ ಗಾಯತ್ರಿ ಜಪವನ್ನು ರಾಜ್ಯದ ಎಲ್ಲಾ ತ್ರಿಮತಸ್ಥ ವಿಪ್ರ ಬಾಂಧವರು ಪ್ರತಿನಿತ್ಯ ತಾವು ಸಂಧ್ಯಾವಂದನೆ ಮಾಡುವಾಗ ಕನಿಷ್ಠ108 ಗಾಯತ್ರಿ ಜಪವನ್ನುಅನುಷ್ಠಾನ ಮಾಡಬೇಕೆಂದು ಅಖಿಲ ಕರ್ನಾಟಕ ಬ್ರಾಹ್ಮಣ ರಾಜಕೀಯ ವೇದಿಕೆಯ ರಾಜ್ಯಾಧ್ಯಕ್ಷರಾದ ರಾಘವೇಂದ್ರ ಮಯ್ಯ ಅವರು ಕರೆ ಕೊಟ್ಟಿರುತ್ತಾರೆ.
ತಾವು ಮಾಡಿರುವ ಜಪದ ಸಂಖೆಯನ್ನು ನಿಮ್ಮ ತಾಲೂಕಿನ ಬ್ರಾಹ್ಮಣ ಮಹಾಸಭಾ ಅಧ್ಯಕ್ಷರು ಅಥವಾ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಪದಾಧಿಕಾರಿಗಳ ಮೊಬೈಲ್ ಸಂಖ್ಯೆಗೆ ಕಳಿಸಿ ಕೊಡಬೇಕಾಗಿ ಈ ಪತ್ರಿಕಾ ಪ್ರಕಟಣೆ ಮೂಲಕ ವಿನಂತಿಸಿಕೊಳ್ಳುತ್ತೇನೆ.