ಲಯನ್ ಸಂಸ್ಥೆಯಿಂದ ವರ್ಲ್ಡ್ ಫಾರ್ ದಿಮೆನಿಯಾ ವಾಕಥಾನ್ (ಜಾಗೃತ ನಾಡಿಗೆ )

varthajala
0

 ಬೆಂಗಳೂರು:-   ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆ ಜಿಲ್ಲೆ 317 ಎಫ್ ವತಿಯಿಂದ ವಿಶ್ವ  ಅಲೈಮನ್ ದಿನದ ಅಂಗವಾಗಿ ವರ್ಲ್ಡ್ ಫಾರ್ (ಜಾಗೃತಿ ನಡಿಗೆ ) ದಿಮೆನಿಯಾ ವಾಕಟಾನ್ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. 

ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಿಂದ ವಿಧಾನಸೌಧದ ವರೆಗೆ 700ಕ್ಕೂ ಹೆಚ್ಚು ವಿವಿಧ ಕಾಲೇಜುಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಗೂ 300 ಕ್ಕೂ ಹೆಚ್ಚು ಲಯನ್ಸ್ ಸಂಸ್ಥೆಯ ಸದಸ್ಯರು ಈ ಜಾಗೃತಿ ನಡಿಗೆಯಲ್ಲಿ ಭಾಗವಹಿಸಿದ್ದರು.

 ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಲಯನ್ ಜಿಲ್ಲಾ ರಾಜ್ಯಪಾಲರಾದ ಸಿ.ಎಂ. ನಾರಾಯಣಸ್ವಾಮಿ ಮಾತನಾಡುತ್ತಾ ಡಿಮೆನಿಯಾ ಎನ್ನುವುದು ಮೆಮೊರಿ ಆಲೋಚನೆ ಮತ್ತು ಸಾಮಾಜಿಕ ಸಾಮರ್ಥ್ಯಗಳ ಮೇಲೆ ಪರಿಣಾಮ ಬೀರುವ ಅರಿವಿನ ದುರ್ಬಲತೆಗಳ ವ್ಯಾಪ್ತಿಯನ್ನು ಒಳಗೊಳ್ಳುವ ಪದವಾಗಿದೆ.

ಇದು ಒಂದೇ ರೋಗವಲ್ಲ ಆದರೆ ವಿವಿಧ ಪರಿಸ್ಥಿತಿಗಳಿಂದ ಉಂಟಾಗಬಹುದಾದ ರೋಗಲಕ್ಷಣಗಳ ಸಂಗ್ರಹವಾಗಿದೆ ಹೆಚ್ಚು 

ಪ್ರಜೆಲತೆ ಗಳೊಂದಿಗಿರುವ ಅಲೈಮಾನ್ ಖಾಯಿಲೆಯಾಗಿದೆ, ಬುದ್ಧಿಮಾಂದ್ಯತೆಯನ್ನು ಅರ್ಥಮಾಡಿಕೊಳ್ಳುವುದು ನಿರ್ಣಾಯಕವಾಗಿದೆ, ಕರ್ನಾಟಕದಲ್ಲಿ ಡಿಮೇನಿಯ ಸುತ್ತಲಿನ ಅಂಕಿ ಅಂಶಗಳ ಅಂಶಗಳು ಆತಂಕಕಾರಿಯಾಗಿದೆ.

 ಇತ್ತೀಚಿನ ಅಧ್ಯಾಯನಗಳು ನಮ್ಮ ರಾಜ್ಯದಲ್ಲಿ ಸರಿಸುಮಾರು 1.5 ಮಿಲಿಯನ್ ಜನರು ಕೆಲವು ರೀತಿಯ ಬುದ್ಧಿ ಮಾಂದ್ಯತೆಯೊಂದಿಗೆ  ಬದುಕುತ್ತಿದ್ದಾರೆ  ನಮ್ಮ ಜನಸಂಖ್ಯೆಯ ವಯಸ್ಸಾದಂತೆ  ಮುಂಬರುವ ವರ್ಷಗಳಲ್ಲಿ ಈ ಸಂಖ್ಯೆ ಗಣನೀಯವಾಗಿ ಹೆಚ್ಚಾಗುವ ನಿರೀಕ್ಷೆ ಇದೆ. ಮಾನಸಿಕ ಆರೋಗ್ಯ ಬಹಳ ಮುಖ್ಯ ಆದ್ದರಿಂದ ಆರೋಗ್ಯಕರವಾಗಿ ತಿನ್ನಿರಿ, ಆರೋಗ್ಯಕರವಾಗಿ ಯೋಚಿಸಿ, ಮತ್ತು ಆರೋಗ್ಯವಾಗಿರಿ ಎಂದು ತಿಳಿಸಿದರು.

 ಕಾರ್ಯಕ್ರಮ ನಿರೂಪಿಸಿದ್ದ ಲಯನ್ ಅನುಪಮಾ ರವರು ಮಾತನಾಡುತ್ತಾ ಈ ರೋಗ ನಿರ್ಮೂಲನದಿಂದ ಮರವು ತಡೆಗಟ್ಟುವ ಗೋಸ್ಕರ ಈ ಜನ ಜಾಗೃತಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ  ಈ ಜಾಗೃತಿ ಸಮಾವೇಶಕ್ಕೆ ಸಹಕಾರ ನೀಡಿದ ನಮ್ಮ ಎಲ್ಲಾ ಲಯನ್  ಸದಸ್ಯರಿಗೆ ಹಾಗೂ ಕಾಲೇಜಿನ ಆಡಳಿತ ವರ್ಗಕ್ಕೆ ತುಂಬು ಹೃದಯದಿಂದ ಕೃತಜ್ಞತೆ ಅರ್ಪಿಸಿದರು.



ಕಾಲೇಜಿನ ಪ್ರಿನ್ಸಿಪಾಲ್ ಡಾಕ್ಟರ್ ಎಸ್ ನಾಗಭೂಷಣ್ ವಿವಿಧ ಕಾಲೇಜಿನ ಪ್ರಿನ್ಸಿಪಾಲ್ ಹಾಗೂ ಉಪನ್ಯಾಸಕರು ಲಯನ್ ಉಪರಾಜ್ಯಪಾಲರಾದ ಆಕಾಶ್ ಸುವರ್ಣ ಮಾಜಿ ರಾಜ್ಯಪಾಲರು ಲಯನ್ ಸದಸ್ಯರು ಉಪಸ್ಥಿತರಿದ್ದರು ಎಂದು ಲಯನ್ ಜಿಲ್ಲಾ ಮಾಧ್ಯಮ ಸಂಯೋಜಕರಾದ ಜಿ.ಎಸ್. ಮಂಜುನಾಥ್ ತಿಳಿಸಿದರು.






Post a Comment

0Comments

Post a Comment (0)