ಸೇವೆಯನ್ನು ಉದ್ದೇಶವಾಗಿಟ್ಟುಕೊಂಡು ಆಸ್ಪತ್ರೆಗಳು ಕಾರ್ಯನಿರ್ವಹಿಸಬೇಕು: ಸಚಿವ ದಿನೇಶ್ ಗುಂಡೂರಾವ್

varthajala
0

 ಬೆಂಗಳೂರು: ಸೇವೆಯನ್ನೇ ಉದ್ದೇಶವಾಗಿಟ್ಟುಕೊಂಡು ಅತ್ಯಾಧುನಿಕ ಉಪಕರಣಗಳ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಬದ್ಧತೆಯನ್ನು ಕಾಯ್ದುಕೊಂಡಿರುವ ವಾಸವಿ ಆಸ್ಪತ್ರೆಯ ಕಾರ್ಯ ಶ್ಲಾಘನೀಯ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ಹೇಳಿದರು.



ಬುಧವಾರ ನಗರದ ವಾಸವಿ ಆಸ್ಪತ್ರೆಯಲ್ಲಿನ ಅತ್ಯಾಧುನಿಕ ತಂತ್ರಜ್ಞಾನಗಳಾದ 3-ಟೆಸ್ಲಾ ಎಂಆರ್‌ಐ ಯಂತ್ರ ಮತ್ತು 128-ಸ್ಲೈಸ್ ಸಿಟಿ ಸ್ಕ್ಯಾನರ್ ಉದ್ಘಾಟಿಸಿ ಮಾತನಾಡಿದರು. ಸುಧಾರಿತ ವೈದ್ಯಕೀಯ ಉಪಕರಣಗಳನ್ನು ಪರಿಚಯಿಸುವ ಮೂಲಕ ಸಾಮಾಜಿಕ ಆರೋಗ್ಯ ಕಳಕಳಿಯನ್ನು ಹೊಂದಿರುವ ವಾಸವಿ ಆಸ್ಪತ್ರೆಯ ಬದ್ಧತೆಯನ್ನು ಅವರು ಅಭಿನಂದಿಸಿದರು. ಕಾರ್ಪೊರೇಟ್‌ ಜಗತ್ತಿನಲ್ಲಿ ಆಸ್ಪತ್ರೆಯೊಂದು ಕೈಗೆಟುಕುವ ದರದಲ್ಲಿ ಚಿಕಿತ್ಸೆ ನೀಡುತ್ತಿರುವುದು ಶ್ಲಾಘನೀಯ. ಲಾಭಕ್ಕಿಂತ ಸಮಾಜದ ಹಿತಕ್ಕೆ ಆಸ್ಪತ್ರೆಗಳು ಕಾರ್ಯ ನಿರ್ವಹಿಸಬೇಕು. ವಯಸ್ಸಾದಂತೆ ನಮ್ಮ ಆರೋಗ್ಯ ಸಮಸ್ಯೆಗಳು ಹೆಚ್ಚಾಗ್ತಿವೆ ಆದರೆ ತಂತ್ರಜ್ಞಾನ ಮತ್ತು ಸುಧಾರಿತ ಚಿಕಿತ್ಸೆಗಳ ಮೂಲಕ ನಮ್ಮ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತಿದೆ ಎಂದರು. 

ಇದೇ ವೇಳೆ ಜಾಯಿಂಟ್ ರಿಪ್ಲೇಸ್‌ಮೆಂಟ್ ಸರ್ಜರಿಗಳಿಗಾಗಿ ಮ್ಯಾಕೋ ರೋಬೋಟಿಕ್ ಉಪಕರಣಗಳನ್ನು ಕರೂರ್ ವೈಶ್ಯ ಬ್ಯಾಂಕ್‌ನ ಎಂಡಿ ಮತ್ತು ಸಿಇಒ ಶ್ರೀ ಬಿ. ರಮೇಶ್ ಬಾಬು ಉದ್ಘಾಟಿಸಿದರು. ತದನಂತರ ಮಾತನಾಡಿದ ಅವರು,ವಾಸವಿ ಆಸ್ಪತ್ರೆಯು ವಿಶ್ವಾಸಾರ್ಹ ಮಲ್ಟಿ-ಸ್ಪೆಷಾಲಿಟಿ ಸಂಸ್ಥೆಯಾಗಿ ಬೆಳೆದಿದ್ದು, ಕಡಿಮೆ ವೆಚ್ಚದಲ್ಲಿ ಉನ್ನತ ಶ್ರೇಣಿಯ ವೈದ್ಯಕೀಯ ಸೇವೆಯನ್ನು ಒದಗಿಸುತ್ತಿದೆಯಲ್ಲದೆ ಎಲ್ಲಾ ವರ್ಗದ ಜನರಿಗೂ ಕೈಗೆಟುವಂತಹ ಸೇವೆಯನ್ನು ನೀಡುತ್ತಿದೆ ಎಂದು ಪ್ರಶಂಸಿಸಿದರು. 
                                  
ಇದೇ ವೇಳೆ ಕರ್ನಾಟಕ ಸರ್ಕಾರದ ಎಂಎಲ್‌ಸಿ ಮತ್ತು ಸಿಎಂ ರಾಜಕೀಯ ಕಾರ್ಯದರ್ಶಿ ಡಾ.ಕೆ.ಗೋವಿಂದರಾಜ್ ಅವರು ವಾಸವಿ ಆಸ್ಪತ್ರೆಯ ಗ್ರಾಮಾಂತರ ಆಂಬ್ಯುಲೆನ್ಸ್ ಉಪಕ್ರಮಕ್ಕೆ ಚಾಲನೆ ನೀಡಿದರು. 

ಕಾರ್ಯಕ್ರಮದಲ್ಲಿ ವಾಸವಿ ಆಸ್ಪತ್ರೆಯ ಅಧ್ಯಕ್ಷರಾದ ಸುಬ್ರಮಣ್ಯ ಗುಪ್ತಾ, ಚೇರ್‌ಮೆನ್ ಶ್ರೀನಿವಾಸ್‌ ಗುಪ್ತಾ ಮತ್ತು ವೈಸ್‌ ಚೇರ್‌ಮೆನ್‌ ಸುಬ್ಬರಾಜು ಸೇರಿದಂತೆ ಇತರೆ ದಾನಿಗಳು ಹಾಗೂ ಆಸ್ಪತ್ರೆಯ ಸಿಬ್ಬಂದಿ ಉಪಸ್ಥಿತರಿದ್ದರು.
                                
3-ಟೆಸ್ಲಾ ಎಂಆರ್‌ಐ ಯಂತ್ರ - ಕಡಿಮೆ ಶಬ್ದದೊಂದಿಗೆ ಗುಣಮಟ್ಟದ ಚಿಕಿತ್ಸೆಯನ್ನು ನೀಡುತ್ತದೆ. ಇದರಿಂದ ರೋಗಿಗೆ ಕೈಗೆಟಕುವ ದರದಲ್ಲಿ ಚಿಕಿತ್ಸೆಯು ಲಭಿಸುತ್ತದೆ. ಇಂದಿನ ದಿನಗಳಲ್ಲಿ ಟೆಸ್ಲಾ ಎಂಆರ್‌ಐ ಯಂತ್ರವು ಹೆಚ್ಚು ಜನಪ್ರಿಯಗೊಂಡಿದ್ದು, ಅತ್ಯಾಧುನಿಕ ಆವಿಷ್ಕಾರಗಳನ್ನು ಒಳಗೊಂಡಿರುವ ಹಿನ್ನೆಲೆ ರೋಗನಿರ್ಣಯಕ್ಕೆ ಹೆಚ್ಚು ಸಹಕಾರಿಯಾಗಿದೆ. ಈ ಯಂತ್ರದ ಮೂಲಕ ರೋಗಿಯ ಸಮಸ್ಯೆ ಕಂಡುಹಿಡಿಯುವ ಜೊತೆಗೆ ಅನಗತ್ಯ ಸ್ಕ್ಯಾನಿಂಗ್‌ ಅಗತ್ಯಗಳನ್ನು ತಪ್ಪಿಸುತ್ತದೆ.

128 ಸ್ಲೈಸ್ CT ಸ್ಕ್ಯಾನರ್ - ಹೃದಯ ಮತ್ತು ಉಸಿರಾಟದ ಸಮಸ್ಯೆಗಳು ಸೇರಿದಂತೆ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವ ರೋಗಿಯ ನಿಖರವಾದ ರೋಗನಿರ್ಣಯಕ್ಕಾಗಿ 128 ಸ್ಲೈಸ್ CT ಸ್ಕ್ಯಾನರ್ ಸಹಾಯಕವಾಗಲಿದೆ. ನಾನ್‌ ಇನ್ವೇಸಿವ್‌ ಇಮೇಜಿಂಗ್‌ ಟೂಲ್‌ ಬಳಿ ಬಳಕೆಯಿಂದ ವೇಗದ ಸ್ಕ್ಯಾನಿಂಗ್‌ ಜೊತೆಗೆ ನಿಖರವಾದ ದೇಹದ ಅಂಗಗಳ ಚಿತ್ರವನ್ನು ಸೆರೆಹಿಡಿಯುವ ಕೆಲಸ ಮಾಡುತ್ತದೆ, ಈ ರೀತಿಯ ಸ್ಕ್ಯಾನಿಂಗ್‌ ಮೂಲಕ ವಿಕಿರಣಗಳಿಗೆ ಒಡ್ಡುವುದನ್ನು ತಡೆಗಟ್ಟುತ್ತದೆ ಜೊತೆಗೆ ರೋಗಿಯ ಸುರಕ್ಷತೆಯನ್ನು ಖಾತ್ರಿಪಡಿಸುತ್ತದೆ.
                             

ಮ್ಯಾಕೋ ರೋಬೋಟಿಕ್ ಉಪಕರಣಗಳು - ಈ ಉಪಕರಣಗಳ ಮೂಲಕ ಮೊಣಕಾಲು ಮತ್ತು ಸೊಂಟದ ಬದಲಿ ಶಸ್ತ್ರಚಿಕಿತ್ಸೆಗೆ ನೆರವಾಗಲಿದೆ. ಈ ಉಪಕರಣಗಳ ಸಹಾಯದಿಂದ ಮಾಡಲಾಗುವ ಚಿಕಿತ್ಸೆಗಳಲ್ಲಿ ಜೋಡಣೆ ಮತ್ತು ನೈಸರ್ಗಿಕ ಚಲನೆ ಸುಧಾರಿಸುತ್ತದೆ. ಅಲ್ಲದೆ ರೋಗಿಯು ತ್ವರಿತ ಚೇತರಿಕೆಯನ್ನು ಕಾಣಬಹುದು.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 6364466240, 6364409651

Post a Comment

0Comments

Post a Comment (0)