ಸಂವಿಧಾನದಲ್ಲಿ ಭಾರತದ ಅಧಿಕೃತ ಆಡಳಿತ ಭಾಷೆಯ ಪಟ್ಟವನ್ನು ಹಿಂದಿ-ಇಂಗ್ಲಿಷ್ ಭಾಷೆಗಳಿಗೆ ಮಾತ್ರಾ ನೀಡುವ ಮೂಲಕ ಹಿಂದಿ ಬಾಷೆಗೆ ಉಳಿದೆಲ್ಲಾ ಭಾರತೀಯ ಭಾಷೆಗಳಿಗಿಂತ ಹೆಚ್ಚಿನ ಸ್ಥಾನಮಾನ ನೀಡಿತು. ಇದರಿಂದಾಗಿ ಹಿಂದಿಯೇತರ ಭಾಷೆಗಳ ಬಗ್ಗೆ ತಾರತಮ್ಯದ ಧೋರಣೆಯನ್ನು ಕೇಂದ್ರ ಸರ್ಕಾರ ಅನುಸರಿಸಲು ಮತ್ತು ಹಿಂದಿಯನ್ನು ಅಧಿಕೃತ ಭಾಷೆಯ ಹೆಸರಿನಲ್ಲಿ ಬಲವಂತಾಗಿ ಹೇರಲು ಅವಕಾಶವಾಯಿತು.
ಭಾರತ ಗಣರಾಜ್ಯವಾದ ದಿನದಿಂದ(1952) ಕೇಂದ್ರ ಸರ್ಕಾರವು ಹಿಂದಿಯನ್ನು ಹೇರುತ್ತಲೇ ಬಂದಿದೆ. ಕೇಂದ್ರ ಸರ್ಕಾರದ ಕಚೇರಿಗಳಲ್ಲಿ ಇತ್ತೀಚೆಗೆ ಹಿಂದಿ ಬಳಕೆ ಹೆಚ್ಚಿಸುವ ಪ್ರಯತ್ನ ತೀವ್ರಗತಿಯಲ್ಲಿ ನಡೆಯುತ್ತಿದೆ. ಕರ್ನಾಟಕದಲ್ಲಿರುವ ಅಂಚೆ, ವಿಮೆ, ರೈಲ್ವೆ, ಪಾಸ್‌ಪೋರ್ಟ್, ಬ್ಯಾಂಕ್ ಮುಂತಾದ ಕಡೆಗಳಲ್ಲಿ ಕನ್ನಡ ಬಳಕೆಗೆ ಸೀಮಿತ ಅವಕಾಶವಿರುವುದರಿಂದ ಕನ್ನಡಿಗನಿಗೆ ತನ್ನ ನಾಡಿನಲ್ಲಿಯೇ ‘ಪರಕೀಯ ಪ್ರಜ್ಞೆ’ ಕಾಡುತ್ತಿದೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಈಗ ಹಿಂದಿ ಹೇರಿಕೆ ಅತಿರೇಕಕ್ಕೆ ಹೋಗಿದೆ.
ಕೇಂದ್ರ ಸರ್ಕಾರವು ಸಾರ್ವಜನಿಕ ಬ್ಯಾಂಕಗಳ ಸಿಬ್ಬಂದಿ ಆಯ್ಕೆಗೆ ಪ್ರಾದೇಶಿಕ ನೇಮಕಾತಿ ಮಂಡಳಿಗಳನ್ನು ರದ್ದು ಮಾಡಿ, ಸಿಬ್ಬಂದಿ ಆಯ್ಕೆಯನ್ನು ಕೇಂದ್ರೀಕೃತ ಗೊಳಿಸಿ Institute of Banking Personnel Selection (IBPS) ಮೂಲಕ ನಡೆಸಲು ಆರಂಭಿಸಿದ ನಂತರ, ಹಿಂದಿ, ಇಂಗ್ಲಿಷ್‌ನಲ್ಲಿ ಮಾತ್ರ ಲಿಖಿತ ಪರೀಕ್ಷೆ ನಡೆಯುತ್ತದೆ. ಸ್ಥಳೀಯ ಭಾಷೆ ಪರೀಕ್ಷಿಸುವ ಪ್ರಕ್ರಿಯೆ ಕೆಲವು ನೆಪ ಮಾತ್ರಕ್ಕಿದೆ. ಸ್ಥಳೀಯ ಬಾಷೆಯ ಜ್ಞಾನ ಸರಿಯಾಗಿ ನಡೆದರೆ ಕನ್ನಡ ಬಾರದ ಅಭ್ಯರ್ಥಿಗಳು ಗುಮಾಸ್ತರಾಗಿ ಕರ್ನಾಟಕಕ್ಕೆ ಬರುತ್ತಿರುವುದಾದರೂ ಹೇಗೆ?. ಇದೇ ಸ್ಥಿತಿ ಕೇಂದ್ರ ಸ್ವ್ವಾಮ್ಯದ ಎಲ್ಲ ಉದ್ಯಮ, ಬ್ಯಾಂಕ್, ವಿಮೆ ಮುಂತಾದೆಡೆ ಇದೆ.
ಬೆಂಗಳೂರಿನಲ್ಲಿ ‘ಕೇಂದ್ರ ಸಿಬ್ಬಂದಿ ಆಯ್ಕೆ ಸಮಿತಿ’ (ಸ್ಟಾಫ್ ಸೆಲೆಕ್ಷನ್ ಕಮೀಷನ್)ಯ ಪ್ರಾದೇಶಿಕ ಕಚೇರಿ ಇದೆ. ಅದರೆ, ಭಾರತದ ಎಲ್ಲ ಪ್ರದೇಶದವರು ಇಲ್ಲಿ ಪರೀಕ್ಷೆ ಬರೆಯಬಹುದು. ಆಯ್ಕೆಗೆ ಪರೀಕ್ಷೆ ಹಿಂದಿ, ಇಂಗ್ಲಿಷ್‌ಗಳಲ್ಲಿ ಮಾತ್ರ ನಡೆಯುತ್ತದೆ. ಕೆಲವು ಹುದ್ದೆಗಳಿಗೆ ಕನ್ನಡ ಭಾಷಾ ಜ್ಞಾನದ ಪರೀಕ್ಷೆ ಕಡ್ಡಾಯ ಎಂದಿದೆ. ಆದರೆ ಜನರ ನಡುವೆ ಕೆಲಸ ಮಾಡಬೇಕಾದ ‘ತೆರಿಗೆ ಸಂಗ್ರಾಹಕರು’ ಸಾರ್ವಜನಿಕ ಆರೋಗ್ಯ ಯೋಜನೆ ಅನುಷ್ಠಾ ಗೊಳಿಸುವ ಸಿಬ್ಬಂದಿ ಸೇರಿದಂತೆ ಜನ ಸಂಪರ್ಕ ಇರುವ ಇಲಾಖೆಗಳಿಗೂ ಕನ್ನಡ ಬಾರದವರೇ ಬರುತ್ತಿದ್ದಾರೆ. ಇಷ್ಟಾದರೂ ಹಿಂದಿ ಬಳಕೆ ಸಾಲದು ಎಂದು ಹಿಂದಿ ಬಳಕೆ ಹೆಚ್ಚಿಸುವ ಮತ್ತು ಜನಪ್ರಿಯಗೊಳಿಸುವ ಉದ್ದೇಶದಿಂದ ಪ್ರತಿ ವರ್ಷ ಸೆಪ್ಟಂಬರ್ 14 ರಂದು ‘ಹಿಂದಿ ದಿವಸ್’ ಆಚರಿಸುತ್ತದೆ. ಇಡೀ ಸೆಪ್ಟಂಬರ್ ತಿಂಗಳು ಹಿಂದಿ ಪ್ರಬಂಧ ಸ್ಪರ್ದೆ, ಚರ್ಚಾ ಸ್ಪರ್ದೆ, ನಾಟಕ, ಗೀತೆಗಳ ಸ್ಪರ್ದೆ ನಡೆದು ಸಾವಿರಾರು ರೂಗಳ ಬಹುಮಾನಗಳನ್ನು ನೀಡಿ ಜನರನ್ನು ಹಿಂದಿಯತ್ತ ಸೆಳೆಯವ ಕೆಲಸ ಆಗುತ್ತದೆ. ಹಿಂದಿಯನ್ನು ಬಳಸುವ ನೌಕರರಿಗೆ ಉತ್ತೇಜಕ ಭತ್ಯೆ ನೀಡಲಾಗುತ್ತಿದೆ. ಹಿಂದಿ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ 5000 ಕೋಟಿಗಿಂತ ಹೆಚ್ಚು ಖರ್ಚು ಮಾಡುತ್ತಿದೆ ಎಂಬ ಸುದ್ಧಿಯಿದೆ.
ಅಧಿಕಾರಕ್ಕಾಗಿ ಹಿಂದಿ ಜನರನ್ನು ಓಲೈಸಲು ಬಿಜೆಪಿ, ಕಾಂಗ್ರೆಸ್‌ನAತಹ ರಾಷ್ಟಿçÃಯ ಪಕ್ಷಗಳು ಇತರ ದೇಶಿಯ ಭಾಷೆಗಳನ್ನು ಕಡೆಗಣಿಸಿ ಹಿಂದಿಯನ್ನು ಹೇರಲು ಹೊರೆಟಿವೆ. ಹಿಂದಿಯನ್ನು ಹೇರಿ ದೇಶವನ್ನು ಚಿಂದಿ ಮಾಡಲು ಹೊರಟಿರುವುದನ್ನು ಎಲ್ಲ ರಾಷ್ಟ್ರಾಭಿಮಾನಿಗಳು ಖಂಡಿಸಬೇಕು. ಭಾರತದ ಸಂವಿಧಾನದಲ್ಲಿ ಭಾಷಾ ನೀತಿಯ ಬಗ್ಗೆ ಇರುವ ವಿಧಿಗಳನ್ನು ತಿದ್ದುಪಡಿ ಮಾಡಿ ದೇಶದ ಎಲ್ಲ ಭಾಷೆಗಳಿಗೆ(ಪರಿಚ್ಛೇದ-8ರಲ್ಲಿರುವ ಎಲ್ಲ ಭಾಷೆಗಳು) ಸಮಾನ ಗೌರವ, ಅವಕಾಶವಿರುವ ಹಾಗೆ ಮಾಡಬೇಕು. ವಿವಿಧತೆಗೆ ಧಕ್ಕೆತರುವ ಸೆಪ್ಟಂಬರ್ 14ರಂದು ಆಚರಿಸುವ ‘ಹಿಂದಿ ದಿವಸ್’ ಆಚರಣೆಯನ್ನು ನಿಲ್ಲಿಸಬೇಕು ಎಂದು ಕರ್ನಾಟಕ ಸರ್ಕಾರ ಕೇಂದ್ರಕ್ಕೆ ಪತ್ರ ಬರೆದು ಒತ್ತಾಯಿಸಬೇಕೆಂದು ಕನ್ನಡ ಗೆಳೆಯರ ಬಳಗ ಈ ಮೂಲಕ ಮಾನ್ಯ ಮುಖ್ಯಮಂತ್ರಿಗಳನ್ನು ಆಗ್ರಹಿಸುತ್ತದೆ.