ಈ ವ್ರತವು ಭಾದ್ರಪದ ಶುದ್ಧ ಚತುರ್ದಶಿಯ ದಿನ ಆಚರಿಸಲ್ಪಡುತ್ತದೆ. ಈ ವ್ರತ ಸಂಪ್ರದಾಯ ಇರುವವರ ಮನೆಯಲ್ಲಿ ಇರುತ್ತದೆ.ಇದು ದಂಪತಿಗಳು ಪೂಜಿಸುವ ವ್ರತ.ಸಾಮಾನ್ಯವಾಗಿ ಪ್ರ.ಮುಖ ವ್ರತಗಳು ದಂಪತಿಗಳು ಆಚರಿಸುವಂತದ್ದು.
ಅನಂತನ ವಸ್ತ್ರವು ಬಹಳ ಮುಖ್ಯ.ಇದನ್ನೂ ಫೋಟೋದಲ್ಲಿ ಕಾಣಬಹುದು
ಅನಂತ ಪದ್ಮನಾಭ ಸ್ವಾಮಿ ಮಹಾವಿಷ್ಣು ಅವತಾರ.ಸಾವಿರ ತಲೆಗಳುಳ್ಳ ಸರ್ಪದ ರೂಪ.ಅನಂತ ಎಂದರೆ ಎನಿಸಲು ಸಾಧ್ಯವಿಲ್ಲದ್ದು.ಹಾಗಾಗಿ ಈ ವ್ರತ ಆಚರಿಸಿದರೆ ಬರುವ ಫಲ ಅನಂತ ಎಂಬುದು ಎಲ್ಲರ ಅಭಿಪ್ರಾಯ.ಈ ವ್ರತವನ್ನು ಮದುವೆಯ ನಂತರ ದಂಪತಿಗಳಿಗೆ ಮೊದಲ ಬಾರಿ ಪೂಜಿಸಿ ವ್ರತ ಹಿಡಿಸುತ್ತಾರೆ.ನಂತರ ಪ್ರತಿ ವರುಷ ಆಚರಿಸಬೇಕು. ಈಗೆ ತಪ್ಪಿದರೆ ಈ ವ್ರತವನ್ನು ನವರಾತ್ರಿಯಲ್ಲಿ ಆಚರಿಸುವರು.ಪುರೋಹಿತರು ಬಂದು ಈ ವ್ರತ ಮಾಡಿಸುವುದು ರೂಡಿ.
ವ್ರತದ ದಿನ ಬೆಳಿಗ್ಗೆ ಮಂಗಳ ಸ್ನಾನ ಮಾಡಿ ದಂಪತಿಗಳು ಮಡಿ ವಸ್ತ್ರ ಧರಿಸುತ್ತಾರೆ.ಸ್ವಲ್ಪ ಈ ಹಬ್ಬಕ್ಕೆ ಮಾಡಿ ಜಾಸ್ತಿ.ಕಳಸ ಇಡುವ ಪೀಠಕ್ಕೆ ಅನಂತನ ರಂಗೋಲಿ ಎಂಬ ವಿಶೇಷ ರಂಗೋಲಿ ಬಿಡಿಸುತ್ತಾರೆ.ನಂತರ ಅದರ ಮೇಲೆ ತಟ್ಟೆಯಲ್ಲಿ ಎರಡು ಕಳಸ ಇಡುವರು.ಒಂದು ಯಮುನೆ ಇನ್ನೊಂದು ಅನಂತ.ಪೀಟಕ್ಕೆ ಬಾಳೆ ಕಂಬ ಮಾವಿನ ತೋರಣ ಕಟ್ಟುವರು.ಅನಂತಕುಂಡಲ ಎಂಬ ಹೂವೇ ಇರುವುದು.ಅದರಿಂದ ಈ ದಿನ ಪೂಜಿಸುವರು.
ಪೂಜೆಯು ಯಮುನೆ ತಂದು ಆರತಿ ಮಾಡಿ ಒಳಗೆ ತಂದು ಕಳಸದಲ್ಲಿ ಪ್ರತಿಸ್ತಾಪಿಸಲ್ಪಡುತ್ತದೆ.ನಂತರ ಯಮುನಾ ಪೂಜೆ ನಡೆಯುತ್ತದೆ.ನಂತರ ಅನಂತ ಪದ್ಮನಾಭ ಸ್ವಾಮಿಯ ಪ್ರತಿಷ್ಟಾಪನೆ ಹಾಗು ಷೋಡಶೋಪಚಾರ ಪೂಜೆ ನಡೆಯುತ್ತದೆ.ನಂತರ ಹಬ್ಬದಡುಗೆ, ಹೂರಣದ ಒಬ್ಬಟ್ಟು ನೈವೇದ್ಯ ಇಡಲಾಗುತ್ತದೆ.ಅನಂತನ ದಾರದ ಪೂಜೆಯು ಮುಖ್ಯ.ಪೂಜೆ ಸಂಪೂರ್ಣವಾದ ನಂತರ ಅನಂತನ ದಾರವನ್ನು ಸತಿ ಪತಿ ಗಳಿಬ್ಬರು ಧರಿಸಬೇಕು.ಇದು ನಮ್ಮ ದೇಹದ ಮೇಲೆ ಇರುವವರೆಗೆ ಮಡಿ ಮೈಲಿಗೆ ಆಚರಣೆ ಕಡ್ಡಾಯ. ಈ ದಾರವನ್ನು ಅಕಸ್ಮಾತ್ತಾಗಿ ಕಳೆದುಕೊಂಡರೆ ದಾರಿದ್ರ್ಯ ಬರುವುದು ಎನ್ನುವರು.ಹಾಗೆಯೇ ಅನಂತನ ವ್ರತ ಭಂಗ ಅಥವಾ ನಡೆಸದೆ ಇದ್ದರೂ ದಾರಿದ್ರ್ಯ ಬರುವುದು.ಅನಂತನಿಗೆ ಚಂದನ ಪೂಜೆ ಶ್ರೇಷ್ಠ ಎನ್ನುವರು.ಪೂಜೆಯ ನಂತರ ಪುರೋಹಿತರಿಗೆ ಉಪಯಣದಾನ ನೀಡುವರು.ಕೆಲವರು 14 ಒಬ್ಬಟ್ಟು ಕೂಡಾ ನೀಡುವರು.ಕೆಲವರು ಉಪಾಯನ ದಾನಕ್ಕೆ ಅಕ್ಕಿ ಬದಲಿಗೆ ಗೋಧಿ ನೀಡುವರು.
ಕೆಲವರ ಮನೆಯಲ್ಲಿ ಈ ದಿನ ಬ್ರಾಹ್ಮಣ ದಂಪತಿಗಳನ್ನು ಭೋಜನಕ್ಕೆ ಆಹ್ವಾನಿಸಿ ಮುತ್ತ್ಸಿದೆಗೆ ಮೊರದ ಬಾಗಿನ ನೀಡುವ ಸಂಪ್ರದಾಯ ಇದೇ.ಆನಂತನಿಗೆ 14 ವಿವಿಧ ಆರತಿ ಎತ್ತುವ ಪದ್ಧತಿ ಕೂಡ ಇದೆ.
ಸಂಜೆ ಅನಂತನ ಮಂಗಳಾರತಿ ಮಾಡಿ ಎಲ್ಲರಿಗೂ ತಾಂಬೂಲ ನೀಡುವರು. ಚರ್ಪು ಎಂದರೆ ಏನಾದರೂ ತಿನಿಸು , ಕೋಸಂಬರಿ, ಉಸಲಿ ಇತ್ಯಾದಿ ಸಂಜೆ ದೇವರಿಗೆ ನಿವೇದಿಸಿ ಹಂಚುವರು.ಅನಂತನ ಕಥೆ ಓದುವರು.ಅನಂತನ ಕಥೆಯೂ ಗುರುಚರಿತ್ರೆಯಲ್ಲಿ ಕೂಡಾ ಬರುವುದು.
ಮರುದಿನ ಅನಂತನಿಗೆ ಪೂಜೆ ನೆರವೇರಿಸಿ ನೈವೇದ್ಯ , ಸಿಹಿ ಮಾಡಿ ವಿಸರ್ಜನೆ ಮಾಡುವರು.ನಂತರ ಅನಂತನ ದಾರದ ವಿಸರ್ಜನೆ ಕೂಡಾ ಮಾಡುವರು.ಅಂದರೆ ಅದನ್ನು ಕೊರಳಿನಿಂದ ತೆಗೆದು ಹಾಲಲ್ಲಿ ನೆನೆಸಿ ಎತ್ತಿಡುವರು. ಈ ದಾರವನ್ನು ಹರಿಯುವ ನೀರಿನಲ್ಲಿ ವಿಸರ್ಜಿಸುವ ರೂಡಿ ಇದೆ.
ಹೀಗೆ 14 ವರುಷ ವ್ರತ ಆಚರಿಸಿದ ನಂತರ ಉದ್ಯಾಪನೆ ಮಾಡುವರು.14 ದಂಪತಿಗಳನ್ನು ಆಹ್ವಾನಿಸಿ ಮುತ್ತೈದೆಯರಿಗೆ ಮೊರದ ಬಾಗಿನ ನೀಡುವರು.ಭೋಜನ ಮಾಡಿಸುವರು.
ವೈಚಾರಿಕವಾಗಿ ನೋಡಿದರೆ ಅನಂತನ ಹಬ್ಬ ದಂಪತಿಗಳು ಆಚರಿಸುವ ಹಬ್ಬ.ದಂಪತಿಗಳನ್ನು ಅಹ್ವಾನಿಸುವ ಹಬ್ಬ.ಇದು ಸಂಸಾರದಲ್ಲಿ ಸತಿ ಪತಿ ಇಬ್ಬರ ಪ್ರಾಮುಖ್ಯತೆ ಹೇಳುತ್ತದೆ.ಉಳಿದಂತೆ ಆರತಿ, ಕಲಾ ನೈಪುಣ್ಯಕ್ಕೆ ,ಮನ್ಗಳಾರತಿಗೆ ಎಲ್ಲರನ್ನೂ ಕರೆಯುವುದು ಸಮಾಜದಲ್ಲಿ ಉತ್ತಮ ಭಾಗವಹಿಸುವಿಕೆಗೆ ಉತ್ತೇಜನ ನೀಡುತ್ತದೆ.ಚಂದನದ ಮರಗಳು ಸರ್ಪಗಳಿಗೆ ಆಶ್ರಯ ನೀಡುವುದರಿಂದ ಚಂದನದ ಅರ್ಪಣೆ ವಿಶೇಷ ಎನಿಸುತ್ತದೆ.ಚನ್ದಾನದ ಗಂಧ ತೆಗೆದು ತಟ್ಟೆಗೆ ಬಳಿದು ಆರತಿ ಕೂಡಾ ಕೆಲವರು ಮಾಡುತ್ತಾರೆ.
ಅನಂತ ಸಂಪತ್ತಿನ ದ್ಯೋತಕ.ಹಾಗಾಗಿ ಕೆಲವರು ಬೆಳ್ಳಿ ಚೊಂಬಿನಲ್ಲಿ ನವರತ್ನ ಗಳನ್ನು ಹಾಕಿ ಅದಕ್ಕೆ ಅನಂತನ ಕಳಸ ಇಡುವ ಪದ್ಧತಿ ಇದೆ.ಅನಂತನಿಗೆ ಅರ್ಪಿಸುವ ಹತ್ತಿಯ ಹಾರವು 14 ಸರಲು, 14 ಎಳೆ ಇರುವುದು.
ಈ ಲೇಖನ ಸ್ಮಾರ್ತ ಹೊಯ್ಸಳ ಕರ್ನಾಟಕ ಶಿವಮೊಗ್ಗ ಭಾಗದ ಆಚರಣೆ ತಿಳಿಸುತ್ತದೆ.ಉಳಿದಂತೆ ಬೇರೆ ಪಂಗಡಗಳಲ್ಲಿ ಹಿರಿಯರ ಸಂಪ್ರದಾಯದಂತೆ ಆಚರಿಸಲ್ಪಡುತ್ತದೆ.
ರಾಧಿಕಾ ಜಿ.ಎನ್
ಟೀವೀ ಹೋಸ್ಟ್
7019990492