ಜಾಲಹಳ್ಳಿ, ಬೆಂಗಳೂರು : ಬಿ.ಇ.ಎಲ್. ಪಬ್ಲಿಕ್ ಶಾಲೆಯ ಆವರಣದಲ್ಲಿ ವಿದ್ಯಾರಣ್ಯಪುರದ ರೋಟ್ರಾ ಕ್ಟ್ ಕ್ಲಬ್ಬಿನ ಸಹಯೋಗದೊಂದಿಗೆ ಗುರುವಾರ “ ಪರಿಸರ ಸ್ನೇಹಿ ಮಣ್ಣಿನ ಗಣೇಶ ತಯಾರಿಸುವ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಸುಮಾರು 200 ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದರು.
ಕಾರ್ಯಗಾರವನ್ನು ಗಣೇಶ ಸ್ತೋತ್ರವನ್ನು ಹಾಡುವುದರ ಮೂಲಕ ಪ್ರಾರಂಭಿಸಿದರು. ಬಿ.ಇ.ಎಲ್. ಪಬ್ಲಿಕ್ ಶಾಲೆಯ ಮುಖ್ಯೋಪಾಧ್ಯಾಯನಿ ಆದ ಶ್ರೀಮತಿ ಸ್ವಾತಿ. ಕೆ ಅವರು ಕಾರ್ಯಗಾರವನ್ನು ಉದ್ಘಾಟಿಸಿದರು.
ಅವರು ಮಕ್ಕಳಿಗೆ ಪರಿಸರ ಸ್ನೇಹಿ ಗಣಪತಿಗೂ ಹಾಗೂ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣಪತಿಗೂ ಇರುವ ವ್ಯತ್ಯಾಸಗಳು ಮತ್ತು ಅದರಿಂದ ಪರಿಸರಕ್ಕೆ ಉಂಟಾಗುವ ಹಾನಿಗಳ ಬಗ್ಗೆ ವಿವರಿಸಿದರು.
ರೋಟ್ರಾಕ್ಟ್ ಕ್ಲಬ್ಬಿನ ಶ್ರೀ ಪ್ರಜ್ವಲ್, ಶ್ರೀರೋಹನ್ ಹಾಗೂ ಶ್ರೀಮತಿ ಪೂರ್ಣಿಮಾ ಅವರು ಮಕ್ಕಳು ತಮ್ಮ ಪುಟಾಣಿ ಕೈಗಳಿಂದ ತಯಾರಿಸಿದ ಮಣ್ಣಿನ ಗಣೇಶ ಮೂರ್ತಿಯನ್ನು ಶ್ರೀಮತಿ ಸ್ವಾತಿ ಅವರಿಗೆ ನೀಡಿದರು.
ವಿಶೇಷವೇನೆಂದರೆ ಮಕ್ಕಳ ಜೊತೆ ಅವರ ಪೋಷಕರು ಸಹ ಪರಿಸರ ಸ್ನೇಹಿ ಗಣಪತಿಯನ್ನು ತಯಾರಿಸಿ ಸಂತೋಷ ಪಟ್ಟರು.