ನೃತ್ಯ ಕುಟೀರದ 20ನೇ ವರ್ಷದ ವಾರ್ಷಿಕೋತ್ಸವ: ನೃತ್ಯ ವಿಂಶತಿ ವಿಶೇಷ ಕಾರ್ಯಕ್ರಮ

varthajala
0

 ಬೆಂಗಳೂರಿನ ನೃತ್ಯ ಶಾಲೆ ನೃತ್ಯ ಕುಟೀರದ ದ ತನ್ನ 20ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ ನೃತ್ಯ ವಿಂಶತಿ ಎಂಬ ಕಾರ್ಯಕ್ರಮದಡಿಯಲ್ಲಿ ಹಿರಿಯ ವಿದ್ಯಾರ್ಥಿಗಳು ವೈವಿಧ್ಯಮಯ ನೃತ್ಯಗಳನ್ನು ಪ್ರಸ್ತುತಪಡಿಸಿದ್ದರು. 




ಗುರು ವಿದುಷಿ ದೀಪಾ ಭಟ್ ನೃತ್ಯ ಸಂಯೋಜನೆಯ ಅಷ್ಟಲಕ್ಷ್ಮಿ ನೃತ್ಯ ಹಾಗೂ ದಶಾವತಾರ ನೃತ್ಯ ರೂಪಕವು  ಕಲಾರಸಿಕರ ಮೆಚ್ಚುಗೆಗೆ ಪಾತ್ರವಾಯಿತು. ಕಲಾಕ್ಷಿತಿ  ನೃತ್ಯ ಶಾಲೆಯ ಶ್ರೀಮತಿ ರುಕ್ಮನಾರಾಯಣ್ ಹಾಗೂ ನಿರ್ಮಿತಿ ಕಲಾ ಶಾಲೆಯ ಗುರು ಶ್ರೀಮತಿ ದ್ವರಿತಾ ವಿಶ್ವನಾಥನ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. 

ನೃತ್ಯ ವಿಂಶತಿ ಕಾರ್ಯಕ್ರಮ ದಲ್ಲಿ ಆಹ್ವಾನಿತ ತಂಡ ಕಲಾಕ್ಷಿತಿಯಿಂದ ಅಷ್ಟಪದಿ, ಶಿವ ಸ್ತುತಿ ಹಾಗೂ ನಿರ್ಮತಿ ತಂಡದಿಂದ ಅಖಂಡ ಭಾರತಂ ಸ್ಮರೇತ್ ವಿಭಿನ್ನ ನೃತ್ಯ ರೂಪಕ ನೆರದಿದ್ದ ಪ್ರೇಕ್ಷಕರ ಮನರಂಜಿಸಿತು.

Post a Comment

0Comments

Post a Comment (0)