ಶ್ರೀ ಮಹೇಶ್ವರಿ ದೇವಸ್ಥಾನದಲ್ಲಿ 113ನೇ ಶರನ್ನವರಾತ್ರೋತ್ಸವ

varthajala
0

ಬೆಂಗಳೂರು : ಮಲ್ಲೇಶ್ವರದ ಸಂಪಿಗೆ ರಸ್ತೆಯ 8ನೇ ತಿರುವಿನಲ್ಲಿರುವ ಶ್ರೀ ಮಹೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ಅಕ್ಟೋಬರ್ 3 ರಿಂದ 12ರ ವರೆಗೆ 113ನೇ ಶರನ್ನವರಾತ್ರೋತ್ಸವ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಇದರ ಅಂಗವಾಗಿ ಉತ್ಸವದ ಎಲ್ಲಾ ದಿನಗಳಲ್ಲೂ ದೇವಿಗೆ ವಿಶೇಷ ಅಲಂಕಾರ ಇರುತ್ತದೆ.

ಸಾಂಸ್ಕೃತಿಕ ಕಾರ್ಯಕ್ರಮಗಳು : ಪ್ರತಿದಿನ ಸಂಜೆ 6-30ಕ್ಕೆ :- ಅಕ್ಟೋಬರ್ 3 - ವಿದ್ವಾನ್ ಶ್ರೀಧರ್ ಸಾಗರ್ ಮತ್ತು ಸಂಗಡಿಗರಿಂದ "ಸ್ಯಾಕ್ಸೋಫೋನ್" ವಾದನ, ಅಕ್ಟೋಬರ್ 4 - ಅನನ್ಯ ತರಂಗ ಶಾಲೆಯ ವಿದ್ಯಾರ್ಥಿಗಳಿಂದ "ಭರತನಾಟ್ಯ", ಅಕ್ಟೋಬರ್ 5 - ಪ್ರಣವಾಂಜಲಿ ಅಕಾಡೆಮಿ ಫಾರ್ ಪಫಾ೯ಮಿಂಗ್ ಆಟ್ಸ್೯ ನ ವಿದ್ಯಾರ್ಥಿಗಳಿಂದ "ಭರತನಾಟ್ಯ" (ನಿರ್ದೇಶನ : ವಿದುಷಿ ಶ್ರೀಮತಿ ಪವಿತ್ರ ಪ್ರಶಾಂತ್. ಅಕ್ಟೋಬರ್ 6 - ಪದ್ಮಪ್ರಿಯಾ ನೃತ್ಯ ಕಲಾ ಅಕಾಡೆಮಿಯ ವಿದ್ಯಾರ್ಥಿಗಳಿಂದ "ನೃತ್ಯಾಂಜಲಿ" (ನಿರ್ದೇಶನ : ವಿದುಷಿ ಶ್ರೀಮತಿ ಉಷಾ ಬಸಪ್ಪ). ಅಕ್ಟೋಬರ್ 7 - ಶ್ರೀಮತಿ ವಾಣಿ ಸುಂದರೇಶ್ ಮತ್ತು ಶಿಷ್ಯವೃಂದದವರಿಂದ "ಸಂಗೀತ ಮತ್ತು ನೃತ್ಯ".  ಅಕ್ಟೋಬರ್ 8 - ಲಲಿತ ಕಲಾ ಸಂಘದವರಿಂದ "ಸಂಗೀತ ಮತ್ತು ನೃತ್ಯ". ಅಕ್ಟೋಬರ್ 9 - ಗಾನಪ್ರಿಯ ಮ್ಯೂಸಿಕ್ ಅಕಾಡೆಮಿಯ ಶಿಕ್ಷಕ ಮತ್ತು ವಿದ್ಯಾರ್ಥಿಗಳಿಂದ "ಭರತನಾಟ್ಯ" ಮತ್ತು "ಸಂಗೀತ".  ಅಕ್ಟೋಬರ್ 10 - ಪುಷ್ಪಲತಾ ಕಲಾ ಶಾಲೆ ಇವರಿಂದ "ಭರತನಾಟ್ಯ". ಅಕ್ಟೋಬರ್ 11 - ಶ್ರೀಮತಿ ಅರ್ಚನಾ ಭಟ್ ಇವರಿಂದ "ನೃತ್ಯ ವೈವಿಧ್ಯ". ಅಕ್ಟೋಬರ್ 12 - ಸಮಾರೋಪ ಸಮಾರಂಭ.

Post a Comment

0Comments

Post a Comment (0)