ಮಂಗಳೂರು ವಿಶ್ವವಿದ್ಯಾನಿಲಯದ ಎಲ್ಲಾ ಪದವಿ ಕೋರ್ಸ್‍ಗಳ ಫಲಿತಾಂಶ ಪ್ರಕಟ

varthajala
0

 ಬೆಂಗಳೂರು (ಕರ್ನಾಟಕ ವಾರ್ತೆ): ಮಂಗಳೂರು ವಿಶ್ವವಿದ್ಯಾನಿಲಯದ ಜೂನ್/ಜುಲೈ 2024 ರಲ್ಲಿ ನಡೆಸಿದ ಎಲ್ಲಾ ಪದವಿ ಕೋರ್ಸ್‍ಗಳ ದ್ವಿತೀಯ, ಚತುರ್ಥ ಮತ್ತು ಆರನೇ ಸೆಮಿಸ್ಟರ್‍ನ ಪರೀಕ್ಷೆಗಳು ದಿನಾಂಕ 24.06.2024 ರಂದು ಪ್ರಾರಂಭಗೊಂಡು ದಿನಾಂಕ 31.07.2024 ಮುಕ್ತಾಯಗೊಂಡಿರುತ್ತದೆ. ಈ ಪರೀಕ್ಷೆಗಳ ವಿವಿಧ ವಿಷಯಗಳ ಮೌಲ್ಯಮಾಪನವು ದಿನಾಂಕ 22.07.2024 ರಂದು ಪ್ರಾರಂಭಗೊಂಡು ನಾಲ್ಕು ಮೌಲ್ಯಮಾಪನ ಕೇಂದ್ರಗಳಲ್ಲಿ ದಿನಾಂಕ 14.08.2024 ರಂದು ಮುಕ್ತಾಯಗೊಂಡಿರುತ್ತದೆ. ಮೌಲ್ಯಮಾಪನ ಪೂರ್ಣಗೊಳಿಸಿದ ಬಿ.ಎ, ಬಿ.ಎಸ್ಸಿ, ಬಿ.ಕಾಂ, ಬಿ.ಎಸ್.ಡಬ್ಲ್ಯೊ, ಬಿ.ಸಿ.ಎ. ಬಿ.ಬಿ.ಎ, ಬಿ.ಎಸ್ಸಿ (ಎಫ್‍ಎನ್‍ಡಿ) / ಬಿ.ಎಸ್ಸಿ (ಎನಿಮೇಶನ್ ಮತ್ತು ವಿಜುವಲ್ ಇಫೆಕ್ಟ್ / ಬಿ.ಎಸ್ಸಿ (ಫುಡ್ ಟೆಕ್ನಾಲಾಜಿ), ಬಿ.ಎಸ್ಸಿ (ಹೊಂಸೈನ್ಸ್), ಬಿ.ಎ (ಹೆಚ್‍ಆರ್‍ಡಿ) / ಬಿ.ಎಸ್ಸಿ (ಫ್ಯಾಶನ್ ಡಿಸೈನ್) / ಬಿ.ಎಸ್ಸಿ (ಐಡಿ&ಡಿ) / ಬಿ.ವಿ.ಎ ಕಾರ್ಯಕ್ರಮಗಳ ಫಲಿತಾಂಶವನ್ನು ಆಗಸ್ಟ್ 17 ರಂದು ಯು.ಯು.ಸಿ.ಎಂ.ಎಸ್.ನ ಅಧಿಕೃತ ವೆಬ್ ಸೈಟ್ www.ucms.karnataka.gov.in  ಮೂಲಕ ಪ್ರಕಟಿಸಲಾಗಿದೆ. ಎಲ್ಲಾ ಪದವಿಗಳ ದ್ವಿತೀಯ ಮತ್ತು ಚತುರ್ಥ ಸೆಮಿಸ್ವರ್‍ಗಳ ಹಾಗೂ ಬಿ.ಹೆಚ್.ಎಂ, ಬಿ.ಎಸ್ಸಿ (ಹೆಚ್‍ಎಸ್) ಮತ್ತು ಬಿ.ಎ (ಎಸ್‍ಎಲ್‍ಪಿ) ಹಾಗೂ ನಾನ್ ಎನ್.ಇ.ಪಿ ಕಾರ್ಯಕ್ರಮಗಳ ಪುನರಾವರ್ತಿತ ವಿದ್ಯಾರ್ಥಿಗಳ ಫಲಿತಾಂಶವನ್ನು ಶೀಘ್ರದಲ್ಲಿ ಪ್ರಕಟಿಸಲಾಗುವುದು.

ಮಂಗಳೂರು ವಿಶ್ವವಿದ್ಯಾನಿಲಯವು ಈ ಬಾರಿ ಮೌಲ್ಯಮಾಪನ ಕೇಂದ್ರದಲ್ಲಿಯೇ ಅಂಕತ:ಖೀಕರಣ ದಾಖಲಿಸುವ ಪ್ರಕ್ರಿಯೆಯನ್ನು ಆನ್ ಲೈನ್ ವ್ಯವಸ್ಥೆ ಮೂಲಕ ಸಂಪೂರ್ಣವಾಗಿ ಗಣಕೀಕರಣಗೊಳಿಸಿದ್ದರಿಂದ ಮೌಲ್ಯಮಾಪನ ಮುಗಿದ ಮೂರು ದಿನಗಳಲ್ಲಿಯೇ ಮತ್ತು ಪರೀಕ್ಷೆಗಳು ಪೂರ್ಣಗೊಂಡ 17 ದಿನಗಳಲ್ಲಿ ಫಲಿತಾಂಶಗಳನ್ನು ಪ್ರಕಟಿಸಲು ಸಾಧ್ಯವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Post a Comment

0Comments

Post a Comment (0)