ಉದ್ಯಮ ವಲಯದ ದಂತ ಕಥೆ ರತನ್ ಟಾಟಾ ಅವರಿಗೆ ಬೆಂಗಳೂರಿನ ಅನುವ್ರತ್ ವಿಶ್ವ ಭಾರತಿ ಸೊಸೈಟಿಯಿಂದ ಅನುವ್ರತ್ ಪ್ರಶಸ್ತಿ ಪ್ರದಾನ

varthajala
0

 ಬೆಂಗಳೂರುಅನುವ್ರತ್ ವಿಶ್ವ ಭಾರತಿ ಸಂಸ್ಥೆಯಿಂದ 2023  ಸಾಲಿನ ಪ್ರತಿಷ್ಠಿತ ಅನುವ್ರತ್ ಪ್ರಶಸ್ತಿಯನ್ನು ಕೈಗಾರಿಕಾ ವಲಯದ ದಂತಕಥೆ, ಸಮಾಜ ಸೇವಕ ರತನ್ ಟಾಟಾ ಅವರಿಗೆ ಮುಂಬೈನ ಅವರ ನಿವಾಸದಲ್ಲಿ ಪ್ರದಾನ ಮಾಡಲಾಯಿತು ಅನುಕ್ತ ವಿಶ್ವ ಭಾರತಿ ಸೊಸೈಟಿಯ ಅಧ್ಯಕ್ಷ ಅವಿನಾಶ್ ನಹರ್ ಅವರು ಸ್ಮರಣಿಕೆ, ಪ್ರಮಾಣ ಪತ್ರ ಮತ್ತು 1.51 ಲಕ್ಷ ರೂ ನಗದು ಬಹುಮಾನ ನೀಡಿ ಗೌರವಿಸಿದರು.              ಸಂದರ್ಭದಲ್ಲಿ ಅನುವಿಭಾದ ಪ್ರಧಾನ ಕಾರ್ಯದರ್ಶಿ ಭಿಖಂ ಸುರಾನಾ, ಮುಂಬೈ ಕಸ್ಟಮ್ ಕಮಿಷನರ್ ಅಶೋಕ್ ಕುಮಾರ್ ಕೊಠಾರಿ, ಅನುವಿಭಾ ಉಪಾಧ್ಯಕ್ಷ ವಿನೋದ್ ಕುಮಾರಿ ಮತ್ತು ಜಂಟಿ ಕಾರ್ಯದರ್ಶಿ ಮನೋಜ್ ಸಿಂಘ್ವಿ ಮತ್ತಿತರರು ಉಪಸ್ಥಿತರಿದ್ದರು.

 



ಅನುವಿಮಾ ಅಧ್ಯಕ್ಷ ನಹರ್  ಮಾತನಾಡಿಮನುಕುಲಕ್ಕೆ ರತನ್ ಟಾಟಾ  ಸಕಾರಾತ್ಮಕ ಕೊಡುಗೆ ನೀಡಿದ್ದಾರೆಜಗತ್ತಿನಲ್ಲಿ ಅವರು ಮಾನವೀಯತೆಯ ಅತ್ಯುತ್ತಮ ಉದಾಹರಣೆಯಾಗಿದ್ದಾರೆ ಎಂದರು.                     ಅನುಚತ ಅನುಶಸ್ತ ಆಚಾರ್ಯ  ಮಹಾಶ್ರಮನ್ ಮಾತನಾಡಿರತನ್ ಟಾಟಾ ಅವರಿಗೆ ಮತ್ತಷ್ಟು ಮಾನವೀಯ ಸೇವೆ ಸಲ್ಲಿಸಲು ದೇವರು ಉತ್ತಮ ಆರೋಗ್ಯ ಕರುಣಿಸಲಿ ಎಂದು ಹಾರೈಸಿದರು.

                                                    

 ಆಚಾರ್ಯ ತುಳಸಿ ಅವರು ಆರಂಭಿಸಿದ  ಆಂದೋಲನವು ವಿಶ್ವಸಂಸ್ಥೆಯಲ್ಲೂ ತನ್ನ ವಿಶೇಷ ಗುರುತನ್ನು ಮೂಡಿಸಿದೆಇದುವರೆಗೆ ಅನುವ್ರತ ಪ್ರಶಸ್ತಿಯು ಜೈನೇಂದ್ರ ಕುಮಾರ್ಶಿವಾಜಿ ಮೇರೆಶಿವರಾಜ್ ಪಾಟೀಲ್ನಿತೀಶ್ ಕುಮಾರ್ಡಾ.ಪಿ.ಜೆಅಬ್ದುಲ್ ಕಲಾಂಡಾಮನೋಹನ್ ಸಿಂಗ್ಟಿ.ಎನ್ಶೇಷನ್ಪ್ರಕಾಶ್ ಆಮ್ಟೆ ಮತ್ತಿತರರಿಗೆ ಸಂದಿದೆ.


Post a Comment

0Comments

Post a Comment (0)