ಬೆಂಗಳೂರು ನಗರ ವಿಶ್ವವಿದ್ಯಾಲಯದ ಜಾಗತಿಕ ಭಾಷೆಗಳ ಅಧ್ಯಯನ ಕೇಂದ್ರದಿಂದ ವಿದೇಶಿ ಭಾಷೆಗಳ ಕಲಿಕೆಗೆ ಅವಕಾಶ

varthajala
0

 ಬೆಂಗಳೂರು (ಕರ್ನಾಟಕ ವಾರ್ತೆ): ಬೆಂಗಳೂರು ನಗರ ವಿಶ್ವವಿದ್ಯಾಲಯದ ಜಾಗತಿಕ ಭಾಷೆಗಳ ಅಧ್ಯಯನ ಕೇಂದ್ರದಿಂದ ಫ್ರೆಂಚ್, ಜರ್ಮನ್, ಸ್ಪ್ಯಾನಿಷ್, ಜಪಾನೀಸ್, ಕೊರಿಯನ್, ಚೈನೀನ್, ಇಟಾಲಿಯನ್, ಪೋರ್ಚುಗೀಸ್ ಭಾಷಾ  ತರಗತಿಗಳು ಆರಂಭವಾಗುತ್ತಿದ್ದು, ದ್ವಿತೀಯ ಪಿಯುಸಿ ಅಥವಾ ಸಮಾನಂತರ ಶಿಕ್ಷಣದಲ್ಲಿ ಪಾಸಾಗಿರುವವರು ಅರ್ಜಿ ಸಲ್ಲಿಸಬಹುದು.



ಉನ್ನತ ಶಿಕ್ಷಣ ಇಲಾಖೆಯ ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ನಿರ್ವಹಣಾ ವ್ಯವಸ್ಥೆ (ಯುಯುಸಿಎಂಎಸ್) ಅಡಿ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಪ್ರವೇಶ ಪಡೆಯಬಹುದು. ಪ್ರತಿಯೊಂದು ಭಾಷಾ ಕೋರ್ಸಿಗೆ 1 ವರ್ಷದ ಸರ್ಟಿಫಿಕೇಟ್ ಕೋರ್ಸು, 1 ವರ್ಷದ ಯುಜಿ ಡಿಪ್ಲೊಮಾ  ಕೋರ್ಸ್ ಹಾಗೂ 1 ವರ್ಷದ ಪಿಜಿ ಡಿಪ್ಲೊಮಾ ಕೋರ್ಸ್ ವ್ಯಾಸಂಗದ ಅವಧಿಯಲ್ಲ್ಲಿ ಸರ್ಟಿಫಿಕೇಟ್ ನೀಡಲಾಗುತ್ತದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ  080-29572019 / 9353251761ಗೆ ಕರೆ ಮಾಡಬಹುದು. ಅಥವಾ ವಿವಿಯ ಜಾಲತಾಣ www.bcu.ac.in ಗೆ ಭೇಟಿ ನೀಡಬಹುದು ಎಂದು ಬೆಂಗಳೂರು ನಗರ ವಿಶ್ವವಿದ್ಯಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.

The Centre for Global Languages (CGL), Bengaluru City University, is offering foreign language courses on weekends (hybrid mode is also available).
Admissions are open for French, German, Spanish, Japanese, Korean, Chinese, Italian and Portuguese language courses under UUCMS. For each language course, 1-Year Certificate Course (A1 & A2), 1-Year UG Diploma (B1-Higher Diploma) and 1-Year PG Diploma (B2-Advance Diploma) levels are being offered. The eligibility is pass in 12 th Std or 2 nd PUC or equivalent. For further details, contact CGL at 080-29572019/ 93532 51761/ 80955 88190 or mail to cgl.bcu@gmail.com  Updates are available on the university website www.bcu.ac.in

Post a Comment

0Comments

Post a Comment (0)