ಮಾನವ ಆನೆ ಸಂಘರ್ಷದ ಕುರಿತು ಅಂತರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

varthajala
0

 ಬೆಂಗಳೂರು (ಕರ್ನಾಟಕ ವಾರ್ತೆ): ಮಾನವ ಆನೆ ಸಂಘರ್ಷದ ಕುರಿತು ಅಂತರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ವಿಶ್ವ ಆನೆ ದಿನ, ಆನೆಗಳ ನೈಸರ್ಗಿಕ ಆವಾಸಸ್ಥಾನಗಳ ಸಂರಕ್ಷಣೆಯ ಮಹತ್ವವನ್ನು ಮತ್ತು ಆ ಮೂಲಕ ಆನೆಗಳ ಉಳಿವನ್ನು ಖಚಿತಪಡಿಸುವ ಮಹತ್ವವನ್ನು ನಮಗೆ ನೆನಪಿಸುತ್ತದೆ.  ಮಾನವ-ಆನೆ ಸಂಘರ್ಷ ಕಡಿಮೆ ಮಾಡುವ ನಿಟ್ಟಿನಲ್ಲಿ ವಿಶ್ವ ಆನೆ ದಿನ ಪೂರಕವಾಗಲಿ ಎಂದು ತಿಳಿಸಿದರು.


ಈ ಸಮ್ಮೇಳನ ಮಾನವ-ಆನೆ ಸಂಘರ್ಷ, ಇದರಿಂದಾಗು ನೈಸರ್ಗಿಕ,ಸಾಮಾಜಿಕ ಹಾಗೂ ಆರ್ಥಿಕ ಪರಿಣಾಮಗಳ ಬಗ್ಗೆ ಪರಸ್ಪರ ವಿಚಾರವಿನಿಮಯಕ್ಕೆ, ಈ ಸಮಸ್ಯೆಗೆ  ಅಂತರರಾಷ್ಟ್ರೀಯ ಸಹಯೋಗದೊಂದಿಗೆ ವೈಜ್ಞಾನಿಕ ಪರಿಹಾರಗಳನ್ನು ಅನ್ವೇಷಿಸುವ ನಿರ್ಣಾಯಕ ವೇದಿಕೆಯಾಗಿದೆ. ಜನರು ಸಾವಿರಾರು ವರ್ಷಗಳಿಂದ ಆನೆಗಳೊಂದಿಗೆ ಸಹಬಾಳ್ವೆ ನಡೆಸುತ್ತಿದ್ದಾರೆ. ಆದರೆ ಪರಸ್ಪರ ವಾಸಿಸುತ್ತಿರುವ ಗಡಿಗಳು, ಅಭಿವೃದ್ಧಿ ಚಟುವಟಿಕೆಗಳು, ಹವಾಮಾನ ಮತ್ತು ನೈಸರ್ಗಿಕ ಸಂಪನ್ಮೂಲಗಳು ಬದಲಾಗುತ್ತಿರುವ ಕಾರಣ, ಮಾನವ ಮತ್ತು ಆನೆಗಳ ಮೇಲೆ ಒತ್ತಡ ಹೆಚ್ಚಾಗುತ್ತಿದೆ.

ನಗರೀಕರಣ, ಕೃಷಿ, ಅರಣ್ಯ ನಾಶ, ಹೆದ್ದಾರಿಗಳು ಅಥವಾ ಗಣಿಗಾರಿಕೆಯಂತಹ ಕೈಗಾರಿಕಾ ಬೆಳವಣಿಗೆಯಿಂದ ಆನೆಗಳು ತಮ್ಮ ಆವಾಸಸ್ಥಾನಗಳನ್ನು ಕಳೆದುಕೊಂಡಿವೆ. ಬೇಲಿಗಳು ಮತ್ತು ರೈಲು ಹಳಿಗಳಂತಹ ಅಡೆತಡೆಗಳಿಂದಾಗಿ ಆನೆಗಳು ಬಹುದೂರ ಪಯಣಿಸುವ ಆ ಮೂಲಕ ಅಪಾಯಗಳಿಗೆ ಸಿಲುಕುವ ಸಾಧ್ಯತೆಗಳೂ ಹೆಚ್ಚಾಗುತ್ತಿವೆ. ಈ ಹಿಂದೆ ಆನೆಗಳು ವಿಹರಿಸುತ್ತಿದ್ದ ಭೂ ಪ್ರದೇಶ,  ಈಗ ಮಾನವ ಕೃಷಿಯ ನೆಲೆಯಾಗಿದೆ  ಮತ್ತು ಅವುಗಳು ತಮ್ಮ ನೀರನ್ನು ಅರಿಸಿ ಬರುತ್ತಿರುವುದರಿಂದ ಗ್ರಾಮಸ್ಥರಿಗೆ ಅಪಾಯ ಎದುರಾಗುವ ಸಾಧ್ಯತೆಗಳನ್ನು ಹೆಚ್ಚಿಸಿದೆ ಎಂದು ತಿಳಿಸಿದರು

ಹವಾಮಾನ ಬದಲಾವಣೆಯು ತಾಪಮಾನ ಹೆಚ್ಚಳ ಮತ್ತು ಮಳೆಯ ಪ್ರಮಾಣದ ಬದಲಾವಣೆಯಿಂದಾಗಿ  ಆನೆಗಳಿಗೆ ಸಂಪನ್ಮೂಲಗಳು ಇನ್ನಷ್ಟು ವಿರಳವಾಗಿವೆ. ಅವುಗಳು ಆಹಾರ ಅರಸಿ ಸಮುದಾಯ ಭೂಮಿಗಳು ಸೇರಿದಂತೆ ಹೊಸ ಪ್ರದೇಶಗಳಿಗೆ ಹೋಗಬೇಕಾಗುವ ಪರಿಸ್ಥಿತಿ ಎದುರಾಗಿದೆ. ಮಾನವರು ಸಹ ತಮ್ಮದೇ ಆದ ಅನಿವಾರ್ಯತೆಗಳಿಂದಾಗಿ, ನೀರು ಅಥವಾ ಉರುವಲು ಸಂಗ್ರಹಣೆಗಾಗಿ ಆನೆ ವಾಸ ಪ್ರದೇಶಕ್ಕೆ ಪ್ರವೇಶಿಸುತ್ತಾರೆ.  ಆನೆ ಮತು ಮಾನವ ಈ ಈ ಸ್ಪರ್ಧೆಯು ಜನರು ಮತ್ತು ವನ್ಯಜೀವಿಗಳಿಗೆ ಇಬ್ಬರಿಗೂ ಜೀವಬೆದರಿಕೆಯನ್ನು ಒಡ್ಡುತ್ತಿವೆ. ನಮ್ಮ ದೇಶದಲ್ಲಿ2017 ರ ಜನಗಣತಿಯ ಪ್ರಕಾರ ಸುಮಾರು 30ಸಾವಿರ ಆನೆಗಳಿದ್ದು, ಇದು  ಜಾಗತಿಕವಾಗಿ  ಅತಿದೊಡ್ಡ ಸಂಖ್ಯೆಯಾಗಿದೆ. ಕರ್ನಾಟಕದಲ್ಲಿ 6,395ಆನೆಗಳಿದ್ದು, ಅತಿ ಹೆಚ್ಚು ಆನೆಗಳನ್ನು ಹೊಂದಿರುವ ರಾಜ್ಯವಾಗಿದೆ, ಇದು ರಾಷ್ಟ್ರದ ಒಟ್ಟು ಆನೆಗಳ ಸಂಖ್ಯೆಯ ಸರಿಸುಮಾರು 25% ರಷ್ಟಿದೆ.
                          
ಅಖಿಲ ಭಾರತ ಹುಲಿ ಅಂದಾಜು 2022 ರ ಪ್ರಕಾರ 563 ಹುಲಿಗಳನ್ನು ಕರ್ನಾಟಕ ಹೊಂದಿದ್ದು, ದೇಶದಲ್ಲೇ ಎರಡನೇ ಅತಿ ಹೆಚ್ಚು ಹುಲಿಗಳಿಗೆ ನೆಲೆಯಾಗಿರುವ  ರಾಜ್ಯವಾಗಿದೆ. ಹೆಚ್ಚಿನ ಸಂಖ್ಯೆಯ ದೊಡ್ಡ ಸಸ್ತನಿಗಳು ಮತ್ತು ಬಲಿಷ್ಠ ಪರಭಕ್ಷಕಗಳನ್ನು ರಾಜ್ಯ ಹೊಂದಿದ್ದು, ಸಸ್ಯಹಾರಿ ಮತ್ತು ಇತರ ಅರಣ್ಯ ಸಂಪನ್ಮೂಲಗಳ ಆರೋಗ್ಯಕರ ಸಂಖ್ಯೆಯನ್ನು ಸೂಚಿಸುತ್ತವೆ. ರಾಜ್ಯದ ಶ್ರೀಮಂತ ಅರಣ್ಯ ಸಂಪತ್ತಿನ  ಹಿಂದೆ, ಕಳೆದ ಕೆಲವು ದಶಕಗಳಿಂದ ಅರಣ್ಯ ಇಲಾಖೆಯು ಕೈಗೊಂಡ ಸಂರಕ್ಷಣಾ ಚಟುವಟಿಕೆಗಳು ಕಾರಣವಾಗಿದೆ.

ಕರ್ನಾಟಕವು ಮೈಸೂರು ಆನೆ ಮೀಸಲು ಪ್ರದೇಶ ಮತ್ತು ದಾಂಡೇಲಿ ಆನೆ ಮೀಸಲು ಪ್ರದೇಶ ಎಂಬ ಎರಡು ಪ್ರಮುಖ ಆನೆ ಮೀಸಲು ಪ್ರದೇಶಗಳನ್ನು ಹೊಂದಿದೆ. ಒಟ್ಟಾರೆಯಾಗಿ, 10ಸಾವಿರ ಚದರ ಕಿಲೋಮೀಟರ್‍ಗಿಂತಲೂ ಹೆಚ್ಚು ಪ್ರದೇಶವನ್ನು ಆವರಿಸಿರುವ ಈ ಮೀಸಲು ಪ್ರದೇಶಗಳು  ನಮ್ಮ ಆನೆಗಳ ಜನಸಂಖ್ಯೆ ಮತ್ತು ಅವುಗಳ ಆವಾಸಸ್ಥಾನಗಳನ್ನು ಸಂರಕ್ಷಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಆದಾಗ್ಯೂ, ಅಭಿವೃದ್ಧಿಯ ಒತ್ತಡಗಳು ಮತ್ತು ಅರಣ್ಯ ಪ್ರದೇಶಗಳ ಚದುರುವಿಕೆಯಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳವನ್ನು  ಕಂಡಿದೆ.

ಕರ್ನಾಟಕದ ಆನೆಗಳ ಸಂಖ್ಯೆ ಗಮನಾರ್ಹವಾಗಿರುವುದರಿಂದ ಮಾನವ-ಆನೆ ಸಂಘರ್ಷದ ಅನಿವಾರ್ಯ ಸವಾಲು ಎದುರಾಗುವುದು ಸಹಜ. ಕಳೆದ 10 ವರ್ಷಗಳಲ್ಲಿ, ರಾಜ್ಯವು ಮಾನವ-ಆನೆ ಸಂಘರ್ಷದ 2,500 ಕ್ಕೂ ಹೆಚ್ಚು ಘಟನೆಗಳನ್ನು ವರದಿ ಮಾಡಿದ್ದು,  350 ಕ್ಕೂ ಹೆಚ್ಚು ಜನರ ಸಾವುಗಳು ಮತ್ತು ಗಣನೀಯ ಪ್ರಮಾಣದ ಬೆಳೆ ನಷ್ಟವಾಗಿದೆ. ಈ ಸಮಸ್ಯೆಯು ನಮ್ಮ ರಾಜ್ಯಕ್ಕೆ ಮಾತ್ರ ಸೀಮಿತವಾಗಿಲ್ಲ. ಗಣನೀಯ ಆನೆಗಳ ಜನಸಂಖ್ಯೆಯನ್ನು ಹೊಂದಿರುವ ಬಹುತೇಕ ಎಲ್ಲಾ ಪ್ರದೇಶಗಳೂ ಈ ಸಮಸ್ಯೆಯನ್ನು ಎದುರಿಸುತ್ತಿವೆ. ಇಂದಿನ ಚರ್ಚೆಗಳು ನಾವು ಈ ಸಂಘರ್ಷಗಳನ್ನು ಪರಿಣಾಮಕಾರಿಯಾಗಿ ಮತ್ತು ಸಮರ್ಥನೀಯವಾಗಿ ಹೇಗೆ ಪರಿಹರಿಸಬಹುದು ಎಂಬುದರ ಮೇಲೆ ಕೇಂದ್ರೀಕರಿಸುತ್ತವೆ.
                                
ಈ ಸಮಸ್ಯೆಯ ತೀವ್ರತೆಯನ್ನು ಗುರುತಿಸಿ, ಕರ್ನಾಟಕವು ನಿರ್ದಿಷ್ಟವಾಗಿ ಮಾನವ-ವನ್ಯಜೀವಿ ಸಂಘರ್ಷಗಳನ್ನು ಪರಿಹರಿಸಲು ಮೀಸಲಾದ ಬಜೆಟ್ ಹೆಡ್ ಅನ್ನು ನಿಗದಿಪಡಿಸಿದೆ. ವಾರ್ಷಿಕವಾಗಿ, ಮಾನವ-ಆನೆ ಸಂಘರ್ಷಗಳನ್ನು ತಗ್ಗಿಸಲು ₹150 ಕೋಟಿಗೂ ಹೆಚ್ಚು ಹಣವನ್ನು ವೆಚ್ಚ ಮಾಡಲಾಗುತ್ತಿದೆ. ಈ ಅನುದಾನವನ್ನು, 300 ಕಿಲೋಮೀಟರ್‍ಗಿಂತಲೂ ಹೆಚ್ಚು ರೈಲ್ವೇ ಬ್ಯಾರಿಕೇಡ್‍ಗಳು, 800 ಕಿಲೋಮೀಟರ್‍ಗಳಷ್ಟು ವ್ಯಾಪಿಸಿರುವ ಸೌರ ಬೇಲಿಗಳು, ಸೌರ ಟೆಂಟಕಲ್ ಬೇಲಿಗಳು ಮತ್ತು ಆನೆ ತಡೆ ಕಂದಕಗಳನ್ನು ನಿರ್ಮಿಸಲು ಬಳಸಲಾಗುತ್ತಿದೆ. ಕರ್ನಾಟಕದಲ್ಲಿ ರೈಲು ಬ್ಯಾರಿಕೇಡ್ ಯೋಜನೆಯನ್ನು ಪ್ರಾರಂಭಿಸಲಾಗಿದ್ದು,  2015-16 ರಿಂದ ಈ ಯೋಜನೆಯನ್ನು ಜಾರಿಗೊಳಿಸುತ್ತಿರುವ ಏಕೈಕ ರಾಜ್ಯ ಕರ್ನಾಟಕ. ರೈಲು ಬ್ಯಾರಿಕೇಡ್ ಯೋಜನೆಯು ಅರಣ್ಯದ ಹೊರವಲಯದಲ್ಲಿ ಕೃಷಿ ಮಾಡುವ ರೈತರ ಆದಾಯವನ್ನು ಗಣನೀಯವಾಗಿ ಹೆಚ್ಚಿಸಿದೆ.
ಕರ್ನಾಟಕದ ರೈತರು ಎಂದಿಗೂ ಅರಣ್ಯ ಹಾಗೂ  ವನ್ಯಜೀವಿಗಳ  ಪರ ನಿಲುವನ್ನು ಹೊಂದಿದ್ದಾರೆ. ವನ್ಯಜೀವಿಗಳೊಂದಿಗೆ ಸಹಬಾಳ್ವೆ ನಡೆಸುವ ಉತ್ತಮ ಉದಾಹರಣೆ ನೀಡಿದ್ದು, ಘರ್ಷಣೆಗಳ ಹೊರತಾಗಿಯೂ ರೈತರು ಅಪಾರ ಸಹಿಷ್ಣುತೆಯನ್ನು ಮೆರೆದಿದ್ದಾರೆ. ನಾನು ಅವರನ್ನು ವಂದಿಸುತ್ತಾ, ನಮ್ಮ ರೈತರನ್ನು ವನ್ಯಜೀವಿಗಳ ನಿಜವಾದ ಸಂರಕ್ಷಕರು ಎಂದು ಕರೆಯಲಿಚ್ಛಿಸುತ್ತೇನೆ. ಸೌರ ಬೇಲಿಗಳನ್ನು ನಿರ್ಮಿಸಲು ಸಂಪನ್ಮೂಲಗಳು ಮತ್ತು ಸಬ್ಸಿಡಿಗಳನ್ನು ಒದಗಿಸುವ ಮೂಲಕ ರೈತರನ್ನು ಸಬಲೀಕರಣಗೊಳಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಈ ಯೋಜನೆಗಳು  50,000 ಹೆಕ್ಟೇರ್‍ಗಿಂತಲೂ ಹೆಚ್ಚು ಕೃಷಿಭೂಮಿಯನ್ನು ಸಂರಕ್ಷಣೆ, ರೈತರ ಜೀವನೋಪಾಯದ ರಕ್ಷಣೆ ಮತ್ತು ಮಾನವಮತ್ತು ವನ್ಯಜೀವಿಗಳ ನಡುವೆ ಸಹಬಾಳ್ವೆಯನ್ನು ಪೆÇ್ರೀತ್ಸಾಹಿಸಲು ಸಹಾಯ ಮಾಡಿದೆ ಎಂದು ತಿಳಿಸಿದರು.

ನಮ್ಮ ಸರ್ಕಾರವು ಮಾನವ-ಆನೆ ಸಂಘರ್ಷಗಳೊಂದಿಗೆ ಭವಿಷ್ಯವನ್ನು ರೂಪಿಸಲು ಯತ್ನಿಸುತ್ತಿದೆ. ಹೆಚ್ಚಿದ ಅನುದಾನ, ತಾಂತ್ರಿಕ ಆವಿμÁ್ಕರಗಳು ಅಥವಾ ಸಮುದಾಯದ ಪಾಲ್ಗೊಳ್ಳುವಿಕೆಯ ಮೂಲಕ ಈ ದಿಸೆಯತ್ತ ನಮ್ಮ ಪ್ರಯತ್ನಗಳನ್ನು ಹೆಚ್ಚಿಸಲು ಬದ್ಧವಾಗಿದ್ದೇವೆ. ಕರ್ನಾಟಕ ಅರಣ್ಯ ಇಲಾಖೆಯು ಘರ್ಷಣೆಗಳನ್ನು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ತಗ್ಗಿಸಲು ಅಗತ್ಯವಾದ ಮಾನವಶಕ್ತಿ ಮತ್ತು ಆಧುನಿಕ ತಂತ್ರಜ್ಞಾನಗಳನ್ನು ಉತ್ತಮವಾಗಿ ಬಳಸಿಕೊಳ್ಳುತ್ತಿದೆ. ನಾವು 8 ವಿಶೇಷ ಗಜ ಕಾರ್ಯಪಡೆಗಳನ್ನು ಸ್ಥಾಪಿಸಿದ್ದು, ಪ್ರತಿಯೊಂದೂ ಉಪ ಅರಣ್ಯ ಸಂರಕ್ಷಣಾಧಿಕಾರಿ (ಆಅಈ) ಶ್ರೇಣಿಯ ಅಧಿಕಾರಿಗಳ ನೇತೃತ್ವದಲ್ಲಿ, ಎಲ್ಲಾ ಪ್ರಮುಖ ಸಂಘರ್ಷ ವಲಯಗಳಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ತಿಳಿಸಿದರು.

 
ಹೆಚ್ಚಿದ ಆನೆ ದಾಳಿಯನ್ನು ನಿಭಾಯಿಸಲು, ಕರ್ನಾಟಕ ಒಂಬತ್ತು ಗಜ ಕಾರ್ಯಪಡೆ ತಂಡಗಳನ್ನು ಸ್ಥಾಪಿಸಿದೆ. ನಿಯಂತ್ರಣ ಕೊಠಡಿಗಳ ಸಹಕಾರದೊಂದಿಗೆ ಈ ಕಾರ್ಯಪಡೆಗಳು , ಸಾರ್ವಜನಿಕ ಮತ್ತು ರೈತರ ರಕ್ಷಣೆಗೆ ತ್ವರಿತ ಪ್ರತಿಕ್ರಿಗಳನ್ನು ನೀಡುವ, ಆನೆಗಳ ಮುಖಾಮುಖಿಯಿಂದ ಸಮುದಾಯಗಳನ್ನು ರಕ್ಷಿಸುವ ಮತ್ತು ಆನೆಗಳನ್ನು ತಮ್ಮ ನೈಸರ್ಗಿಕ ಆವಾಸಸ್ಥಾನಗಳಿಗೆ ಸುರಕ್ಷಿತವಾಗಿ ಹಿಂದಿರುಗಿಸಲು ಅನುಕೂಲ ಕಲ್ಪಿಸುತ್ತದೆ. ಈ ಕಾರ್ಯಪಡೆಗಳು ಕಳೆದ ವರ್ಷವೊಂದರಲ್ಲಿ 1,200 ಕ್ಕೂ ಹೆಚ್ಚು ಆನೆ ದಾಳಿ ಘಟನೆಗಳಿಗೆ ಪ್ರತಿಕ್ರಿಯಿಸಿದ್ದು, ಆನೆಗಳನ್ನು ಸುರಕ್ಷಿತ ಆವಾಸಸ್ಥಾನಗಳಿಗೆ ಓಡಿಸುವಲ್ಲಿ ಯಶಸ್ವಿಯಾಗಿದೆ.

ಕರ್ನಾಟಕ ಅರಣ್ಯ ಸಾಮರಸ್ಯ ಯೋಜನೆಯು ಕರ್ನಾಟಕದ ಉದ್ದೇಶಿತ ಅರಣ್ಯ ಪ್ರದೇಶಗಳಲ್ಲಿ ಶೂನ್ಯ ಮಾನವ-ಪ್ರಾಣಿ ಸಂಘರ್ಷ ವಲಯಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ. ಈ ಸಮಗ್ರ ಯೋಜನೆಯು ಪ್ರಾಣಿಗಳಿಗೆ ನೀರಿನ ಭದ್ರತೆ, ಆವಾಸಸ್ಥಾನದ ಸುಧಾರಣೆ ಮತ್ತು ಸಮುದಾಯಗಳ ಸಕ್ರಿಯ ಭಾಗವಹಿಸುವಿಕೆಯನ್ನು ಒಳಗೊಂಡಿರುತ್ತದೆ. ಆವಾಸಸ್ಥಾನ ಸುಧಾರಣೆ ಚಟುವಟಿಕೆಗಳಾದ ಜನರ ಪ್ರದೇಶಗಳಿಗೆ ಕಾಡು ಪ್ರಾಣಿಗಳು ದಾರಿ ತಪ್ಪಿ ಬರುವಿಕೆಯನ್ನು ತಪ್ಪಿಸಲು, ಹುಲ್ಲುಗಾವಲು ಅಭಿವೃದ್ಧಿ, ಬಿದಿರಿನ ಪುನರುತ್ಪಾದನೆ ಮತ್ತು ಸೌರ ನೀರಿನ ಪಂಪ್ ಸೌಲಭ್ಯಗಳೊಂದಿಗೆ ನೀರಿನ ರಂಧ್ರಗಳ ರಚನೆಗಳಂತಹ ಆವಾಸಸ್ಥಾನದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ಕರ್ನಾಟಕ ಅರಣ್ಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮತ್ತು ಸ್ಥಳೀಯ ಸಮುದಾಯಗಳ ಸಹಕಾರದೊಂದಿನ ಪ್ರಯತ್ನಗಳು ಪ್ರಮುಖವಾಗಿವೆ. ಈ ಅಂತರರಾಷ್ಟ್ರೀಯ ಸಮ್ಮೇಳನವು ಪರಸ್ಪರ ಕಲಿಯಲು, ನವೀನ ವೈಜ್ಞಾನಿಕ ಪರಿಹಾರಗಳನ್ನು ಅನ್ವೇಷಿಸಲು ಮತ್ತು ಮನುಷ್ಯ- ಆನೆಗಳ ನಡುವೆ ಸಹಬಾಳ್ವೆಯನ್ನು ಬೆಳೆಸಲು ಸೂಕ್ತ ವಿಧಾನಗಳನ್ನು ಚರ್ಚಿಸಲು ಅಮೂಲ್ಯವಾದ ಅವಕಾಶವನ್ನು ಒದಗಿಸುತ್ತದೆ. ಮಾನವರು ಮತ್ತು ಆನೆಗಳ ನಡುವೆ ಸಾಮರಸ್ಯದ ಸಹಬಾಳ್ವೆಗೆ ದಾರಿ ಮಾಡಿಕೊಡಲು ಪ್ರಮುಖ ಒಳನೋಟಗಳು ಮತ್ತು ಶಿಫಾರಸುಗಳನ್ನು ಈ ಸಮ್ಮೇಳನದಲ್ಲಿ ಭಾಗವಹಿಸಿರುವ ವಿಷಯ ತಜ್ಞರು ನೀಡುತ್ತಾರೆ ಎಂದು ನನಗೆ ವಿಶ್ವಾಸವಿದೆ. ಒಟ್ಟಾಗಿ, ನಮ್ಮ ಜನರು ಮತ್ತು ವನ್ಯಜೀವಿಗಳ ಸುರಕ್ಷತೆ, ಯೋಗಕ್ಷೇಮ ಮತ್ತು ಸಮೃದ್ಧಿಯನ್ನು ನಾವು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಈ ಸಮ್ಮೇಳನ ಯಶಸ್ವಿಯಾಗಲಿ ಎಂದು ಹಾರೈಸಿದರು.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಾತನಾಡುತ್ತಾ, ನಾನು ಪ್ರತಿನಿಧಿಸುವ ಕ್ಷೇತ್ರದಲ್ಲೂ ಮಾನವ – ಆನೆ ಸಂಘರ್ಷ ಪ್ರಕರಣಗಳಿವೆ. ಕಳೆದ ಒಂದು ವರ್ಷಗಳಲ್ಲಿ ಆನೆ ದಾಳಿಗೆ 18 ಮಂದಿ ಸಾವನ್ನಪ್ಪಿದ್ದಾರೆ. ಹೀಗಾಗಿ ಈ ಸಮಸ್ಯೆಗಳ ಬಗ್ಗೆ ನನಗೆ ಅರಿವಿದೆ. ಈ ಸಮ್ಮೇಳನದಲ್ಲಿ ನೀವು ಈ ಸಂಘರ್ಷದಲ್ಲಿ ಯಾವುದೇ ಮಾನವನ ಜೀವಕ್ಕೆ ಹಾನಿಯಾಗದಂತೆ ಕ್ರಮ ವಹಿಸುವ ಬಗ್ಗೆ ಚರ್ಚೆ ಮಾಡಬೇಕು ಎಂದು ತಿಳಿಸಿದರು.

ಆನೆ- ಮಾನವನ ಸಂಘರ್ಷ ತಪ್ಪಿಸಲು ಸರ್ಕಾರ ನೂರಾರು ಕೋಟಿ ಅನುದಾನ ನೀಡುತ್ತಿದೆ. ಇದು ನಿರೀಕ್ಷೆಯಷ್ಟು ಅಲ್ಲವೆಂದು ಗೊತ್ತಿದೆ. ವಿಷಯ ಪರಿಣಿತರು ಮಾನವ – ಆನೆ ಸಂಘರ್ಷವನ್ನು ತಪ್ಪಿಸಲು ಕಾರ್ಯತಂತ್ರವನ್ನು ರೂಪಿಸಿ ಸರ್ಕಾರಗಳಿಗೆ ವರದಿ ಸಲ್ಲಿಸಬೇಕು. ರಾಜ್ಯದಲ್ಲಿ ಬಹುದೊಡ್ಡ ಅರಣ್ಯ ಸಂಪನ್ಮೂಲವಿದೆ. ಈ ಸಂಪನ್ಮೂಲಗಳನ್ನು ಬಳಸಿಕೊಂಡು ನಿರ್ವಹಣೆ ಮಾಡುವ ಬಗ್ಗೆಯೂ ನೀವು ಸಲಹೆಗಳನ್ನು ನೀಡಿ. ಅರಣ್ಯ ಸಂಪತ್ತನ್ನು ಉಳಿಸಿಕೊಂಡು ಈ ಸಂಘರ್ಷಗಳನ್ನು ತಪ್ಪಿಸಲು ನಾವುಗಳು ಅಗತ್ಯ ಕ್ರಮ ಕೈಗೊಳ್ಳಬೇಕಿದೆ.

ಇದು ಅತ್ಯಂತ ಪ್ರಮುಖ ಚರ್ಚೆಯಾಗಿದ್ದು, ನಮ್ಮ ಊರಿನ ಮನೆಯ ಬಳಿಯೇ ಸುಮಾರು 50 ಆನೆಗಳು ಓಡಾಡುತ್ತಿರುತ್ತವೆ. ಬನ್ನೇರುಘಟ್ಟ, ಕನಕಪುರ, ಮೇಕೆದಾಟುವಿನಿಂದ ನಂತರ, ತಮಿಳುನಾಡು ಹಾಗೂ ಕೇರಳ ಗಡಿ ಪ್ರದೇಶವಿದ್ದು, ಇಲ್ಲಿ ಆನೆಗಳ ಸಂಚಾರ ಹೆಚ್ಚಾಗಿವೆ. ಆನೆಗಳ ದಾಳಿ ಹೆಚ್ಚಾದ ಪರಿಣಾಮ ನಮ್ಮ ಗಡಿ ಭಾಗದಲ್ಲಿ ಕಬ್ಬು ಬೆಳೆಯನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಇನ್ನು ನೀರಿನ ಕೊರತೆ ಹೆಚ್ಚಾದರೆ ಆನೆಗಳು ನಗರಗಳತ್ತ ಮುಖಮಾಡುತ್ತವೆ. ನಮ್ಮಲ್ಲಿ ಅರಣ್ಯ ಪ್ರದೇಶ ಹೆಚ್ಚಾಗಿದ್ದು, ಎಲ್ಲಾ ಕಡೆ ತಡೆಗೋಡೆ ನಿರ್ಮಾಣ ಕಷ್ಟವಾಗುತ್ತದೆ.

ಇನ್ನು ಈ ವಿಚಾರದಲ್ಲಿ ಸಮುದಾಯದ ಭಾಗವಹಿಸುವಿಕೆ ಕೂಡ ಪ್ರಮುಖವಾಗಿದೆ. ಸಮುದಾಯದ ವಿಶ್ವಾಸ ಪಡೆಯದೇ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಅಸಾಧ್ಯ. ರೈತರ ಜತೆ ಉತ್ತಮ ಸಂಬಂಧ ಹೊಂದಿರಬೇಕು. ಒಂದು ಪ್ರದೇಶದಲ್ಲಿ ಎಷ್ಟು ಅರಣ್ಯ ರಕ್ಷಕ ಸಿಬ್ಬಂದಿ ನಿಯೋಜಿಸಲು ಸಾಧ್ಯ? ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳೀಯ ರೈತರ ಜತೆ ಉತ್ತಮ ಸಂಬಂಧ ಬೆಳೆಸಿಕೊಳ್ಳಬೇಕು. ಆಗ ಜನರು ಕೂಡ ಸಿಬ್ಬಂದಿ ನೆರವಿಗೆ ಬರುತ್ತಾರೆ. ಕೇವಲ ಅರಣ್ಯ ಸಿಬ್ಬಂದಿಗಳಿಂದ ಇಡೀ ಅರಣ್ಯ ಪ್ರದೇಶ ಸಂರಕ್ಷಣೆ ಸಾಧ್ಯವಿಲ್ಲ. ಆನೆಗಳ ಜತೆಗೆ ಇತರೆ ಕಾಡು ಪ್ರಾಣಿಗಳನ್ನು ನಿರ್ವಹಣೆ ಮಾಡಬೇಕು. ಹೀಗಾಗಿ ಸಮುದಾಯಗಳ ಜತೆ ಉತ್ತಮ ಸಂಬಂಧ ಹೊಂದುವುದು ಮುಖ್ಯವಾಗುತ್ತದೆ. ನೀವು ಕೂಡ ಅವರ ಕುಟುಂಬದ ಸದಸ್ಯರಾಗಿ ಕರ್ತವ್ಯ ನಿರ್ವಹಿಸಬೇಕು. ಯಾವುದೇ ಕಾರಣಕ್ಕೂ ರೈತರಿಗೆ ಕಿರುಕುಳ ನೀಡಬೇಡಿ.

ದೇಶದಲ್ಲಿ ಅತಿ ಹೆಚ್ಚು ಆನೆಗಳನ್ನು ಹೊಂದಿರುವ ರಾಜ್ಯ ಕರ್ನಾಟಕವಾಗಿದೆ. ಈ ಹಿಂದೆ ನಮ್ಮಲ್ಲಿ ಆನೆಗಳನ್ನು ಹಿಡಿಯಲು ಖೆಡ್ಡಾ ತೊಡುವ ಅಭ್ಯಾಸವಿತ್ತು. ಅದನ್ನು ಈಗ ಪ್ರಯೋಗಿಸಬಹುದೇ ಎಂದು ಮರುವಿಶ್ಲೇಷಣೆ ಮಾಡಬೇಕು. ಮನುಷ್ಯರ ಪ್ರಾಣ, ರೈತರ ಬೆಳೆ ಎಲ್ಲವನ್ನು ರಕ್ಷಣೆ ಮಾಡಿಕೊಂಡು ಅರಣ್ಯ ಹಾಗೂ ವನ್ಯಜೀವಿಗಳ ಸಂರಕ್ಷಣೆ ಮಾಡಬೇಕು.  ಅರಣ್ಯದಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶವಿದೆ. ಪ್ರಕೃತಿಯ ಸೊಬಗಿನ ಮುಂದೆ ಬೇರೊಂದಿಲ್ಲ. ತಂತ್ರಜ್ಞಾನ ಬಳಸಿಕೊಂಡು, ಸಂಪನ್ಮೂಲಗಳನ್ನು ಕ್ರೂಢೀಕರಿಸಿಕೊಂಡು ಈ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ರೈತರಿಗೆ ಆಗುವ ಬೆಳೆ ನಷ್ಟ ತಡೆಯಬೇಕು. ಆನೆ ದಾಳಿಯಿಂದ ಪ್ರಾಣಹಾನಿಯಾದರೆ ಅವರಿಗೆ ಸೂಕ್ತ ಪರಿಹಾರ ಸಿಗುವಂತಾಗಬೇಕು.  ಈ ವಿಚಾರವಾಗಿ ಕರ್ನಾಟಕದಲ್ಲಿ ನಡೆಯುತ್ತಿರುವ ಸಮ್ಮೇಳನ ಇಡೀ ದೇಶದ ಕಣ್ತೆರೆಸುವಂತೆ ಮಾಡಬೇಕು. ನಾವೆಲ್ಲರೂ ಸೇರಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳೋಣ ಎಂದು ತಿಳಿಸಿದರು.

ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಮಾತನಾಡುತ್ತಾ, ಇದು ಕೇವಲ ಕರ್ನಾಟಕ ಅಥವಾ ಭಾರತದ ಯಾವುದೋ ಒಂದು ರಾಜ್ಯದ ಸಮಸ್ಯೆಯಲ್ಲ ಬದಲಾಗಿ  ಜಾಗತಿಕ ಸಮಸ್ಯೆಯಾಗಿದೆ. ಮಾನವ-ಆನೆ ಸಂಘರ್ಷವು ಪರಿಸರ, ಸಾಮಾಜಿಕ ಮತ್ತು ಆರ್ಥಿಕ ಅಂಶಗಳನ್ನು ಒಳಗೊಂಡ ಒಂದು ಸಂಕೀರ್ಣ ಸಮಸ್ಯೆಯಾಗಿದೆ. ಅಮೂಲ್ಯವಾದ ಜೀವ ಹಾನಿ, ಬೆಳೆ ಹಾನಿಗೆ ಕಾರಣವಾಗುತ್ತಿರುವ ಈ ಸಮಸ್ಯೆಗೆ ಸುಸ್ಥಿರ ಪರಿಹಾರಗಳನ್ನು ಕಂಡುಕೊಳ್ಳಲು ನಮ್ಮ ಸಂಘಟಿತ ಮತ್ತು ಸಹಯೋಗದ ಪ್ರಯತ್ನಗಳು ಅಗತ್ಯ ಮತ್ತು ಅನಿವಾರ್ಯ ಎಂದರು.

ಕರ್ನಾಟಕ ರಾಜ್ಯ  ವೈವಿಧ್ಯಮಯ ಜೀವವೈವಿಧ್ಯ, ಸಸ್ಯ ಸಂಪತ್ತು, ಪ್ರಾಣಿ ಸಂಪತ್ತಿನಿಂದ ಕೂಡಿದೆ. ವಿಶಾಲವಾದ ದಟ್ಟ ಅಡವಿಗಳು ಪ್ರಾಣಿ ಸಂಕುಲ, ಸಸ್ಯ ಸಂಕುಲ, ಕೀಟ ಸಂಕುಲ ಮತ್ತು ಪಕ್ಷಿ ಸಂಕುಲಕ್ಕೆ ನೆಲೆಯಾಗಿದೆ. ಕರ್ನಾಟಕದಲ್ಲಿ ಸುಮಾರು 43,382 ಚದರ ಕಿಲೋ ಮೀಟರ್ ಅರಣ್ಯ ಪ್ರದೇಶವಿದೆ. ಅಂದರೆ ನಮ್ಮ ಭೌಗೋಳಿಕ ಭೂಭಾಗದ ಶೇ.22ರಷ್ಟು ಹಸಿರು ಹೊದಿಕೆ ಇದೆ.

ಆದಿವಾಸಿಗಳ ಕೊಡುಗೆ ಅಪಾರ:

ರಾಜ್ಯದ ಅರಣ್ಯವನ್ನು ಜೀವನ ಮತ್ತು ಜೀವನೋಪಾಯಕ್ಕಾಗಿ ಅವಲಂಬಿಸಿರುವ ಅಸಂಖ್ಯಾತ ಸಮುದಾಯಗಳೂ ಇವೆ. ಕಾಡು ಎಂದರೆ ಕೇವಲ ಮರ, ಗಿಡ, ಪ್ರಾಣಿ, ಪಕ್ಷ ಅμÉ್ಟೀ ಅಲ್ಲ. ಕಾಡು ಈ ಭೂ ಗ್ರಹದ ಜೀವನಾಡಿ, ಎಲ್ಲ ಜೀವಜಂತುಗಳ ಉಸಿರು. ನಮಗೆ ಶುದ್ಧ ಗಾಳಿ, ಶುದ್ಧ ನೀರು, ಫಲವತ್ತಾದ ಮಣ್ಣು ಲಭಿಸುವುದೇ ಅರಣ್ಯದಿಂದ. ಅರಣ್ಯಗಳು ನಾನಾ ರೂಪದಲ್ಲಿ ನಮಗೆ ಪ್ರತ್ಯಕ್ಷ ಮತ್ತು ಪರೋಕ್ಷ ಅನುಕೂಲತೆ ಕಲ್ಪಿಸಿವೆ. ಕರ್ನಾಟಕದಲ್ಲಿ, ಈ ನೈಸರ್ಗಿಕ ಸಂಪನ್ಮೂಲಗಳ ನಿರ್ಣಾಯಕ ಮಹತ್ವವನ್ನು ನಾವು ಗುರುತಿಸಿದ್ದೇವೆ ಮತ್ತು ಅವುಗಳ ರಕ್ಷಣೆ ಮತ್ತು ಸಂರಕ್ಷಣೆಗೆ ನಾವು ಬದ್ಧರಾಗಿದ್ದೇವೆ.

ಕರ್ನಾಟಕ ಸರ್ಕಾರ ಅರಣ್ಯದಲ್ಲಿ ಕಳ್ಳಬೇಟೆ ನಿಗ್ರಹಕ್ಕೆ ಕೈಗೊಂಡಿರುವ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ವನ್ಯಮೃಗಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. 2023ರ ಆನೆ ಗಣತಿಯ ಪ್ರಕಾರ ರಾಜ್ಯದಲ್ಲಿ 6395 ಆನೆಗಳಿದ್ದು,  ಗಜ ಸಂಖ್ಯೆಯಲ್ಲಿ ರಾಜ್ಯ ಪ್ರಥಮ ಸ್ಥಾನದಲ್ಲಿದೆ. ಅದೇ ರೀತಿ 563 ಹುಲಿ ಹೊಂದಿರುವ ಕರ್ನಾಟಕ ವ್ಯಾಘ್ರಗಳ ಸಂಖ್ಯೆಯಲ್ಲಿ 2ನೇ ಸ್ಥಾನದಲ್ಲಿದೆ. ಆದರೆ ಇದಕ್ಕೆ ಅನುಗುಣವಾಗಿ ಅರಣ್ಯ ಪ್ರದೇಶ ಹೆಚ್ಚಳ ಆಗದ ಹಿನ್ನೆಲೆಯಲ್ಲಿ  ಆನೆಗಳು ನಾಡಿಗೆ ಬರುತ್ತಿದ್ದು, ಬೆಳೆ ಹಾನಿ, ಜೀವಹಾನಿ ಸಂಭವಿಸುತ್ತಿದೆ. ಈ ನಿಟ್ಟಿನಲ್ಲಿ ಆನೆ ಮತ್ತು ಮಾನವ ಸಂಘರ್ಷ ತಗ್ಗಿಸಲು ಈ ಸಮ್ಮೇಳನ ಬೆಳಕು ಚೆಲ್ಲಲಿದೆ ಎಂಬ ವಿಶ್ವಾಸ ನನಗಿದೆ.

ರಾಜ್ಯ ಆನೆಗಳ ಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿದ್ದರೂ, ಇಲಾಖೆ ಕೈಗೊಂಡಿರುವ ಮುನ್ನೆಚ್ಚರಿಕೆಯ ಕ್ರಮಗಳಿಂದ ಆನೆ ದಾಳಿಯಿಂದ ಹೆಚ್ಚಿನ ಜೀವಹಾನಿ ಮತ್ತು ಬೆಳೆ ಹಾನಿ ಆಗದಂತೆ ನಿಯಂತ್ರಿಸಲಾಗುತ್ತಿದೆ. ಆದಾಗ್ಯೂ ರಾಜ್ಯದಲ್ಲಿ ಪ್ರತಿ ವರ್ಷ ಸರಾಸರಿ 30 ಜನರು ಆನೆಗಳ ದಾಳಿಯಿಂದ ಸಾವಿಗೀಡಾಗುತ್ತಿದ್ದಾರೆ. ಈ ವರ್ಷ ಜನವರಿಯಂದ ಇಲ್ಲಿಯವರೆಗೆ 25 ಜನರು ಆನೆಯ ದಾಳಿಯಿಂದ ಮೃತಪಟ್ಟಿದ್ದಾರೆ ಇದು ಅತ್ಯಂತ ನೋವಿನ ಸಂಗತಿ.  ಪ್ರತಿಯೊಂದು ಜೀವವೂ ಅಮೂಲ್ಯ ಈ ನಿಟ್ಟಿನಲ್ಲಿ ಈ ಸಮ್ಮೇಳನದಲ್ಲಿ ಚಿಂತನ ಮಂಥನ ನಡೆಯಲಿದ್ದು, ಅತ್ಯುತ್ತಮ ರೂಢಿಗಳನ್ನು ಅಳವಡಿಸಿಕೊಳ್ಳಲು ಅನುಕೂಲವಾಗಲಿ ಎಂದರು.

ಹೆಚ್ಚುತ್ತಿರುವ ಮಾನವ ಜನಸಂಖ್ಯೆ, ಕಾಡಿನಂಚಿನವರೆಗೆ ವಿಸ್ತರಿಸುತ್ತಿರುವ ಕೃಷಿ ಚಟುವಟಿಕೆಗಳು ಮತ್ತು ವಸತಿ ಬಡಾವಣೆ ನಿರ್ಮಾಣ ಮಾನವ-ಆನೆ ಸಂಘರ್ಷ ಹೆಚ್ಚಳಕ್ಕೆ ಕಾರಣವಾಗಿದೆ. ನಮ್ಮ ಪೂರ್ವಿಕರು ಕಾಡಿನೊಂದಿಗೆ ಮತ್ತು ವನ್ಯಜೀವಿಗಳೊಂದಿಗೆ ಸಹಬಾಳ್ವೆ ಮಾಡುವುದನ್ನು ಕಲಿತಿದ್ದರು. ಇಂದಿಗೂ ಕಾಡಿನಲ್ಲೇ ವಾಸಿಸುವ ಆದಿವಾಸಿಗಳು ವನ್ಯಜೀವಿ ದಾಳಿಯಿಂದ ಮೃತಪಡುವುದು ಅಪರೂಪದಲ್ಲೇ ಅಪರೂಪ. ಆದರೆ ನಗರ ವಾಸಿಗಳಾದ ನಾವು ಈಗ ಆಧುನಿಕ ಯುಗದಲ್ಲಿ ಆ ಸಹಬಾಳ್ವೆಯ ಸಂವೇದನೆ ಕಳೆದುಕೊಳ್ಳುತ್ತಿದ್ದೇವೆ.

ಮಾನವ-ವನ್ಯಜೀವಿ ಸಂಘರ್ಷ ತಗ್ಗಿಸುವುದು ನಮ್ಮ ಆದ್ಯತೆ:

ಆದಾಗ್ಯೂ ಮಾನವ-ವನ್ಯಜೀವಿ ಸಂಘರ್ಷದ ಸಮಸ್ಯೆಯನ್ನು ಪರಿಹರಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ, ಜನರ ಮತ್ತು  ವನ್ಯಜೀವಿಗಳ ಸುರಕ್ಷತೆ ಹಾಗೂ ಯೋಗಕ್ಷೇಮವನ್ನು ಖಾತ್ರಿಪಡಿಸಲು ಹಲವಾರು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದೇವೆ. ತಂತ್ರಜ್ಞಾನದ ಅಳವಡಿಕೆ ಮತ್ತು ಸಮುದಾಯ-ಚಾಲಿತ ಉಪಕ್ರಮಗಳೊಂದಿಗೆ ಕರ್ನಾಟಕ ರಾಜ್ಯವು ಈ ಸವಾಲನ್ನು ಎದುರಿಸುವಲ್ಲಿ ಮುಂಚೂಣಿಯಲ್ಲಿದೆ ಎಂದು ತಿಳಿಸಿದರು

ವನ್ಯಜೀವಿ ಮತ್ತು ಮಾನವ ಸಂಘರ್ಷ ತಡೆಗೆ ನಮ್ಮ ಮಾನ್ಯ ಮುಖ್ಯಮಂತ್ರಿಯವರು ಹೆಚ್ಚಿನ ಆಸಕ್ತಿ ತಳೆದಿದ್ದಾರೆ. 2023-24 ಸಾಲಿನಲ್ಲಿ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕಾಗಿ 100 ಕೋಟಿ ರೂ. ಹೆಚ್ಚುವರಿ ಅನುದಾನ ನೀಡಿದ್ದರು. ಮಾನ್ಯ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೂಡ ಅರಣ್ಯ ಇಲಾಖೆಯ ಸುರಕ್ಷತಾ ಕಾರ್ಯಗಳಿಗೆ ಮತ್ತು ಅರಣ್ಯ ಸಂರಕ್ಷಣೆಯ ನಿಟ್ಟಿನಲ್ಲಿ ಇಲಾಖೆ ಕೈಗೊಂಡಿರುವ ಕ್ರಮಗಳಿಗೆ ಬೆಂಬಲ ನೀಡಿದ್ದಾರೆ. ನಾನು ಈ ಸಂದರ್ಭದಲ್ಲಿ ಅವರಿಬ್ಬರಿಗೂ ಅರಣ್ಯ ಇಲಾಖೆಯ ಪರವಾಗಿ ಧನ್ಯವಾದ ಅರ್ಪಿಸಲು ಬಯಸುತ್ತೇನೆ.

ಇಂದು ಇಡೀ ಜಗತ್ತು ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯ ಸವಾಲು ಎದುರಿಸುತ್ತಿದೆ. ನಾವು ಹಸಿರು ಹೊದಿಕೆ ಹೆಚ್ಚಳ ಮಾಡುವ ಮೂಲಕ ಮಾತ್ರ ಇದಕ್ಕೆ ಪರಿಹಾರ ಕಂಡುಕೊಳ್ಳಲು ಸಾಧ್ಯ. ಹೀಗಾಗಿ ನಮ್ಮ ಸರ್ಕಾರ 2023-24ರ ಸಾಲಿನಲ್ಲಿ 5 ಕೋಟಿ ಸಸಿ ನೆಟ್ಟು ಬೆಳೆಸುವ ಸಂಕಲ್ಪ ಮಾಡಿತು. ನಿಮಗೆಲ್ಲ ಆಶ್ಚರ್ಯ ಆಗಬಹುದು ನಾವು 5 ಕೋಟಿ 48 ಲಕ್ಷ ಸಸಿ ನೆಟ್ಟು ಗುರಿ ಮೀರಿದ ಸಾಧನೆ ಮಾಡಿದ್ದೇವೆ. ಜೊತೆಗೆ ಈ ರೀತಿ ನೆಡಲಾದ ಸಸಿಗಳ ಪೈಕಿ ಎಷ್ಟು ಬದುಕುಳಿದಿದೆ ಎಂದು  ತಿಳಿಯಲು ಜಿಯೋ ಟ್ಯಾಗ್ ಮಾಡಿಸಿ ಆಡಿಟ್ ಕೂಡ ಮಾಡುತ್ತಿದ್ದೇವೆ. ಪ್ರಾಣಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಆದರೆ ಅದಕ್ಕೆ ಅನುಗುಣವಾಗಿ ಅರಣ್ಯ ಪ್ರದೇಶ ಬೆಳೆಯುತ್ತಿಲ್ಲ. ಹೀಗಾಗಿ ಕರ್ನಾಟಕ ಸರ್ಕಾರ ಕಳೆದ ವರ್ಷ 3395.73 ಹೆಕ್ಟೇರ್ ಪ್ರದೇಶವನ್ನು ಅರಣ್ಯ ಎಂದು ಘೋಷಿಸಿದೆ. ಜೊತೆಗೆ 2500 ಎಕರೆಗೂ  ಹೆಚ್ಚು ಅರಣ್ಯ ಒತ್ತುವರಿಯನ್ನು ತೆರವು ಮಾಡಿಸಿದೆ.

ಅರಣ್ಯ ಅಪರಾಧಗಳನ್ನು ತಡೆಯಲು ಮತ್ತು ತಪ್ಪಿತಸ್ಥರಿಗೆ ಶಿಕ್ಷೆ ಆಗುವಂತೆ ಮಾಡಲು ಆನ್ ಲೈನ್ ಎಫ್.ಐ.ಆರ್. ವ್ಯವಸ್ಥೆಯನ್ನು ತರಲು ನಾವು ಕಾರ್ಯೋನ್ಮುಖರಾಗಿದ್ದೇವೆ. ಆಧುನಿಕ ತಂತ್ರಜ್ಞಾನದ ನೆರವಿನಿಂದ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಗೆ ಮುಂದಾಗಿದ್ದೇವೆ. ಕಾಡಿನಲ್ಲಿ ಬೆಂಕಿ ಕಾಣಿಸಿಕೊಂಡಾಗ ದೂರ ಸಂವೇದಿ ತಂತ್ರಜ್ಞಾನ ಉಪಗ್ರಹಗಳ ನೆರವಿನಿಂದ ಮಾಹಿತಿ ಲಭಿಸುತ್ತದೆ. ಈ ಹಿಂದೆ ನಾಸಾದಿಂದ ಕಾಡ್ಗಿಚ್ಚಿನ ಮಾಹಿತಿ ಮೊದಲು ಇಸ್ರೋದ ರಾಷ್ಟ್ರೀಯ ದೂರಸಂವೇದಿ ಕೇಂದ್ರ (ಎನ್‍ಆರ್‍ಎಸ್‍ಸಿ)ಕ್ಕೆ ಬಂದು, ಅಲ್ಲಿಂದ ಭಾರತೀಯ ಅರಣ್ಯ ಸರ್ವೇಕ್ಷಣಾ ಇಲಾಖೆ (ಎಫ್‍ಎಸ್‍ಐ)ಗೆ ಬರುತ್ತಿತ್ತು. ನಂತರ ಅವರು ಆಯಾ ರಾಜ್ಯಗಳಿಗೆ ಮಾಹಿತಿ ತಲುಪಿಸುತ್ತಿದ್ದರು. ಈಗ ನೇರವಾಗಿ ನಾಸಾದಿಂದ ಇಸ್ರೋದ ರಾಷ್ಟ್ರೀಯ ದೂರಸಂವೇದಿ ಕೇಂದ್ರ (ಎನ್‍ಆರ್‍ಎಸ್‍ಸಿ)ಕ್ಕೆ ಬಂದು ಅಲ್ಲಿಂದ ಕರ್ನಾಟಕ ದೂರ ಸಂವೇದಿ ಸಂಸ್ಥೆಗೆ (ಕೆಎಸ್‍ಆರ್‍ಎಸ್‍ಸಿ) ಬರುತ್ತದೆ. ಆ ಮಾಹಿತಿ ಅರಣ್ಯ ಇಲಾಖೆಯ ಸಂಬಂಧಿತ ವಲಯಕ್ಕೆ ರವಾನೆ ಆಗುತ್ತದೆ. ಇದರಿಂದ ತಕ್ಷಣವೇ ಸ್ಪಂದಿಸಲು, ಬೆಂಕಿ ನಂದಿಸಲು ಸಾಧ್ಯವಾಗಲಿದ್ದು, ಇದು ಹೆಚ್ಚಿನ ಅರಣ್ಯ ನಾಶ ತಡೆಯುತ್ತದೆ.  ಎಂದು ತಳಿಸಿದರು.

ತಂತ್ರಜ್ಞಾನವನ್ನು ಅರಣ್ಯ ಒತ್ತುವರಿ ತಡೆಗೂ ಅಳವಡಿಸಲು ಈಗ ನಾವು ಮುಂದಾಗಿದ್ದೇವೆ. ಯಾವುದೇ ಅರಣ್ಯ ಪ್ರದೇಶದಲ್ಲಿ ಮರ ಕಡಿದು  ಒತ್ತುವರಿ ಮಾಡಿದರೆ, ಸಕಾಲಿಕವಾಗಿ ಎಚ್ಚರಿಕೆ ನೀಡುವ ಉಪಗ್ರಹ ಆಧಾರಿತ ವ್ಯವಸ್ಥೆಯನ್ನೂ ಅಭಿವೃದ್ಧಿ ಪಡಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ನಮ್ಮ ನೆರೆಯ ರಾಜ್ಯಗಳಾದ ಕೇರಳ, ಆಂಧ್ರಪ್ರದೇಶ ಮತ್ತು ತಮಿಳುನಾಡಿನೊಂದಿಗೆ ಬಲವಾದ ಸಹಕಾರವನ್ನು ಬೆಳೆಸುವುದು ನಮ್ಮ ಪ್ರಮುಖ ಕಾರ್ಯತಂತ್ರಗಳಲ್ಲಿ ಒಂದಾಗಿದೆ. ರಾಜ್ಯ ಗಡಿಗಳಲ್ಲಿ ಮಾನವ-ಆನೆ ಸಂಘರ್ಷವನ್ನು ಪರಿಹರಿಸಲು ಮತ್ತು ನೀಲಗಿರಿ ತಪ್ಪಲಿನಲ್ಲಿ ಸಂರಕ್ಷಿತ ಕಾನನದೊಳಗೆ ಆನೆಗಳ ಸುರಕ್ಷಿತ ಸಂಚಾರ ಉತ್ತೇಜಿಸಲು ನಾವು ಒಟ್ಟಾಗಿ ಅಂತಾರಾಜ್ಯ ಸಮನ್ವಯ ಸಮಿತಿಯನ್ನು (ಐಸಿಸಿ) ರಚಿಸಿದ್ದೇವೆ ಮತ್ತು ಆ ಸಂಬಂಧ ಚಾರ್ಟರ್ ಗೆ ಸಹಿ ಹಾಕಿದ್ದೇವೆ. ಬಂಡೀಪುರದಲ್ಲಿ ನಡೆದ ಸಮನ್ವಯ ಸಭೆಯಲ್ಲಿ ಸಿದ್ಧಪಡಿಸಿದ "ಬಂಡೀಪುರ ಚಾರ್ಟರ್" ಒಡಂಬಡಿಕೆ ಈ ನಿಟ್ಟಿನಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಇದು ಸಂರಕ್ಷಣೆ ಮತ್ತು ಸಂಘರ್ಷ ಪರಿಹಾರಕ್ಕೆ ನಮ್ಮ ಸಾಮೂಹಿಕ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

ಮಾನವ-ಆನೆ ಸಂಘರ್ಷದಿಂದ ಮೃತಪಟ್ಟವರ ಕುಟುಂಬಕ್ಕೆ ಮತ್ತು ಗಾಯಗೊಂಡವರಿಗೆ ತಕ್ಷಣವೇ ಆರ್ಥಿಕ ಪರಿಹಾರ ಮತ್ತು ನೆರವು ನೀಡುತ್ತಿದ್ದೇವೆ, ಬೆಳೆ ಪರಿಹಾರವನ್ನು ತ್ವರಿತವಾಗಿ ವಿತರಿಸುತ್ತಿದ್ದೇವೆ. ಜೊತೆಗೆ ಕರ್ನಾಟಕ ಸರ್ಕಾರವು ರೈತರು ಕಷ್ಟಪಟ್ಟು ಬೆಳೆದ ಬೆಳೆಗಳನ್ನು ರಕ್ಷಿಸಲು ಮತ್ತು ಜನರ ಜೀವ ಉಳಿಸಲು ಸೌರ ವಿದ್ಯುತ್ ಬೇಲಿ ಅಳವಡಿಸಿಕೊಳ್ಳಲು ಸಬ್ಸಿಡಿ ನೀಡುತ್ತಿದೆ. ಮಾನವ-ವನ್ಯಜೀವಿ ಸಂಘರ್ಷವನ್ನು ನಿಭಾಯಿಸಲು ನಾವು ಪ್ರತ್ಯೇಕ ಬಜೆಟ್ ಅನ್ನು ನಿಗದಿಪಡಿಸಿದ್ದೇವೆ, ರೈಲ್ವೆ ಬ್ಯಾರಿಕೇಡ್ ಗಳು, ಸೌರ ತಂತಿ ಬೇಲಿ ಅಳವಡಿಕೆ, ಆನೆ-ನಿಗ್ರಹ ಕಂದಕಗಳ ನಿರ್ಮಾಣಕ್ಕಾಗಿ ವಾರ್ಷಿಕವಾಗಿ 150 ಕೋಟಿ ರೂ.ಗಳನ್ನು ವೆಚ್ಚ ಮಾಡಿದ್ದೇವೆ.  ಮಾನವ - ವನ್ಯಜೀವಿ ಸಂಘರ್ಷದಿಂದ ಹೆಚ್ಚಿನ ಸಾವುಗಳು ಸಂಭವಿಸುವ ಕಡೆಗಳಲ್ಲಿ, ವನ್ಯಜೀವಿ ಪ್ರದೇಶಗಳಲ್ಲಿ ದಣಿವರಿಯದೆ ಕೆಲಸ ಮಾಡುವ ನಮ್ಮ ಮುಂಚೂಣಿ ಸಿಬ್ಬಂದಿಯ ಕಲ್ಯಾಣವು ನಮಗೆ ಅತ್ಯಂತ ಮಹತ್ವದ್ದಾಗಿದೆ. ಗುತ್ತಿಗೆ ನೌಕರರು ಸೇರಿದಂತೆ ಇಲಾಖೆಯ ಎಲ್ಲಾ ಸಿಬ್ಬಂದಿಗಳಿಗೆ ನಾವು "ಕಷ್ಟಕರ ಸನ್ನಿವೇಶದ ಕಾರ್ಯ ನಿರ್ವಹಣಾ ಭತ್ಯೆ" ಯನ್ನು ನೀಡುತ್ತಿದ್ದೇವೆ.

ನಾವು ಇಂದು ಇಲ್ಲಿ ಮಾನವ-ಆನೆ ಸಂಘರ್ಷ ನಿರ್ವಹಣೆ ಕುರಿತಂತೆ ಚಿಂತನ ಮಂಥನ ನಡೆಸಲು ಸೇರುತ್ತಿರುವ ಸಂದರ್ಭದಲ್ಲಿ, ನಮ್ಮ ಸಾಮಥ್ರ್ಯವನ್ನು ಹೆಚ್ಚಿಸುವ ಹಲವಾರು ಸುಧಾರಿತ ತಾಂತ್ರಿಕ ಅನುμÁ್ಠನ ಕುರಿತಂತೆ ಘೋಷಿಸಲು ನಾನು ಹೆಮ್ಮೆಪಡುತ್ತೇನೆ.  ಆನೆಗಳ ಸಂಚಾರದ ಬಗ್ಗೆ ಮಾಹಿತಿ  ತಿಳಿಯಲು ರೇಡಿಯೋ ಕಾಲರ್ ಅಳವಡಿಸುವ ಕಾರ್ಯವನ್ನೂ ರಾಜ್ಯ ಸರ್ಕಾರ ಮಾಡುತ್ತಿದೆ. ಜಿಎಸ್‍ಎಂ ಆಧಾರಿತ ಕ್ಯಾಮೆರಾ ಟ್ರ್ಯಾಪ್‍ಗಳು ಮತ್ತು ಗರುಡ ಇ - ನಿಗಾ ವ್ಯವಸ್ಥೆಯನ್ನು ಬಳಸಲಾಗುತ್ತಿದೆ. ವನ್ಯಜೀವಿಗಳು ಮತ್ತು ಜನರ ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳಲು ನಾವು ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿದ್ದೇವೆ. ಮೇ 2023 ರಲ್ಲಿ ದಕ್ಷಿಣ ಭಾರತದಾದ್ಯಂತ ನಡೆಸಿದ ಸಂಯೋಜಿತ ಆನೆಗಳ ಜನಸಂಖ್ಯೆಯ ಅಂದಾಜು ವಿಜ್ಞಾನ ಆಧಾರಿತ ನಿರ್ವಹಣೆಗೆ ನಮ್ಮ ಬದ್ಧತೆಗೆ ಸಾಕ್ಷಿಯಾಗಿದೆ. ಈ ರೂಢಿಗಳಿಂದ ಸಂಗ್ರಹಿಸಿದ ದತ್ತಾಂಶವು ಅಮೂಲ್ಯವಾಗಿದೆ, ಭವಿಷ್ಯದ ಸಂರಕ್ಷಣಾ ತಂತ್ರಗಳನ್ನು ಯೋಜಿಸಲು ನಿರ್ಣಾಯಕ ಒಳನೋಟಗಳನ್ನು ಒದಗಿಸುತ್ತದೆ. ಇದು ಪ್ರಾದೇಶಿಕ ಸಹಕಾರಕ್ಕೆ ಜ್ವಲಂತ ಉದಾಹರಣೆಯಾಗಿದೆ.

ಜ್ಞಾನವನ್ನು ಹಂಚಿಕೊಳ್ಳಲು, ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಲು ಮತ್ತು ಮಾನವ-ಆನೆ ಸಂಘರ್ಷವನ್ನು ನಿರ್ವಹಿಸಲು ಮತ್ತು ತಗ್ಗಿಸಲು ನವೀನ ವಿಧಾನಗಳನ್ನು ಅಭಿವೃದ್ಧಿಪಡಿಸಲು ನಾವು ಈ ಸಮಾವೇಶದಲ್ಲಿ ಪ್ರಯತ್ನಿಸಲಿದ್ದೇವೆ. ಸಂಘರ್ಷದ ಸವಾಲು ಅರ್ಥಮಾಡಿಕೊಳ್ಳುವುದು, ಅಂತರ-ವಲಯ ಸಹಯೋಗವನ್ನು ಉತ್ತೇಜಿಸುವುದು, ತಂತ್ರಜ್ಞಾನವನ್ನು ಬಳಸಿಕೊಳ್ಳುವುದು ಮತ್ತು ಪರಿಣಾಮಕಾರಿ ಸಂವಹನವನ್ನು ಉತ್ತೇಜಿಸುವುದೇ ಮೊದಲಾದ ಪ್ರಮುಖ ವಿಷಯಗಳ ಮೇಲೆ ಈ ಸಮಾವೇಶದ ಗೋಷ್ಠಿಗಳಲ್ಲಿ ಚರ್ಚೆಗಳು ನಡೆಯಲಿವೆ.

ಈ ಸಮ್ಮೇಳನ ಈ ಎಲ್ಲ ಅಂಶಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಸಕಾರಾತ್ಮಕ ಬದಲಾವಣೆಗೆ ಚಾಲನೆ ನೀಡಲು ನಿರ್ಣಾಯಕವಾಗಿದೆ. ಶೂನ್ಯ ಮಾನವ-ಪ್ರಾಣಿ ಸಂಘರ್ಷ ವಲಯಗಳನ್ನು ಸೃಷ್ಟಿಸುವ ಗುರಿಯನ್ನು ಕರ್ನಾಟಕ ಹೊಂದಿದೆ. ಅರಣ್ಯ ಸಮನ್ವಯ ಯೋಜನೆ ಮತ್ತು ಯುವ ಸ್ವಯಂಸೇವಕರ ಪಾಲ್ಗೊಳ್ಳುವಿಕೆಯ ಮೂಲಕ ಸಾಮರಸ್ಯದ ಸಹಬಾಳ್ವೆಯನ್ನು ಉತ್ತೇಜಿಸುವ ಸಮುದಾಯ ಆಧಾರಿತ ಯೋಜನೆಯಾದ ಆನೆ-ಮಿತ್ರ ಯೋಜನೆಯಂತಹ ಉಪಕ್ರಮಗಳ ಮೂಲಕ ಮಾನವ-ಆನೆ ಸಂಘರ್ಷವನ್ನು ತಡೆಗಟ್ಟುವ ಪ್ರಯತ್ನಗಳನ್ನು ಮುಂದುವರಿಸಲು ರಾಜ್ಯವು ಬದ್ಧವಾಗಿದೆ.

ಮಾನವ-ಆನೆ ಸಂಘರ್ಷದ ಸಂಶೋಧನೆಗೆ ಪ್ರತ್ಯೇಕವಾಗಿ ಹಣವನ್ನು ಮೀಸಲಿಡುವ ಬಗ್ಗೆ ನಾನು ಪ್ರಸ್ತಾಪಿಸುತ್ತೇನೆ. ನಾವು ಈ ನಿಟ್ಟಿನಲ್ಲಿ ಸಾಗಬೇಕಾದ ಹಾದಿ ಇನ್ನೂ ಬಹುದೂರವಿದೆ. ನಾವು ಎದುರಿಸುತ್ತಿರುವ ಸವಾಲುಗಳು ನಿತ್ಯ ಹೆಚ್ಚಾಗುತ್ತಿವೆ. ಹವಾಮಾನ ಬದಲಾವಣೆ, ಆವಾಸಸ್ಥಾನದ ವಿಘಟನೆ ಮತ್ತು ಬದಲಾಗುತ್ತಿರುವ ಭೂ-ಬಳಕೆಯ ಮಾದರಿಗಳು ಪರಿಸ್ಥಿತಿಯನ್ನು ಉಲ್ಬಣಗೊಳಿಸುತ್ತವೆ. ಆನೆಗಳು ಮತ್ತು ಇತರ ವನ್ಯಜೀವಿಗಳಿಗೆ ಯಾವುದೇ ರಾಜ್ಯದ ಗಡಿ ಇರುವುದಿಲ್ಲ. ವನ್ಯ ಜೀವಿಗಳು ಒಂದು ರಾಜ್ಯದ ಕಾಡಿನಿಂದ ಮತ್ತೊಂದು ರಾಜ್ಯಕ್ಕೆ ಹೋಗುತ್ತವೆ. ಹೀಗಾಗಿ ಆನೆ ಸೇರಿದಂತೆ ವನ್ಯಜೀವಿ - ಮಾನವ ಸಂಘರ್ಷ ನಿಯಂತ್ರಣಕ್ಕೆ ನೆರೆ ರಾಜ್ಯಗೊಂದಿಗೆ ಸಹಯೋಗ ಮತ್ತು ಸಹಕಾರ ಅತ್ಯಂತ ಮುಖ್ಯವಾಗಿದೆ. ಅದೇ ರೀತಿ  ಅಂತರರಾಷ್ಟ್ರೀಯ ಗಡಿಗಳಾದ್ಯಂತ, ಸಹಯೋಗದ ನಿರ್ವಹಣೆಯೂ ಈ ಸಮಯದ ಅಗತ್ಯವಾಗಿದೆ ಎಂದು ತಿಳಿಸಿದರು.

ಈ ಅಂತಾರಾಷ್ಟ್ರೀಯ ಸಮ್ಮೇಳನವು ವಿಚಾರಗಳು, ಅನುಭವಗಳು ಮತ್ತು ಜ್ಞಾನವನ್ನು ವಿನಿಮಯ ಮಾಡಿಕೊಳ್ಳಲು ಒಂದು ವೇದಿಕೆಯನ್ನು ಒದಗಿಸುತ್ತದೆ. ಈ ಚರ್ಚೆಗಳಲ್ಲಿ ಮುಕ್ತತೆ ಮತ್ತು ನಾವೀನ್ಯತೆಯ ಮನೋಭಾವದಿಂದ ತೊಡಗಿಸಿಕೊಳ್ಳುವಂತೆ ನಾನು ಈ ಸಮಾವೇಶದಲ್ಲಿ ಭಾಗವಹಿಸಿರುವ ಎಲ್ಲರಿಗೂ ಮನವಿ ಮಾಡುತ್ತೇನೆ ಎಂದು ತಿಳಿಸಿದರು.

ನಾವು ಈ ಸಮಾವೇಶದಲ್ಲಿ ಹೊಸ ಮಾರ್ಗಗಳನ್ನು ಅನ್ವೇಷಿಸೋಣ, ಪರಸ್ಪರರ ಯಶಸ್ಸು ಮತ್ತು ವೈಫಲ್ಯಗಳಿಂದ ಕಲಿಯೋಣ ಮತ್ತು ಸುಸ್ಥಿರ, ಮಾನವೀಯ ಮತ್ತು ಅಂತರ್ಗತ ಕಾರ್ಯತಂತ್ರಗಳನ್ನು ಅಭಿವೃದ್ಧಿಪಡಿಸುವತ್ತ ಶ್ರಮಿಸೋಣ. ಪ್ರಪಂಚದಾದ್ಯಂತದ ತಜ್ಞರು, ನೀತಿ ನಿರೂಪಕರು ಮತ್ತು ಬಾಧ್ಯಸ್ಥರನ್ನು ಒಂದು ವೇದಿಕೆಯಲ್ಲಿ ಒಗ್ಗೂಡಿಸುವುದು ಸಣ್ಣ ಕೆಲಸವಲ್ಲ. ಇಂತಹ ಸಹಯೋಗದ ಪ್ರಯತ್ನಗಳ ಮೂಲಕ, ಮಾನವ-ಆನೆ ಸಂಘರ್ಷವನ್ನು ನಿರ್ವಹಿಸುವಲ್ಲಿ ಅರ್ಥಪೂರ್ಣ ಪ್ರಗತಿಯನ್ನು ಸಾಧಿಸಲು ನಾವು ಆಶಿಸುತ್ತೇವೆ.

ಮಾನವ-ವನ್ಯಜೀವಿ ಸಂಘರ್ಷದ ಭಾರವನ್ನು ಮೊದಲಿಗೆ ಹೊರುವವರೇ ಕಾಡಿನಂಚಿನ ನಮ್ಮ ಸ್ಥಳೀಯ ಸಮುದಾಯದವರು.  ಇವರಿಗೆ ನೆಮ್ಮದಿಯ ಬದುಕು ನೀಡುವ ಜವಾಬ್ದಾರಿ ನಮ್ಮ ಮೇಲಿದೆ. ಈ ನಿಟ್ಟಿನಲ್ಲಿ ಇಂದಿನ ಈ ಸಮಾವೇಶ ಫಲಪ್ರದವಾಗುತ್ತದೆ. ಮಾನವ-ಆನೆ ಸಂಘರ್ಷದ ಸವಾಲನ್ನು ನಿಭಾಯಿಸಲು ಸಾಮೂಹಿಕ ಇಚ್ಛಾಶಕ್ತಿ, ನವೀನ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಬಳಕೆ ಹಾಗೂ ಸುಸ್ಥಿರ ಅಭಿವೃದ್ಧಿಯ ಬದ್ಧತೆ ಅತಿ ಮುಖ್ಯವಾಗಿದೆ. ಈ ಸಮಾವೇಶದ ಬಳಿಕವೂ ಎಲ್ಲ ಬಾಧ್ಯಸ್ಥರ ನಡುವೆ ನಿರಂತರವಾಗಿ ಈ ನಿಟ್ಟಿನಲ್ಲಿ ಚರ್ಚೆಗಳು, ಸಮಾಲೋಚನೆಗಳು ನಡೆದು ಜಾಗತಿಕ ಒಳಿತಿಗೆ ನಾಂದಿ ಹಾಡಲಿ ಎಂದು ಬಯಸುತ್ತೇನೆ ಮತ್ತು ಆ ಫಲಶ್ರುತಿಯನ್ನು ನಾನು ಎದುರು ನೋಡುತ್ತಿದ್ದೇನೆ ಎಂದು ತಿಳಿಸಿದರು.

ಅಂತಿಮವಾಗಿ ಈ ಸಮಾವೇಶದಲ್ಲಿ ಹೊರಹೊಮ್ಮುವ ಅಭಿಪ್ರಾಯಗಳು, ಚಿಂತನೆಗಳು, ನಮಗೆ ಮಾರ್ಗದರ್ಶನ ನೀಡಲಿ ಎಂದು ತಿಳಿಸಿದರು.

ಜಾರಖಂಡ್ ಅರಣ್ಯ ಇಲಾಖೆ ಸಚಿವ ಬೈದ್ಯನಾಥ ರಾಮ್ ಅವರು ಮಾತನಾಡಿ ಕರ್ನಾಟಕದಲ್ಲಿರವಂತೆ ಜಾರಖಂಡ್‍ನಲ್ಲಿ ಆನೆ ಮತ್ತು ಮಾನವ ಸಂಘರ್ಷವಿದೆ.  ಈ ದಿಸೆಯಲ್ಲಿ ಜಾಖರ್ಂಡ್ ಸರ್ಕಾರ ವನ್ಯಜೀವಿ ಸಂರಕ್ಷಣೆಗೆ ಆದ್ಯತೆ ನೀಡುತ್ತಿದೆ. ಆನೆ ಸಂರಕ್ಷಣಾ ಪ್ರದೇಶ ವನ್ನು ಗುರುತಿಸಲಾಗಿದೆ. ಎಫ್ ಎಂ ರೆಡಿಯೋ ಮತ್ತು ಮೊಬೈಲ್ ಆ್ಯಪ್ ಮೂಲಕ ಆನೆಗಳ ಚಲನವಲನಗಳ ಕುರಿತು ಗಮನಹರಿಸಲಾಗುತ್ತಿದೆ. ಈ  ಸಮ್ಮೇಳನದಲ್ಲಿ  ಹೊರಹೊಮ್ಮುವ ಸಲಹೆಸೂಚನೆಗಳನ್ನು  ಜಾಖರ್ಂಡ್ ಸರ್ಕಾರ ಪಾಲನೆ ಮಾಡುತ್ತದೆ ಎಂದು ತಿಳಿಸಿದರು

ತಮಿಳುನಾಡಿನ ಅರಣ್ಯ ಸಚಿವ ಮದಿವೆಂಧನ್  ಅವರು ಮಾತನಾಡಿ ಆನೆ ಮತ್ತು ಮಾನವ ಸಂಘರ್ಷ ತಡೆಗೆ ತಮಿಳುನಾಡು ಸರ್ಕಾರ ವಿವಿಧ ಕ್ರಮಗಳನ್ನು ಕೈಗೊಂಡಿದೆ 5 ಆನೆ ಸಂರಕ್ಷಣಾ ಪ್ರದೇಶಗಳನ್ನು ಗುರುತಿಸಿದೆ. ಆನೆಗಳು ಮೃತಪಟ್ಟ ಸಂದರ್ಭದಲ್ಲಿ ಮಾಹಿತಿ ಸಂಗ್ರಹಿಸಲಾಗುತ್ತದೆ. ವನ್ಯಜೀವಿ ಸಂರಕ್ಷಣಾ ಸಮಿತಿ ರಚಿಸಲಾಗಿದೆ ಸಮಾವೇಶದ ಸಲಹೆ  ಸೂಚನೆಗಳನ್ನು ಸ್ವೀಕರಿಸಲಾಗುತ್ತದೆ ಎಂದು ತಿಳಿಸಿದರು.

ಕೇರಳ ಅರಣ್ಯ ಸಚಿವ ಸಸಿಂದ್ರನ್ ಅವರು ಮಾತನಾಡಿ ಕೇರಳ ರಾಜ್ಯದಲ್ಲಿ  ಸಹ ಆನೆ ಮತ್ತು ಮಾನವ ಸಂಘರ್ಷಣೆ ಇದೆ. ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಯು ಮಹತ್ವವಾಗಿದೆ.  ಈ ದಿಸೆಯಲ್ಲಿ  ಸರ್ಕಾರವು ಹಲವರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ಸಮ್ಮೇಳನದಲ್ಲಿ ಹೊರಹೊಮ್ಮುವ ಸಲಹೆಗಳನ್ನು ಸ್ವೀಕರಿಸಲಾಗುವುದು ಎಂದು ತಿಳಿಸಿದರು.

Post a Comment

0Comments

Post a Comment (0)