ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತದಲ್ಲಿ ನಡೆದ ಹಣಕಾಸಿನ ಅವ್ಯವಹಾರಕ್ಕೆ ಸಂಬಂಧಿಸಿದಂತೆ ತನಿಖಾ ವಿವರ

varthajala
0

 ಬೆಂಗಳೂರು, (ಕರ್ನಾಟಕ ವಾರ್ತೆ) : ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತದಲ್ಲಿ ನಡೆದ ಹಣಕಾಸಿನ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಹೈಗೌಂಡ್ಸ್ ಪೆÇಲೀಸ್ ಠಾಣೆಯಲ್ಲಿ ಮೊಕದ್ದಮೆ ಸಂಖ್ಯೆ: 118/2024 ಕಲಂ 149, 409, 420. 467, 471 ಐಪಿಸಿ ಪ್ರಕರಣ ದಾಖಲಾಗಿರುತ್ತದೆ.

ಈ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲಾ ಅಪರಾಧಿಗಳನ್ನು ಪತ್ತೆ ಹಚ್ಚಲು ಮತ್ತು ಕಾನೂನು ಕ್ರಮ ಜರುಗಿಸಲು ಸಮಗ್ರ ತನಿಖೆಯ ಅಗತ್ಯವಿದೆ ಎಂಬುದನ್ನು ಹಾಗೂ ದುರುಪಯೋಗ ಪಡಿಸಿಕೊಂಡಿರುವ ಹಣವನ್ನು ನಿಗಮಕ್ಕೆ ಮರಳಿಸಬೇಕು ಎಂಬುದನ್ನು ಮನಗಂಡು ಕರ್ನಾಟಕ ಸರ್ಕಾರವು ತನ್ನ ಆದೇಶ ಸಂಖ್ಯೆ: ಹೆಚ್.ಡಿ 64 ಸಿಐಡಿ 2024, ಬೆಂಗಳೂರು, ದಿನಾಂಕ: 31.05.2024 ರಲ್ಲಿ ಮೇಲ್ಕಂಡ ಪ್ರಕರಣ ಮತ್ತು ಅದಕ್ಕೆ ಸಂಬಂಧಿಸಿದ ಇತರ ಪ್ರಕರಣಗಳನ್ನು ತನಿಖೆ ಮಾಡುವ ಸಲುವಾಗಿ ರಾಜ್ಯದ ಸಿಐಡಿ. ಘಟಕದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಿರುತ್ತದೆ.

ಸದರಿ ವಿಶೇಷ ತನಿಖಾ ತಂಡವು ಪೆÇಲೀಸ್ ಮಹಾ ನಿರ್ದೆಶಕರು, ಸಿಐಡಿ ರವರ ಮಾರ್ಗದರ್ಶನ ಹಾಗೂ ಮೇಲುಸ್ತುವಾರಿಯಲ್ಲಿ ತನಿಖೆಯನ್ನು ಕೈಗೊಂಡಿರುತ್ತದೆ. ಪ್ರಸ್ತುತ ಮೇಲ್ಕಂಡ ಪ್ರಕರಣವನ್ನು ಒಳಗೊಂಡಂತೆ ಒಟ್ಟಾರೆ 08 ಪ್ರಕರಣಗಳ ತನಿಖೆಯನ್ನು ವಿಶೇಷ ತನಿಖಾ ತಂಡವು ಕೈಗೊಂಡಿದೆ.

ವಿಶೇಷ ತನಿಖಾ ತಂಡವು ತನಿಖಾ ಸಂದರ್ಭದಲ್ಲಿ  ಜೆ.ಜಿ.ಪದ್ಮನಾಭ್, ವ್ಯವಸ್ಥಾಪಕರು, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರು, ಪರಶುರಾಮ ದುಗ್ಗಣ್ಣನವರ್, ಲೆಕ್ಕಾಧೀಕ್ಷಕರು, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರು ಸತ್ಯನಾರಾಯಣ ಇಟಕಾರಿ, ಅಧ್ಯಕ್ಷರು, ಫಸ್ಟ್ ಫೈನಾನ್ಸ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿಯಮಿತ, ನೆಕ್ಕುಂಟೆ ನಾಗರಾಜ್, ಮಾಜಿ ಸಚಿವ ನಾಗೇಂದ್ರ ರವರ ಪರಿಚಯಸ್ಥರು, ನಾಗೇಶ್ವರ ರಾವ್, ನೆಕ್ಕುಂಟೆ ನಾಗರಾಜ್ ರವರ ಭಾವಮೈದುನ,   ಎಂ.ಚಂದ್ರಮೋಹನ್, ಹೈದರಾಬಾದ್,  ಗಾದಿರಾಜು ಸತ್ಯನಾರಾಯಣ ವರ್ಮ, ಹೈದರಾಬಾದ್,  ಜಗದೀಶ ಜಿ.ಕೆ., ಉಡುಪಿ, ತೇಜ ತಮ್ಮಯ್ಯ, ಬೆಂಗಳೂರು, ಪಿಟ್ಟಲ ಶ್ರೀನಿವಾಸ, ಗಚ್ಚಿಬೌಲಿ, ಆಂಧ್ರಪ್ರದೇಶ, ಸಾಯಿತೇಜ, ಹೈದರಾಬಾದ್ ಮತ್ತು  ಕಾಕಿ ಶ್ರೀನಿವಾಸ ರಾವ್, ಆಂಧ್ರಪ್ರದೇಶ ಇವರುಗಳನ್ನು ವಶಕ್ಕೆ ಪಡೆದು ಅವರುಗಳನ್ನು ಬಂಧಿಸಿರುತ್ತದೆ

ವಿಶೇಷ ತನಿಖಾ ತಂಡವು ಮೇಲ್ಕಂಡ ಆರೋಪಿಗಳಿಂದ ನಗದು. ಚಿನ್ನ ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಂಡಿದೆ.  ವಶಪಡಿಸಿಕೊಂಡಿರುವ ನಗದು ರೂ 16,83,35,000-00, ವಶಪಡಿಸಿಕೊಂಡಿರುವ ಚಿನ್ನ 16.256 ಕೆ.ಜಿ ರೂ 11,70,33,120-00 ವಶಪಡಿಸಿಕೊಂಡಿರುವ ಲ್ಯಾಂಬೋರ್ಗಿನಿ ಉರುಸ್ ಮತ್ತು ಮರ್ಸಿಡಿಸ್ ಬೆಂಜ್ ಕಾರ್ಗಗಳ ಒಟ್ಟು ಮೌಲ್ಯ ರೂ 4,51,19,106-00, ತನಿಖಾಧಿಕಾರಿಯ ಹೆಸರಿನಲ್ಲಿರುವ ಬ್ಯಾಂಕ್ ಖಾತೆ ರೂ 3,19,11,500-00, ಸ್ಥಗಿತಗೊಳಿಸಲಾಗಿರುವ ಖಾತೆಗಳಲ್ಲಿರುವ ರೂ. 13,72.94,132-00 ಒಟ್ಟು ಮೊತ್ತ ರೂ 49,96,92,918.00.

ವಿಶೇಷ ತನಿಖಾ ತಂಡದ ತನಿಖಾಧಿಕಾರಿರವರು ಹೈಗ್ರೆಂಡ್ಸ್ ಪೆÇಲೀಸ್ ಠಾಣೆ ಮೊಕದ್ದಮೆ ಸಂಖ್ಯೆ: 118/2024 ರ ಪ್ರಕರಣದಲ್ಲಿ ಮೇಲ್ಕಂಡ ವಿರುದ್ಧ 500 120(ಬಿ), 406, 409, 420, 465, 468, 471 ಐ.ಪಿ.ಸಿ ಅಡಿಯಲ್ಲಿ ಮಾನ್ಯ 3ನೇ ಎಸಿಎಂಎಂ ನ್ಯಾಯಾಲಯ, ಬೆಂಗಳೂರು ಇಲ್ಲಿ 7 ಸಂಪುಟ, 3072 ಪುಟಗಳನ್ನೊಳಗೊಂಡ ಪ್ರಾಥಮಿಕ ದೋμÁರೋಪಣಾ ಪಟ್ಟಿಯನ್ನು ಸಲ್ಲಿಸಿದ್ದು. ಮುಂದುವರೆದ ತನಿಖೆಯನ್ನು ಕೈಗೊಂಡಿರುತ್ತಾರೆ.

ವಿಶೇಷ ತನಿಖಾ ತಂಡವು ಮೇಲ್ಕಂಡ ಪ್ರಕರಣ ಹಾಗೂ ಇತರೇ 07 ಪ್ರಕರಣಗಳ ತನಿಖೆಯನ್ನು ವೃತ್ತಿಪರ ಮತ್ತು ಪಾರದರ್ಶಕವಾಗಿ ಕೈಗೊಳ್ಳುವಲ್ಲಿ ಎಲ್ಲಾ ರೀತಿಯ ಪ್ರಯತ್ನಗಳನ್ನು ನಡೆಸಿದ್ದು, ತನಿಖೆಯು ಮುಂದುವರೆದಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Post a Comment

0Comments

Post a Comment (0)