ಹೊಟೆಲ್ ನಳಪಾಕದಲ್ಲಿ ವಂದೇ ಕರ್ನಾಟಕ ಮಾಸ ಪತ್ರಿಕೆ ಬಿಡುಗಡೆ

varthajala
0

 ಹೊಟೆಲ್ ನಳಪಾಕದಲ್ಲಿ ವಂದೇ ಕರ್ನಾಟಕ ಮಾಸ ಪತ್ರಿಕೆ ಬಿಡುಗಡೆ
ವಿಶ್ವಾಸರ್ಹತೆ ಉಳಿಸಿಕೊಂಡಿರುವ ಮುದ್ರಣ ಮಾಧ್ಯಮ ಬಗ್ಗೆ ಪ್ರಶಂಸೆ

ಬೆಂಗಳೂರು: 78ನೇ ಸ್ವಾತಂತ್ರ ದಿನಾಚರಣೆ ಸಂದರ್ಭದಲ್ಲಿ ಹಾಗೂ ಹೋಟೆಲ್ ನಳಪಾಕ 25ನೇ ವರ್ಷದ ಸಂಭ್ರಮಾಚರಣೆ ಸಂದರ್ಭದಲ್ಲಿ ಏರ್ಪಡಿಸಿದ್ದ ಸರಳ ಕಾರ್ಯಕ್ರಮದಲ್ಲಿ ಲಿಂಗಯ್ಯ ಕಾಡದೇವರಮಠ ಅವರ ಸಂಪಾದಕತ್ವದ ವಂದೇ ಕರ್ನಾಟಕ ಮಾಸಿಕ ಪತ್ರಿಕೆ ಬಿಡುಗಡೆಗೊಂಡಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ಪತ್ರಕರ್ತ ಆರ್.ಪಿ.ಜಗದೀಶ್, ಮುದ್ರಣ ಮಾಧ್ಯಮ ಇಂದಿಗೂ ಜನರ ನಡುವೆ ವಿಶ್ವಾಸರ್ಹತೆಯನ್ನು ಉಳಿಸಿಕೊಂಡಿದೆ. ವಂದೇ ಕರ್ನಾಟಕ  ಹೊಸ ಮಾಸಪತ್ರಿಕೆ ಜನ ಮಾನಸದ ನಡುವೆ ಉತ್ತಮ ಪತ್ರಿಕೆಯಾಗಿ ಮೂಡಿಬರಲಿ ಎಂದರು.


ವಿಜಯವಾಣಿ ಸಂಪಾಕದ ಕೆ.ಎನ್.ಚನ್ನೇಗೌಡ ಅವರು ಮಾತನಾಡಿ, ಹಲವು ಪತ್ರಿಕೆಯಲ್ಲಿ ಜಾಹೀರಾತು ವಿಭಾಗದಲ್ಲಿ ಕೆಲಸ ಮಾಡಿರುವ ಲಿಂಗಯ್ಯ ಅವರು ಹೋಟೆಲ್ ಉದ್ಯಮದಲ್ಲಿ ಯಶಸ್ಸು ಕಂಡಿದ್ದು, ಈಗ ಮಾಸಿಕ ಪತ್ರಿಕೆ ತರುವ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಅವರಿಗೆ ಶುಭವಾಗಲಿ ಎಂದರು.

ಗಡಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಮಾತನಾಡಿ, ಕಾಯಕ ನಿಷ್ಟೆ ಎನ್ನುವುದು ನಮ್ಮನ್ನು ಬಹಳ ಎತ್ತರಕ್ಕೆ ಬೆಳೆಸುವ ಮೂಲಕ ಸಾಧಕರನ್ನಾಗಿ ಮಾಡುತ್ತದೆ. ಈ ನಿಟ್ಟಿನಲ್ಲಿ ನಂಬಿಕೆ ಇಟ್ಟುಕೊಂಡು ಹೋಟೆಲ್ ಉದ್ಯಮದಲ್ಲಿ ಯಶಸ್ವಿಯಾಗಿರುವ ಲಿಂಗಯ್ಯ ದಂಪತಿಗಳಿಗೆ ಪತ್ರಿಕಾ ರಂಗದಲ್ಲಿಯೂ ಶುಭವಾಗಲಿ ಎಂದರು.  

ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಮಾತನಾಡಿ, ಮಾಧ್ಯಮಕ್ಕೆ ತನ್ನದೇ ಆದ ಪ್ರಭಾವವಿದೆ. ಅದು ಸದ್ಬಳಕೆಯಾಗಲಿ. ನನಗೂ ಮತ್ತು ಲಿಂಗಯ್ಯ ಅವರ ನಡುವೆ ಅವಿನಾಭವ ಸಂಬಂಧವಿದೆ. ಅವರು ಯಾವುದೇ ಪ್ರಯತ್ನಗಳಿಗೆ ನನ್ನ ಸಂಪೂರ್ಣ ಬೆಂಬಲವಿರಲಿದೆ ಎಂದು ಹೇಳಿದರು.

ಹಿರಿಯ ಪತ್ರಕರ್ತ ರವೀಂದ್ರ ರೇಷ್ಮೆ ಮಾತನಾಡಿ, ಪರಸ್ಪರ ನಂಬಿಕೆ ಮತ್ತು ವಿಶ್ವಾಸವನ್ನು ಕಳೆದುಕೊಳ್ಳುವ ಮಟ್ಟಕ್ಕೆ ಮಾಧ್ಯಮ ಕ್ಷೇತ್ರದಲ್ಲಿ ಬೆಳವಣಿಗೆಗಳಾಗಿವೆ. ಜಾಹೀರಾತು ವಿಭಾಗವೇ ಪತ್ರಿಕೆಯನ್ನು ಆಳು ಮತ್ತು ಸಂಪಾದಕೀಯ ತಂಡದ ಮೇಲೆ ಉಸ್ತುವಾರಿ ಮಾಡುತ್ತಿರುವುದು ನೋವಿನ ಸಂಗತಿ ಎಂದು ವಿಷಾದಿಸಿದರು.

ಹೋಮಿಯೋಪತಿ ಖ್ಯಾತಿಯ ಡಾ.ಬಿ.ಟಿ.ರುದ್ರೇಶ್ ಮಾತನಾಡಿ, ಹೋಟೆಲ್ ಉದ್ಯಮದ ಮೂಲಕ ದಾಸೋಹದಲ್ಲಿ ಮಾತ್ರ ಗುರುತಿಸಿಕೊಂಡಿದ್ದ ಲಿಂಗಯ್ಯ ಅವರು ಅಕ್ಷರ ದಾಸೋಹಕ್ಕೂ ಬಂದಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದರು.

ರಮಣಶ್ರೀ ಬಳಗದ ಷಡಾಕ್ಷರಿ, ನಿವೃತ್ತ ಐಎಎಸ್ ಅಧಿಕಾರಿ ಮುದ್ದುಮೋಹನ್, ಎವಿ ಆಸ್ಪತ್ರೆಯ ಡಾ. ರಮೇಶ್ ಮಾಕಮ್, ಎನ್ಟಿಪಿಸಿಯ ಜಯರಾಂ ಮಾತನಾಡಿ, ಡಿಜಿಟಲ್ ಯುಗದಲ್ಲಿ ಹೊಸ ಮಾಸ ಪತ್ರಿಕೆ ತರುವುದು ದೊಡ್ಡ ಸವಾಲಿನ ಕೆಲಸ. ಅಂಥಹ ಪ್ರಯತ್ನಕ್ಕೆ ಕೈ ಹಾಕಿರುವ ಕಾಡುದೇವರ ಮಠ ದಂಪತಿಗಳಿಗೆ ಶುಭವಾಗಲಿ ಎಂದು ಹಾರೈಸಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅಧ್ಯಕ್ಷತೆ ವಹಿಸಿ ಮಾತನಾಡಿ, ವಂದೇ ಕರ್ನಾಟಕ ವಿಶ್ವಾಸರ್ಹತೆಯುಳ್ಳ ಮಾಸಿಕವಾಗಿ ಬೆಳೆಯಲಿ ಎಂದರು. ಮಾಸಿಕ ಪತ್ರಿಕೆಯ ಸಂಪಾದಕ ಲಿಂಗಯ್ಯ ಕಾಡದೇವರ ಮಠ ಮತ್ತು ಶ್ರೀಮತಿ ಕವಿತ ಲಿಂಗಯ್ಯ ಕಾಡದೇವರ ಮಠ ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಲಿಂಗಯ್ಯ ಕಾಡದೇವರ ಮಠ ದಂಪತಿಗಳನ್ನು ಹಲವರು ಸನ್ಮಾನಿಸಿ ಶುಭ ಹಾರೈಸಿದರು.

Post a Comment

0Comments

Post a Comment (0)