ಶ್ರೇಷ್ಠ ಅಧ್ಯಾಪಕರಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಸಾಹಿತ್ಯವನ್ನು ಭೋಧಿಸಿದ ಪ್ರೊ. ಎಲ್.ಎಸ್. ಶೇಷಗಿರಿರಾವ್ ಅವರು ಕನ್ನಡ ಸಾಹಿತ್ಯವನ್ನು ವಿಶ್ವಕ್ಕೆ ಪರಿಚಯಿಸಿದ ಅಪ್ಪಟ ಕನ್ನಡ ಪ್ರೇಮಿಯಾಗಿದ್ದರು ಎಂದು ಶೇಷಾದ್ರಿಪುರ ಇನ್ಸ್ಟಿಟ್ಯೂಟ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್ ಕನ್ನಡ ಪ್ರಾಧ್ಯಪಕಿ ಡಾ.ಎಸ್. ಪೂರ್ಣಿಮಾ ಅವರು ಮಾಗಡಿ ರಸ್ತೆ, ಕೆ.ಪಿ. ಅಗ್ರಹಾರದ ಸೇಂಟ್ ಮಾರ್ಟಿನ್ ಪ್ರೌಢಶಾಲೆಯಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಮತ್ತು ಕನ್ನಡ ಗೆಳೆಯರ ಬಳಗಗಳು ವ್ಯವಸ್ಥೆ ಮಾಡಿದ್ದ ‘ಪ್ರೊ. ಎಲ್.ಎಸ್. ಶೇಷಗಿರಿರಾವ್ ಶತಮಾನೋತ್ಸವ ನೆನಪಿನ ಉಪನ್ಯಾಸ’ದಲ್ಲಿ ನುಡಿದರು.
ಸೇಂಟ್ ಮಾರ್ಟಿನ್ ಪ್ರೌಢಶಾಲೆ ಉಪಪ್ರಾಂಶುಪಾಲರಾದ ಜ್ಯೋತಿ ಗಣೇಶ್ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ರಾ.ನಂ. ಚಂದ್ರಶೇಖರ ಪ್ರಾಸ್ಥಾವಿಕ ಮಾತುಗಳನ್ನಾಡಿದರು. ಜ್ಞಾನ ವಿಜ್ಞಾನ ಸಮಿತಿ ಬೆಂಗಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷ ನಾ. ಶ್ರೀಧರ ಸ್ವಾಗತಿಸಿದರು. ಕೆ ಜೆ ವಿ ಎಸ್ ಕಾರ್ಯದರ್ಶಿ ಎಂಲಕ್ಷ್ಮಿ ನರಸಿಂಹ ಕಾರ್ಯಕ್ರಮ ನಿರೂಪಣೆ ಮಾಡಿದರು. ಅಧ್ಯಾಪಕಿ ಭಾಗ್ಯಲಕ್ಷ್ಮಿ ಸಭೆಗೆ ವಂದಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ವಿಧಾನಸಭಾಧ್ಯಕ್ಷರುಗಳು, ಬೋಧಕವೃಂದದವರು, ವಿದ್ಯಾರ್ಥಿಗಳು ಸಭೆಯಲ್ಲಿ ಭಾಗವಹಿಸಿದ್ದರು.