ಸಾಂಸ್ಕೃತಿಕ ಲೋಕದಲ್ಲಿ ನೈತಿಕತೆ ಕಡಿಮೆಯಾಗುತ್ತಿರುವ ಕಾಲಘಟ್ಟದಲ್ಲಿ ಭರವಸೆಯ ಆಶಾಕಿರಣ ಹಂಸಜ್ಯೋತಿ

varthajala
0

 ನಾಡಿನ ಸಾಂಸ್ಕೃತಿಕ ಚಳುವಳಿಯ ಸಂದರ್ಭದಲ್ಲಿ ಪ್ರಮುಖ ಸಂಸ್ಥೆಯಾದ ಹಂಸ ಜ್ಯೋತಿ ಟ್ರಸ್ಟ್ ನ  49ನೇ ವರ್ಷಾಚರಣೆ ಪ್ರಯುಕ್ತ ಹಂಸ ಸಾಂಸ್ಕೃತಿಕ ಸೌರಭ ಹಾಗೂ ಹಂಸ ಸನ್ಮಾನ ಪ್ರಶಸ್ತಿ ಪ್ರದಾನವನ್ನು ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಜುಲೈ 31 ಸಂಜೆ ಬೆಂಗಳೂರು ಮಲ್ಲತ್ತಹಳ್ಳಿ ಕಲಾಗ್ರಾಮದ ಸಾಂಸ್ಕೃತಿಕ ಸಮುಚ್ಚಯ ಭವನದಲ್ಲಿ ಆಯೋಜಿಸಲಾಗಿತ್ತು. ಹಿರಿಯರಂಗ ಸಂಘಟಕ ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ  ಶ್ರೀನಿವಾಸ ಜಿ ಕಪ್ಪಣ್ಣ ಸಮಾರಂಭ ಉದ್ಘಾಟಿಸಿ ಮಾತನಾಡುತ್ತ ಪಾರಂಪರಿಕ ಶ್ರೀಮಂತಿಕೆಯ ಹಿನ್ನೆಲೆಯ ಸಾಂಸ್ಕೃತಿಕ ಲೋಕದಲ್ಲಿ ನೈತಿಕತೆ ಕಡಿಮೆಯಾಗುತ್ತಿರುವ ಕಾಲಘಟ್ಟದಲ್ಲಿ ಭರವಸೆಯ ಆಶಾಕಿರಣವಾಗಿ ಯಾವುದೇ ಸದ್ದುಗದ್ದಲವಿಲ್ಲದೆ ತನ್ನ ಸಾಮಾಜಿಕ- ಕಲಾತ್ಮಕ ಕೈಂಕರ್ಯದಿಂದ ಹಂಸಜ್ಯೋತಿ ಸುವರ್ಣ ಸಂಭ್ರಮದ ಹೊಸ್ತಿಲಲ್ಲಿ ನಿಂತಿರುವುದು ಒಂದು ಮೈಲಿಗಲ್ಲೇ ಸರಿ. ಸಮಾಜದಲ್ಲಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವ ಸಾಧಕೋತ್ತಮರನ್ನು ಗೌರವಿಸುತ್ತಿರುವುದು ಅಭಿನಂದನೀಯ ಎಂದು ಅಭಿಪ್ರಾಯಪಟ್ಟರು .

                        

ಹಂಸ ಜ್ಯೋತಿ ಟ್ರಸ್ಟ್ ನ ಸಂಸ್ಥಾಪಕ ವ್ಯವಸ್ಥಾಪಕ ಟ್ರಸ್ಟಿ  ಎಂ ಮುರುಳಿಧರ ಪ್ರಾಸ್ತಾವಿಕ ನುಡಿಗಳನ್ನುತ್ತ  ಕಳೆದ ಐದು ದಶಕದಿಂದ  ಕಲಾಪೋಷಕರ ಸಹಕಾರದೊಡನೆ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ನಿರಂತರವಾಗಿ  ನಾಡು- ನುಡಿಯ ಸೇವೆ ಸಲ್ಲಿಸಿರುವ ಸಂತೃಪ್ತಿ ಇದೇ, ಅಭಿಮಾನಿಗಳ ಪ್ರೋತ್ಸಾಹದ ಶ್ರೀರಕ್ಷೆಯೊಂದಿಗೆ ಮುಂದಿನ ವರ್ಷ ಪೂರ್ತಿ ಅರ್ಥಪೂರ್ಣ ಸುವರ್ಣ ಸಂಭ್ರಮಾಚರಣೆ ನಡೆಸಲು ಕಾರ್ಯಯೋಜನೆ ರೂಪಿಸಿಲಾಗಿದೆ ಎಂದು ತಿಳಿಸಿದರು.

                 

ಕಾರ್ಮಿಕ ಇಲಾಖೆ ಜಂಟಿ ಕಾರ್ಯದರ್ಶಿ ಹಾಗೂ ಚಲನಚಿತ್ರ ಕಲಾವಿದ ಡಾ ಸಂಗಮೇಶ ಉಪಾಸೇಹಿರಿಯ ಸಾಂಸ್ಕೃತಿಕ ಸಂಘಟಕ ಡಿ.ಬಿ ಮಲ್ಲಿಕಾರ್ಜುನ ಸ್ವಾಮಿ ಮಹಾಮನೆಪ್ರಾಂಶುಪಾಲ ಡಾ.ಆರ್ ಎನ್ ಸುಬ್ಬರಾವ್ಸಮಾಜ ಸೇವಕಿ ಡಾ.ಸುಕನ್ಯಾ ಹಿರೇಮಠಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ರಾಜ್ಯಾಧ್ಯಕ್ಷ ರೋಶಿನಿ  ಗೌಡಉದ್ಯಮಿ ಕೆ. ಶ್ರೀನಿವಾಸಲು ರೆಡ್ಡಿಟಿ.ಎನ್ ಗಂಗಾಧರ್ಶಿಲ್ಪ ಶ್ರೀಆರ್‌.ಪಿ ರವಿಶಂಕರ್ಶಿರಸ್ತೆದಾರ್ ಎಂ ವಿಜಯಲಕ್ಷ್ಮಿನೃತ್ಯ ಶಿಕ್ಷಕಿ ವಿದುಷಿ ಬಿಎಸ್ ಇಂದು ನಾಡಿಗ್ಶುಶ್ರೂಷ ಅಧಿಕ್ಷಕಿ ಎನ್ ಸುಮಿತ್ರಾ ದೇವಿಲೆಕ್ಕಪರಿಶೋಧಕ ಕೆ ಅಂಜನ್ ಕುಮಾರ್ಮೃದಂಗ ಲಯವಾದ್ಯ ಕಲಾವಿದ ವಿದ್ವಾನ್ ಬೆಟ್ಟ ವೆಂಕಟೇಶ್ಬ್ಯಾಂಕ್ ಆಫ್ ಬರೋಡಾದ ಸಹಾಯಕ ಕಾರ್ಯನಿರ್ವಾಹಕ   ಸದಾನಂದ ಜಿ ಕುರುಡಿಕೇರಿ ಇವರುಗಳಿಗೆ ಪ್ರತಿಷ್ಠಿತ 2024ನೇ ಸಾಲಿನ ಹಂಸ ಸನ್ಮಾನ ಪ್ರಶಸ್ತಿ ‘ ಮತ್ತು ಸೋಹಿಲ್ ಷಾ ಅವರಿಗೆ ಹಂಸ ಯುವ ಪುರಸ್ಕಾರ  ವನ್ನು ಶಾಲು , ಹಾರ , ಸುಂದರ ಶಾರದೆಯ ಸ್ಮರಣಿಕೆ ಮತ್ತು ಅಭಿನಂದನಾ ಪತ್ರದೊಂದಿಗೆ  ಪ್ರದಾನ ಮಾಡಿ ಗೌರವಿಸಲಾಯಿತು .

                        

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕಿದ್ವಾಯಿ ಆಸ್ಪತ್ರೆಯ ನಿವೃತ್ತ ನಿರ್ದೇಶಕ ಡಾ. ಸಿ. ರಾಮಚಂದ್ರ ಮಾತನಾಡುತ್ತ ಆರೋಗ್ಯಕರ ಜೀವನಶೈಲಿಯಿಲ್ಲದೆ ದುಶ್ಚಟಗಳಿಗೆ ದಾಸರಾಗುವ ಬದಲು ಸ್ವಸ್ಥ ಸಮಾಜ ರೂಪುಗೊಳ್ಳಲು ಸಕಾರತ್ಮಾಕ ಆಲೋಚನೆಯ ಇಂತಹ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಹಂಸ ಜ್ಯೋತಿಯ ಕಾರ್ಯ ಪ್ರಶಂಸನೀಯ ಎಂದು ತಿಳಿಸಿದರು. ಅಬಕಾರಿ ಇಲಾಖೆ ಉಪ ಯುಕ್ತ ಡಾ .ಬಿ .ಆರ್. ಹಿರೇಮಠ ಮು.ಮುರಳಿಧರ ಶ್ರದ್ಧೆ ಹಾಗೂ ಶ್ರಮದ ರೂಪಕ , ರಾಜ್ಯಾದ್ಯಂತ ತನ್ನದೇ ಆದ ಛಾಪನ್ನು ಮೂಡಿಸುತ್ತಿರುವ ಶ್ರೀಯುತರಿಗೆ ಸೂಕ್ತ  ಗೌರವ ಮನ್ನಣೆ ಸಿಗಬೇಕೆಂದು ಆಶಿಸಿದರು.

                        

 ಬಿಎಂಶ್ರೀ ಪ್ರತಿಷ್ಠಾನದ ಅಧ್ಯಕ್ಷ ಡಾ. ಬೈರಮಂಗಲ ರಾಮೇಗೌಡ , ಉದ್ಯಮಿ ಜಯರಾಂ ಶೆಟ್ಟಿ, ಸಮಾಜ ಸೇವಕ ಎಂ ಜಯಕುಮಾರ್ , ಎಸ್.ಟಿ.ಉದಯಕುಮಾರ್, ಹಿರಿಯ ಟ್ರಸ್ಟಿ ಎಂ. ಆರ್ .ನಾಗರಾಜ ನಾಯ್ಡು ಮೊದಲಾದ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಮಂಡ್ಯದ ಉಪನ್ಯಾಸಕಿ ಭವಾನಿ ಲೋಕೇಶ್ ಕಾರ್ಯಕ್ರಮ ನಿರೂಪಿಸಿದರು.

 

 ಕಾರ್ಯಕ್ರಮದ ಆರಂಭದಲ್ಲಿ ಹಂಸ ಸಾಂಸ್ಕೃತಿಕ ವೈಭವ-  ನಾದತರಂಗಿಣಿ ತಂಡದಿಂದ ವಿದ್ವಾನ್ ಬೆಟ್ಟ ವೆಂಕಟೇಶ್ ನಿರ್ದೇಶನದಲ್ಲಿ ಖ್ಯಾತ ಕಲಾವಿದರಾದ ವೀಣೆ- ವಿ|| ಆರ್.ಪಿ .ಪ್ರಶಾಂತ್ . ಕೊಳಲು – ವಿ|| ರಾಹುಲ್ ವೆಂಕಟೇಶ್ , ಖಂಜಿರ –ವಿ|| ಸುಬ್ರಹ್ಮಣ್ಯ ಮೋಹಿತೇ , ಘಟಂ- ವಿ|| ನಟರಾಜ ತಮ್ಮಯ್ಯ . ಮೋರ್ಚಿಂಗ್ – ವಿ|| ಕಾರ್ತೀಕ್ ಮೋಹಿತೆ, ವಯೋಲಿನ್ – ರಿದಂಪಾಡ್ –ವಿ||ಪವನ್ ಕುಮಾರ್  ರವರುಗಳ ಹಂಸ ನಾದ ವೈಭವ ತಾಳವಾಧ್ಯ ಕಚೇರಿಗಾಯಕ ಹರೀಶ್ ನರಸಿಂಹ ರವರ ನಿನಾದ ಸಂಸ್ಕೃತಿ ಕಲಾಕೇಂದ್ರದ ಪ್ರತಿಭಾನ್ವಿತ ಗಾಯಕರಿಂದ ಹಂಸ ಸುಗಮ ಸಂಗೀತ ವೈಭವಬ್ಯಾಟರಾಯನಪುರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯರಿಂದ ಹಂಸ ಯಕ್ಷಗಾನ ವೈಭವ ಮತ್ತು ವಿದುಷಿ ಬಿ ಎಸ್ ಇಂದು ನಾಡಿಗ್  ನಿರ್ದೇಶನದಲ್ಲಿ ಶಾರದಾ ನೃತ್ಯಾಲಯ ತಂಡದವರಿಂದ  ಹಂಸ ನೃತ್ಯ ವೈಭವ , ಸ್ವಪ್ನ - ಮಂಜುನಾಥ್ - ಸದಾನಂದ ಕುರಡಿಕೇರಿರವರ ಚಲನಚಿತ್ರ ಗೀತೆಗಳ ಪ್ರಸ್ತುತಿ ಪ್ರೇಕ್ಷಕರ ಮನಸೂರೆಗೊಂಡಿತು .

 

 

Post a Comment

0Comments

Post a Comment (0)