ಬೆಂಗಳೂರು: ಮರಗೆಲಸದ ಯಂತ್ರೋಪಕರಣಗಳ ತಯಾರಿಕೆಯಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿರುವ ಬಿಎಸ್ಸೆ ಕಂಪನಿಯ ಬಹು ನಿರೀಕ್ಷಿತ ಬಿಎಸ್ಸೆ ಇನ್ ಸೈಡ್ 2024 ಕಾರ್ಯಕ್ರಮವು ಬೆಂಗಳೂರಿನ ಬಿಎಸ್ಸೆ ಶೋರೂಮ್ ನಲ್ಲಿ ಆಗಸ್ಟ್ 8ರಿಂದ ಆಗಸ್ಟ್ 10ರವರೆಗೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಕಂಪನಿಯು ಗ್ರಾಹಕರಿಗೆ ಮರ, ಗಾಜು, ಕಲ್ಲು ಮತ್ತು ಇತರ ವಸ್ತುಗಳನ್ನು ಸಂಸ್ಕರಿಸಲು ಬಳಸುವ ಅತ್ಯಾಧುನಿಕ ಯಂತ್ರಗಳು ಮತ್ತು ತಂತ್ರಜ್ಞಾನಗಳನ್ನು ವೀಕ್ಷಿಸುವ ಅಪೂರ್ವ ಅವಕಾಶ ಒದಗಿಸುತ್ತಿದೆ.
ಭಾರತದ ಹೊಸ ಸಂಸತ್ ಕಟ್ಟಡದ ಒಳಾಂಗಣದಲ್ಲಿರುವ ಬಾಗಿಲುಗಳು ಮತ್ತು ಪೀಠೋಪಕರಣಗಳ ಹೂವುಗಳು, ನವಿಲುಗಳು ಚಿತ್ರಗಳು ಸೇರಿದಂತೆ ಹಲವು ಸಂಕೀರ್ಣ ಕೆತ್ತನೆಗಳ ರಚನೆಯಲ್ಲಿ ಮಹತ್ವದ ಪಾತ್ರವಹಿಸಿದ ಬಿಎಸ್ಸೆ ರೋವರ್-ಜೆ ಸಿಎನ್‌ಸಿ ಯಂತ್ರವೂ ಸಹ ಪ್ರದರ್ಶನದಲ್ಲಿರಲಿದೆ.
"ಇನ್‌ಸೈಡ್ ಬಿಎಸ್ಸೆ 2024 ಕಾರ್ಯಕ್ರಮದಲ್ಲಿ ನಮ್ಮ ಅತ್ಯಾಧುನಿಕ ಉತ್ಪನ್ನಗಳ ಶ್ರೇಷ್ಠತೆಯನ್ನು ತೋರಿಸುವ ಹೊಸ ಉತ್ಪನ್ನಗಳನ್ನು ನೋಡಬಹುದು. ಭಾರತವು ಮ್ಯಾನುಫ್ಯಾಕ್ಚರಿಂಗ್ ಹಬ್ ಆಗುವ ಕಡೆಗೆ ದಾಪುಗಾಲಿಡುತ್ತಾ ಸಾಗುತ್ತಿದೆ. ಹಾಗಾಗಿ ಉತ್ತಮ ಗುಣಮಟ್ಟದ ಯಂತ್ರಗಳಿಗೆ ಬೇಡಿಕೆ ಹೆಚ್ಚಿದೆ ಮತ್ತು ಭಾರತವು ಪ್ರಮುಖ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಬಿಎಸ್ಸೆಯ ಬೆಂಗಳೂರು ಘಟಕದಲ್ಲಿ ತಯಾರಾಗುವ 10,000 ಯಂತ್ರಗಳನ್ನು ರಫ್ತು ಮಾಡಿರುವ ಸಾಧನೆ ಮಾಡಿದ್ದೇವೆ. ಈ ಮೂಲಕ ವಿಕಸನ ಹೊಂದುತ್ತಿರುವ ಗ್ರಾಹಕರ ಅಗತ್ಯಗಳಿಗೆ ತಕ್ಕಂತೆ ಅವರು ಅಭಿವೃದ್ಧಿ ಹೊಂದಲು ಬೇಕಾಗುವ ಅತ್ಯುತ್ತಮ ಗುಣಮಟ್ಟದ ಉತ್ಪನ್ನ ಮತ್ತು ತಂತ್ರಜ್ಞಾನಗಳನ್ನು ಒದಗಿಸಲು ಬದ್ಧರಾಗಿದ್ದೇವೆ" ಬಿಎಸ್ಸೆ ಇಂಡಿಯಾದ ಸಿಇಓ ಸಯೀದ್ ಅಹ್ಮದ್ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ನಾರ್ಸಿ ಸಮೂಹದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ನಾರ್ಸಿ ಡಿ. ಕುಲರಿಯಾ ಮತ್ತು ನಾರ್ಸಿ ಸಮೂಹದ ನಿರ್ದೇಶಕರಾದ ಶ್ರೀ ಜಗದೀಶ್ ಕುಲರಿಯಾ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಲಿವ್ ಸ್ಪೇಸ್ ನ ಶ್ರೀ. ಗೋಪಾಲ್ ದ್ವಿವೇದಿ, ಎಫ್ಎಫ್ಎಸ್ಸಿಯ ಶ್ರೀ. ರಾಹುಲ್ ಮೆಹ್ತಾ, ಐಪಿಐಆರ್ಟಿಐ ಪಿಪಿಪಿಟಿ ವಿಭಾಗದ ಸೈಂಟಿಸ್ಟ್-ಜಿ ಉದಯ್ ಎನ್ ಮತ್ತು ಕೆನಡಿಯನ್ ವುಡ್‌ನ ಡಾ. ಜಿಮ್ಮಿ ಥಾಮಸ್ ಉಪಸ್ಥಿತರಿರುತ್ತಾರೆ.
ಬಿಎಸ್ಸೆ 75ಕ್ಕೂ ಹೆಚ್ಚು ದೇಶಗಳಿಗೆ 10,000 ಯಂತ್ರಗಳನ್ನು ರಫ್ತು ಮಾಡುವ ಮಹತ್ವದ ಸಾಧನೆ ಮಾಡಿದೆ. ಈ ಗಣನೀಯ ಸಾಧನೆಯು ಕಂಪನಿಯ ನಾವೀನ್ಯತೆ, ಗುಣಮಟ್ಟ ಮತ್ತು ಕಂಪನಿ ಮೇಲೆ ಗ್ರಾಹಕರು ಹೊಂದಿರುವ ತೃಪ್ತಿಯನ್ನು ಸಾರುತ್ತದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರು ಬಿಎಸ್ಸೆ ಇನ್ ಸೈಡ್ 2024ರಲ್ಲಿ ಬಿಎಸ್ಸೆ ಉತ್ಪನ್ನಗಳನ್ನು ನೋಡಬಹುದು. ಆಸಕ್ತಿ ಇರುವವರು ಕಂಪನಿಯ ವೆಬ್‌ಸೈಟ್‌ನಲ್ಲಿ ನೋಂದಣಿ https://biesse.com/ww/en/