ಭಾರತ ದೇಶದಲ್ಲಿ ಬ್ರಿಟೀಷ್ಆಳ್ವಿಕೆಯ ಕಾಲದಲ್ಲಿ ಸ್ವದೇಶಿ ಉತ್ಪನ್ನಗಳನ್ನು ಪ್ರೋತ್ಸಾಹಿಸಲು ಹಾಗೂ ವಿದೇಶಿ ಉತ್ಪನ್ನಗಳನ್ನು ಬಹಿಷ್ಕರಿಸಲು 1905 ರಲ್ಲಿ ಆಗಸ್ಟ್ 7 ದಿನದಂದು ಕಲ್ಕತ್ತಾದಲ್ಲಿ ಸ್ವದೇಶಿ ಚಳುವಳಿಯನ್ನು ಪ್ರಾರಂಭಿಸಲಾಯಿತು. ಈ ದಿನದ ಸ್ಮರಣಾರ್ಥವಾಗಿ ಕೇಂದ್ರ ಜವಳಿ ಸಚಿವರಾಗಿದ್ದ ಶ್ರೀ ಸಂತೋಷ್ ಕುಮಾರ್ ಗಂಗಾರ್‍ರವರು ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ಪರಿಶುದ್ಧ ಉತ್ತಮ ಗುಣಮಟ್ಟದ ಕೈಮಗ್ಗ ಉತ್ಪನ್ನಗಳ ಮಾರಾಟವನ್ನು ಪ್ರೋತ್ಸಾಹಿಸಲು ಪೂರಕವಾಗಿ ಆಗಸ್ಟ್ 7ನೇ ದಿನವನ್ನು ರಾಷ್ಟ್ರೀಯ ಕೈಮಗ್ಗ ದಿನವನ್ನಾಗಿ 2015 ರಲ್ಲಿ ಲೋಕಸಭೆಯಲ್ಲಿ ಘೋಷಿಸಿದರು. ಅದರಂತೆ ಮೊದಲನೇ ರಾಷ್ಟ್ರೀಯ ಕೈಮಗ್ಗ ದಿನವನ್ನು ರಾಷ್ಟ್ರಮಟ್ಟದಲ್ಲಿ 7ನೇ ಆಗಸ್ಟ್ 2015 ರಂದು ಮಾನ್ಯ ಪ್ರಧಾನಮಂತ್ರಿಗಳು ಚೆನ್ನೈನಲ್ಲಿ ಉದ್ಘಾಟಿಸುವ ಮೂಲಕ ಆಚರಿಸಲಾಯಿತು.
ದಿನಾಂಕ:07.08.2024 ರಂದು 10ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಸಮಾರಂಭದಲ್ಲಿ ರಾಜ್ಯದ ಕೈಮಗ್ಗ ನೇಕಾರರ ಕೈಮಗ್ಗ ಉತ್ಪನ್ನಗಳನ್ನು ಪ್ರೋತ್ಸಾಹಿಸಿ ಕೈಮಗ್ಗ ನೇಕಾರರನ್ನು ಬೆಂಬಲಿಸಲು ರೇಷ್ಮೆ, ಹತ್ತಿ ಮತ್ತು ಉಣ್ಣೆ ಕ್ಷೇತ್ರ / ವಲಯದಲ್ಲಿ ಕೈಮಗ್ಗ ನೇಕಾರರು ಹೊಂದಿರುವ ನೈಪುಣ್ಯತೆ / ಶ್ರೇಷ್ಠತೆ / ತಾಂತ್ರಿಕತೆ / ಉತ್ಕøಷ್ಟತೆಗಾಗಿ 2024 ನೇ ಸಾಲಿಗೆ ರಾಜ್ಯ ಮಟ್ಟದ ಕೈಮಗ್ಗ ನೇಕಾರರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ.
ರಾಜ್ಯ ಮಟ್ಟದ ಕೈಮಗ್ಗ ನೇಕಾರರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಜ್ಯದ , ರೇಷ್ಮೆ, ಉಣ್ಣೆ ಮತ್ತು ಹತ್ತಿ ಕೈಮಗ್ಗ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ನೇಕಾರರಿಗೆ ನಗದು ಬಹುಮಾನ / ಶಾಲು / ಪ್ರಮಾಣ ಪತ್ರ ಮತ್ತು ಸ್ಮರಣಿಕೆಯನ್ನು ನೀಡಿ ಗೌರವಿಸಲಾಗುತ್ತದೆ.