ಬೆಂಗಳೂರು (ಕರ್ನಾಟಕ ವಾರ್ತೆ) : ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ವಿಜಯಪುರ ಜಿಲ್ಲಾಡಳಿತದ ಸಹಯೋಗದಲ್ಲಿ ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ಜಿಲ್ಲೆ, ಜತ್ತ ತಾಲ್ಲೂಕಿನ ಗುಡ್ಡಾಪುರ ಶ್ರೀ ದಾನಮ್ಮ ದೇವಿ ಸುಕ್ಷೇತ್ರದಲ್ಲಿ ಆಗಸ್ಟ್ 28 ರಂದು ನಡೆಸಲು ಉದ್ದೇಶಿಸಿರುವ ಹೊರನಾಡಿನಲ್ಲಿ ಕರ್ನಾಟಕ ಸುವರ್ಣ ಸಂಭ್ರಮ -50 ರ ಜೊತೆಯಲ್ಲಿ 2024ನೇ ಸಾಲಿನ ಗಡಿ ಪ್ರಾಧಿಕಾರದಿಂದ ನೀಡುತ್ತಿರುವ ಗಡಿನಾಡ ಚೇತನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಕರ್ನಾಟಕ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳು ಉದ್ಘಾಟಿಸಲಿದ್ದು, ಜತ್ತ ತಾಲ್ಲೂಕಿನ ಸಂಖ ಗ್ರಾಮದಲ್ಲಿ ಇಂದು ಪೂರ್ವಭಾವಿ ಸಭೆ ನಡೆಸಿ ಕಾರ್ಯಕ್ರಮದ ರೂಪುರೇ, ವಸತಿ ಮತ್ತು ಊಟ, ಕಾರ್ಯಕ್ರಮದ ಜಾಗದ ಪರಿಶೀಲನೆ ಇತ್ಯಾದಿಗಳನ್ನು ನಡೆಸಿ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಲು ತೀರ್ಮಾನಿಸಲಾಯಿತು.
ಈ ಸಭೆಯಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸೋಮಣ್ಣ ಬೇವಿನಮರದ ಮಾನ್ಯ ಅಧ್ಯಕ್ಷರು ಹಾಗೂ ಪ್ರಕಾಶ ಮತ್ತೀಹಳ್ಳಿ, ಕಾರ್ಯದರ್ಶಿಗಳು, ವಿಜುಗೌಡ ಎಸ್ ಪಾಟೀಲ, ಶ್ರೀದಾನಮ್ಮ ದೇವಸ್ಥಾನದ ಟ್ರಸ್ಟ್‍ನ ಅಧ್ಯಕ್ಷರು, ಗೆಣ್ಣೂರ ,ಅಪರ ಜಿಲ್ಲಾಧಿಕಾರಿಗಳು, ವಿಜಯಪುರ, ಚಂದ್ರಶೇಖರ ಗೊಬ್ಬಿ, ಶ್ರೀದಾನಮ್ಮ ದೇವಸ್ಥಾನದ ಟ್ರಸ್ಟ್‍ನ ಉಪಾಧ್ಯಕ್ಷರು, ವಿಠ್ಠಲ ಪೂಜಾರಿ, ಖಚಾಂಚಿ, ಅಶೋಕಚಲವಾದಿ, ಜಂಟಿ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಿಜಯಪುರ, ಜಿಲ್ಲಾ ಮಟ್ಟದ ಅಧಿಕಾರಿಗಳು ವಿಜಯಪುರ, ವಿವಿಧ ಸಂಘ / ಸಂಸ್ಥೆ ಅಧ್ಯಕ್ಷರು/ ಪದಾಧಿಕಾರಿಗಳು, ಗುಡ್ಡಾಪುರದ ಗ್ರಾಮಸ್ಥರು ಸಭೆಯಲ್ಲಿ ಉಪಸ್ಥಿತರಿದ್ದರು.