ಆಗಸ್ಟ್ 30 ಮತ್ತು 31 ರಂದು ಅರಮನೆ ಮೈದಾನದಲ್ಲಿ ಎಫ್‌ಕೆಸಿಸಿಐ ಎಂಎಸ್‌ಎಂಇ ಕಾನ್‌ಕ್ಲೇವ್‌ - 2024

varthajala
0

 ಬೆಂಗಳೂರು : ಫೆಡರೇಶನ್ ಆಫ್ ಕರ್ನಾಟಕ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (FKCCI) ಆಗಸ್ಟ್ 30 ಮತ್ತು 31 ರಂದು ಅರಮನೆ ಮೈದಾನದ ಪ್ರಿನ್ಸಸ್‌ ಶರೈನ್‌ ನಲ್ಲಿ "ಎಂಎಸ್‌ಎಂಇ ಕಾನ್‌ಕ್ಲೇವ್‌ - 2024" ಅನ್ನು ಆಯೋಜಿಸಿದೆ ಎಂದು ಎಫ್‌ಕೆಸಿಸಿಐ ಅಧ್ಯಕ್ಷರಾದ ರಮೇಶ್‌ ಚಂದ್ರ ಲಹೋಟಿ ತಿಳಿಸಿದ್ದಾರೆ.

 


ಈ ಬಗ್ಗೆ ಪತ್ರಿಕಾ ಪ್ರಕಟಣೆಯನ್ನು ನೀಡಿರುವ ಅವರುಆಗಸ್ಟ್ 30 ಮತ್ತು 31 ರಂದು ಅರಮನೆ ಮೈದಾನದಲ್ಲಿ ನಡೆಯಲಿರುವ ಎರಡು ದಿನಗಳ ಈ ಪ್ರತಿಷ್ಠಿತ ಕಾರ್ಯಕ್ರಮದಲ್ಲಿ ಸೂಕ್ಷ್ಮಸಣ್ಣ ಮತ್ತು ಮಧ್ಯಮ ಉದ್ದಿಮೆಗಳು ಮತ್ತು ಸಾರ್ವಜನಿಕ ವಲಯದ ಹಾಗೂ ಕಾರ್ಪೇರೇಟ್‌ ಘಟಕಗಳ ನಡುವಿನ ಸಂಪರ್ಕವನ್ನು ಬಲಪಡಿಸುವ ಉದ್ದೇಶವನ್ನು ಹೊಂದಲಾಗಿದೆ. ಭಾರತ ಸರಕಾರದ ಎಂಎಸ್‌ಎಂಇ ಮಂತ್ರಾಲಯದ ಸಹಯೋಗದೊಂದಿಗೆ ಆಯೋಜಿಸಲಾಗಿರುವ ಎಂಎಸ್‌ಎಂಇ ಕಾನ್‌ಕ್ಲೇವ್‌ ನಲ್ಲಿ ಪ್ರದರ್ಶಗಳುಖರಿದಿದಾರರು ಮತ್ತು ಮಾರಾಟಗಾರರ ಸಭೆಎಂಎಸ್‌ಎಂಇ ಗಳನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಜಾರಿಗೊಳಿಸಲಾದ ಪ್ರಮುಖ ನೀತಿಗಳು ಹಾಗೂ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡುವ ಪ್ಯಾನೆಲ್‌ ಚರ್ಚೆಗಳನ್ನು ಆಯೋಜಿಸಲಾಗಿದೆ. ಜೆಮ್‌ಡಿಜಿಟಲ್ ವಾಣಿಜ್ಯಕ್ಕಾಗಿ ಮುಕ್ತ ನೆಟ್‌ವರ್ಕ್ (ONDC), ಮತ್ತು ಟ್ರೇಡ್ ರಿಸೀವಬಲ್ಸ್ ಡಿಸ್ಕೌಂಟಿಂಗ್ ಸಿಸ್ಟಮ್ (TReDS) ನಂತಹ ಪ್ರಮುಖ ಹೊಸ ಅನುಷ್ಠಾನಗಳ ಬಗ್ಗೆಯೂ ಸಮಾವೇಶದಲ್ಲಿ ಚರ್ಚಿಸಲಾಗುವುದು. ಇವು MSME ಗಳು ಮತ್ತು PSU ಗಳಿಗೆ ಮೌಲ್ಯಯುತ ಒಳನೋಟಗಳನ್ನು ನೀಡಲಿವೆ. ಪ್ರಮುಖ ಹಣಕಾಸು ಸಂಸ್ಥೆಗಳು ಮತ್ತು ಬ್ಯಾಂಕುಗಳು ಸಹ ಭಾಗವಹಿಸುತ್ತವೆಹಣಕಾಸಿನ ಸಂಪನ್ಮೂಲಗಳನ್ನ ಪಡೆದುಕೊಳ್ಳುವ ನಿಟ್ಟಿನಲ್ಲಿ ಇರುವಂತಹ ಹೊಸ ಯೋಜನೆಗಳು ಮತ್ತು ಸೇವೆಗಳನ್ನು ಪ್ರದರ್ಶಿಸಲಿವೆ ಎಂದು ಹೇಳಿದ್ದಾರೆ.

 

"ಎಂಎಸ್‌ಎಂಇ ಕಾನ್ಕ್ಲೇವ್ - 2024 ಕರ್ನಾಟಕ ರಾಜ್ಯದಲ್ಲಿ ಎಂಎಸ್‌ಎಂಇಗಳ ಬೆಳವಣಿಗೆ ಮತ್ತು ಸುಸ್ಥಿರತೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ನಮ್ಮ ನಿರಂತರ ಬದ್ಧತೆಯನ್ನು ಪ್ರತಿಬಿಂಬಿಸುವ ಮಹತ್ವದ ವೇದಿಕೆಯಾಗಿದೆ. ಉದ್ಯಮದ ನಾಯಕರುನೀತಿ ನಿರೂಪಕರು ಮತ್ತು ಹಣಕಾಸು ಸಂಸ್ಥೆಗಳನ್ನ ಒಟ್ಟುಗೂಡಿಸುವ ಮೂಲಕ ಎಂಎಸ್‌ಎಂಇಗಳು ಅಭಿವೃದ್ದಿ ಹೊಂದಲು ಅಗತ್ಯವಿರುವ ಮಾಹಿತಿಯನ್ನು ನೀಡುವುದು ನಮ್ಮ ಉದ್ದೇಶವಾಗಿದೆ. ಸೂಕ್ಷ್ಮಸಣ್ಣ ಮತ್ತು ಮಧ್ಯಮ ಉದ್ದಿಮೆಗಳು ರಾಜ್ಯದ ಆರ್ಥಿಕ ಅಭಿವೃದ್ಧಿಗೆ ಅರ್ಥಪೂರ್ಣವಾಗಿ ಕೊಡುಗೆ ನೀಡುವ ವಾತಾವರಣವನ್ನು ಸೃಷ್ಟಿಸುವ ಗುರಿಯನ್ನು ನಾವು ಹೊಂದಿದ್ದೇವೆ. ಹಾಗೆಯೇರಾಷ್ಟ್ರೀಯ ಮತ್ತು ಜಾಗತಿಕ ಹಂತಗಳಲ್ಲಿ ತಮ್ಮ ಸೇವೆಗಳನ್ನು ವಿಸ್ತರಿಸುವ ನಿಟ್ಟಿನಲ್ಲಿ ಸಣ್ಣ ಉದ್ಯಮಗಳನ್ನು ಸಶಕ್ತಗೊಳಿಸುವುದು ನಮ್ಮ ಪ್ರಮುಖ ಉದ್ದೇಶವಾಗಿದೆ.

 

ಕೇಂದ್ರ MSME ಮತ್ತು ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವರಾದ ಕುಮಾರಿ ಶ್ರೀ ಶೋಭಾ ಕರಂದ್ಲಾಜೆಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳು ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವರಾದ ಶ್ರೀ ಶರಣಬಸಪ್ಪ ದರ್ಶನಾಪುರ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. JSW, MRPL, Powergrid, BPCL, BHEL, ಮತ್ತು BEL ನಂತಹ ಪ್ರಮುಖ ಉದ್ದಿಮೆಗಳು ಈ ಸಮಾವೇಶಕ್ಕೆ ಬೆಂಬಲ ನೀಡಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Post a Comment

0Comments

Post a Comment (0)