2.89 ಕೋಟಿ ರೂಪಾಯಿ ಲಾಭಗಳಿಸಿದ ಶ್ರೀ ಚರಣ್ ಸೌಹಾರ್ಧ ಕೋ ಆಪರೇಟೆವ್ ಬ್ಯಾಂಕ್ ಲಿಮಿಟೆಡ್

varthajala
0

 ಬೆಂಗಳೂರು ; ಸಹಕಾರಿ ವಲಯದ ಪ್ರಮುಖ ಬ್ಯಾಂಕ್ ಆಗಿರುವ ಬೆಂಗಳೂರಿನ ಬಸವನಗುಡಿಯ ಶ್ರೀ ಚರಣ್ ಸೌಹಾರ್ಧ ಕೋ ಆಪರೇಟೆವ್ ಬ್ಯಾಂಕ್ ಲಿಮಿಟೆಡ್ಈ ಬಾರಿಯೂ ಲಾಭದತ್ತ ಸಾಗಿದ್ದುಒಟ್ಟಾರೆ 2.89 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿದೆ.

                                     

ಬ್ಯಾಂಕ್‌ನ 28 ನೇ ಸರ್ವ ಸದಸ್ಯರ ಸಭೆಯಲ್ಲಿ ಸಂಸ್ಥಾಪಕ ಅಧ್ಯಕ್ಷ ಬಿ.ವಿ.ಧ್ವಾರಕನಾಥ್ ವಾರ್ಷಿಕ ಲೆಕ್ಕಪತ್ರಗಳನ್ನು ಮಂಡಿಸಿದರು. ಕಳೆದ ವರ್ಷ ಬ್ಯಾಂಕ್ 2.85 ಕೋಟಿ ರೂಪಾಯಿ ಲಾಭಗಳಿಸಿತ್ತು.

                     

 

ಎಸ್.ಎಸ್.ಎಲ್.ಸಿಯಲ್ಲಿ ಮತ್ತು ಪಿಯುಸಿ ಉತ್ತಮ ಸಾಧನೆ ಮಾಡಿದ ಬ್ಯಾಂಕಿನ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಿ ಮಾತನಾಡಿದ ಬಿ.ವಿ.ಧ್ವಾರಕನಾಥ್ಸಹಕಾರಿ ವಲಯದಲ್ಲಿ  ಅತ್ಯಂತ ವಿಶ್ವಾಸಾರ್ಹ ಮತ್ತು ಗ್ರಾಹಕರ ಹಿತರಕ್ಷಣೆಗೆ ಒತ್ತು ನೀಡಿರುವ ಬ್ಯಾಂಕ್ ವರ್ಷದಿಂದ ವರ್ಷಕ್ಕೆ ಪ್ರಗತಿ ಸಾಧಿಸುತ್ತಿದೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಗ್ರಾಹಕ ಸ್ನೇಹಿ ಜೊತೆಗೆ ಆರ್ಥಿಕ ಶಿಸ್ತಿಗೆ ಒತ್ತು ನೀಡಲಾಗುವುದು. ಆರ್‌ಬಿಐ ನಿಂದ ಬ್ಯಾಂಕಿಗೆ ಸೂಕ್ತ ರೀತಿಯಲ್ಲಿ ಮನ್ನಣೆ ದೊರೆತಿದ್ದುಇದನ್ನು ಮುಂದುವರಿಸಿಕೊಂಡು ಹೋಗುವುದಾಗಿ ತಿಳಿಸಿದರು.

                  

 ಬ್ಯಾಂಕಿನ ಗ್ರಾಹಕ  ಹಾಗೂ  ಚಲನಚಿತ್ರ  ನಿರ್ಮಾಪಕ ಬಿ.ಕೆ.ಶ್ರೀನಿವಾಸ್ (ನಿರ್ಮಾಪಕ ಬೆಂಕೋಶ್ರಿ) ಮಾತನಾಡಿಬ್ಯಾಂಕ್ ನಲ್ಲಿ ಗ್ರಾಹಕರ ರಕ್ಷಣೆ ಜೊತೆಗೆ ಉತ್ತಮ ಆಡಳಿತದ ಕಾರಣಕ್ಕಾಗಿ ಲಾಭ ಗಳಿಸುತ್ತಿದೆ. ಇಂತಹ ಉತ್ತಮ ಸತ್ ಸಂಪ್ರದಾಯಗಳನ್ನು ಮುಂದುವರೆಸಿಕೊಂಡು ಹೋಗಬೇಕು ಎಂದರು.

Post a Comment

0Comments

Post a Comment (0)