ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರಿನಲ್ಲಿ “ವಿಶ್ವ ಪರಿಸರ ದಿನಾಚರಣೆ– 2024” ಪ್ರಯುಕ್ತ “ಅಮ್ಮನಿಗಾಗಿ ಒಂದು ಮರ” ಸಸಿ ನೆಡುವ ಕಾರ್ಯಕ್ರಮ.

varthajala
0

 ಬೆಂಗಳೂರು (ಕರ್ನಾಟಕ ವಾರ್ತೆ) : ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದಲ್ಲಿ “ವಿಶ್ವ ಪರಿಸರ ದಿನಾಚರಣೆ– 2024” ಪ್ರಯುಕ್ತ “ಅಮ್ಮನಿಗಾಗಿ ಒಂದು ಮರ” ಸಸಿ ನೆಡುವ ಕಾರ್ಯಕ್ರಮವನ್ನು ಇಂದು ಹಮ್ಮಿಕೊಳ್ಳಲಾಗಿತ್ತು. ಕೃಷಿ ವಿಶ್ವವಿದ್ಯಾನಿಲಯದ ಕುಲಪತಿಗಳಾದ  ಡಾ: ಎಸ್.ವಿ.ಸುರೇಶ್ ಅವರು ಸಸಿ ನೆಡುವ ಮೂಲಕ, ಬೆಂಗಳೂರು ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.


ನಂತರ ಮಾತನಾಡಿದ ಅವರು ವಿಶ್ವಪರಿಸರ ದಿನಾಚರಣೆ ಪ್ರಯುಕ್ತ ಸನ್ಮಾನ್ಯ ಪ್ರಧಾನ ಮಂತ್ರಿಗಳ ಕರೆಯಂತೆ “ಅಮ್ಮನಿಗಾಗಿ ಒಂದು ಮರವು” ಎಂಬ ಭಾವನಾತ್ಮಕ ಕಾರ್ಯಕ್ರಮವಾಗಿದ್ದು ಪರಿಸರವು ತಾಯಿಗೆ ಸಮಾನವಾಗಿದ್ದು. ಅದನ್ನು ಸಂರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಮನುಷ್ಯನ ದುರಾಸೆಯಿಂದ ಪರಿಸರಕ್ಕೆ ಹಾನಿಯುಂಟಾಗುತ್ತಿದ್ದು ಪ್ರತಿ ವರ್ಷ 10 ಮಿಲಿಯನ್ ಹೆಕ್ಟೇರ್ ಕಾಡು ನಾಶÀವಾಗುತ್ತಿದೆ. ಶೇ.33ರಷ್ಟು ಇರಬೇಕಿದ್ದ ಕಾಡು ಶೇ.22ರಷ್ಟಿದೆ. ಇದು ಪರಿಸರ ಹಾಗೂ ಹವಾಮಾನದ ಮೇಲೆ ನೇರ ಪರಿಣಾಮ ಬೀರಲಿದೆ. “ರಾಷ್ಟ್ರೀಯ ಅರಣ್ಯ ನೀತಿ ಗುರಿಯನ್ನು ತಲುಪಲು ಅರಣ್ಯ ಪ್ರದೇಶದಲ್ಲಿನ ಖಾಲಿ ಸ್ಥಳ, ಅರಣ್ಯೇತರ ಸರ್ಕಾರಿ ಸ್ಥಳ, ಶೈಕ್ಷಣಿಕ ಸಂಸ್ಥೆಗಳು ಹಾಗೂ ವಿಶ್ವವಿದ್ಯಾನಿಲಯಗಳ ಪ್ರದೇಶದಲ್ಲಿ” ಹಸಿರೀಕರಣ ಅತ್ಯಂತ ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರಿನ ವ್ಯಾಪಿಯಲ್ಲ್ಲಿ ಆರು ಸಾವಿರ ಗಿಡಗಳನ್ನು ನೆಟ್ಟು ಪೋಷಿಸಲಾಗುತ್ತಿದೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದೊಂದಿಗೆ 20 ಸಾವಿರ ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ರೂಪಿಸಿ “ಹಸಿರು ಕ್ಯಾಂಪಸ್” ನತ್ತ ದಾಪುಗಾಲು ಹಾಕುತ್ತಿದೆ ಎಂದು ತಿಳಿಸಿದರು.

                                                   

ಪ್ರಸ್ತುತ ವರ್ಷದಿಂದ ಸ್ನಾತಕ ಪದವಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಒಂದು ಗಿಡ ನೆಟ್ಟು ನಾಲ್ಕು ವರ್ಷಗಳ ಕಾಲ ಪೋಷಿಸಲು ರೂಪು ರೇಷೆಗಳನ್ನು ತಯಾರಿಸಲಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳಲ್ಲಿ ಪರಿಸರದ ಬಗ್ಗೆ ಅರಿವು ಮೂಡಲು ಸಹಕಾರಿಯಾಗುತ್ತದೆ, ಪರಿಸರದ ಸಂರಕ್ಷಣೆ ಜೊತೆಗೆ ಜೈವಿಕ ವೈವಿದ್ಯತೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯ ಆವರಣ ಹಾಗೂ ಹಾಸನದ ಕೃಷಿ ವಿದ್ಯಾನಿಲಯ, ಅವರಣದಲ್ಲಿ 10 ಎಕರೆ ಪ್ರದೇಶದಲ್ಲಿ “ಚಿಟ್ಟೆವನ”ವನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
                                                        

ಕಾರ್ಯಕ್ರಮದಲ್ಲಿ ಶಿಕ್ಷಣ ನಿರ್ದೇಶಕರಾದ ಡಾ: ಕೆ.ಸಿ ನಾರಾಯಣಸ್ವಾಮಿ,  ಸಂಶೋಧನಾ ನಿರ್ದೇಶಕರಾದ ಡಾ: ಹೆಚ್.ಎಸ್. ಶಿವರಾಮು, ವಿಸ್ತರಣಾ ನಿರ್ದೇಶಕರಾದ ಡಾ: ವಿ.ಎಲ್. ಮಧುಪ್ರಸಾದ್, ಕೃಷಿ ವಿಶ್ವವಿದ್ಯಾನಿಲಯದ ಡೀನ್ (ಕೃಷಿ) ಡಾ. ಎನ್.ಬಿ. ಪ್ರಕಾಶ್  ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Post a Comment

0Comments

Post a Comment (0)