ಕರ್ನಾಟಕ ಸರಕಾರ, ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆಗೆ ತಿದ್ದುಪಡಿ ಮಾಡಿ ಅಲ್ಲಿ ದುಡಿಯುವ ಮುಖ್ಯವಾಗಿ, ಐಟಿ,ಬಿಟಿ ಸಂಸ್ಥೆಗಳಲ್ಲಿ ದುಡಿಯುವ ಕಾರ್ಮಿಕರ ಕೆಲಸದ ಅವಧಿಯನ್ನು 14 ತಾಸುಗಳಿಗೆ ವಿಸ್ತರಿಸುವ ಪ್ರಸ್ಥಾಪ, ಕೇವಲ ಕಾರ್ಮಿಕ ವಿರೋದಿ ಮಾತ್ರವಲ್ಲಾ ಮಾನವ ವಿರೋದಿ ಎಂದು ಭಾರತ ಕಮ್ಯುನಿಸ್ಟ್ ಪಕ್ಷ ( ಮಾರ್ಕ್ಸವಾದಿ ) ಬಲವಾಗಿ ಖಂಡಿಸುತ್ತದೆ.
ಈ ಕೂಡಲೆ ರಾಜ್ಯ ಸರಕಾರದ ಈ ದುಷ್ಠ ಪ್ರಸ್ಥಾಪವನ್ನು ವಾಪಾಸು ಪಡೆಯ ಬೇಕೆಂದು ಬಲವಾಗಿ ಒತ್ತಾಯಿಸುತ್ತದೆ.
ಜನತೆಯಿಂದ ಪ್ರಜಾಸತ್ತಾತ್ಮಕ ವಾಗಿ ಆಯ್ಕೆಯಾದ ಸರಕಾರವೊಂದು, ಈ ಪ್ರಮಾಣದಲ್ಲಿ ಐಟಿ,ಬಿಟಿ ಸಂಸ್ಥೆಗಳ ಮಾಲೀಕರ ಗುಲಾಮಗಿರಿಗೊಳಗಾಗಿರುವುದು ತೀವ್ರ ಕಳವಳಕಾರಿಯಾದ ಸಂಗತಿಯಾಗಿದೆ. ದೇಶದ ಐಟಿ.ಬಿಟಿ.ಕಂಪನಿಗಳ ಮಾಲೀಕರ ಸಂಘವು ಈ ದುಡಿಮೆಯ ಅವಧಿಯನ್ನು ವಿಸ್ತರಣೆ ಮಾಡಲು ತಾವು ಕೇಳಿಲ್ಲವೆಂದು ಹೇಳಿಕೊಂಡಿದೆ!
ಹಾಗಾದರೆ ರಾಜ್ಯ ಸರಕಾರ ಯಾರನ್ನು ತೃಪ್ತಿ ಪಡಿಸಲು, ವಿದೇಶಿ ಕಂಪನಿಗಳ ಸೇವೆಗಾಗಿ ತಂದಿದೆಯಾ? ಎಂದು ಸಿಪಿಐಎಂ ಪ್ರಶ್ನಿಸಿದೆ. ಜಗತ್ತಿನ ಕಾರ್ಮಿಕರು 150 ವರ್ಷಗಳ ಹಿಂದೆಯೆ, ತಮ್ಮ ಸಮರ ಶೀಲ ಹೋರಾಟಗಳ ಮೂಲಕ 8 ತಾಸುಗಳು ವಿಶ್ರಾಂತಿಗೆ, 8 ತಾಸು ದುಡಿಮೆಗೆ ಮತ್ತೆ 8 ತಾಸು ತನ್ನ ಕೌಟುಂಬಿಕ ಕೆಲಸಕ್ಕೆಂದು ಹಲವು ತ್ಯಾಗ ಬಲಿದಾನಗಳ ಮೂಲಕ 8 ತಾಸುಗಳ ದುಡಿಮೆಯ ಅವಧಿಯನ್ನು ಗೆದ್ದುಕೊಂಡಿದೆ.
ಇಂತಹ ಐತಿಹಾಸಿಕ ಜಾಗತಿಕ ಕಾರ್ಮಿಕರ ಚಳುವಳಿಯಿಂದ ಪಡೆಯಲಾದುದನ್ನು ಆಧುನಿಕ ತಂತ್ರಜ್ಞಾನ ಹಾಗು ವಿಜ್ಞಾನ ಬೆಳೆದ ಸಮಯದಲ್ಲಿ ದುಡಿಮೆಯ ಅವಧಿಯನ್ನು 8 ತಾಸುಗಳಿಗಿಂತ ಕಡಿಮೆ ಮಾಡಿ, ಅವರ ಜೀವನ ಪರಿಸ್ಥಿತಿಯನ್ನು ಮತ್ತಷ್ಠು ಎತ್ತರಿಸುವ ಮತ್ತು ನಿರುದ್ಯೋಗ ಪರಿಹಾರಕ್ಕೆ ನೆರವಾಗುವ ಬದಲು, ಕಾರ್ಮಿಕರ ಜೀವನವನ್ನು ಮತ್ತಷ್ಠು ಸಂಕಷ್ಠಕ್ಕೀಡು ಮಾಡುವ, ಮಾಲೀಕ ವರ್ಗದ ಅಮಾನವೀಯ ಲೂಟಿಗೆ ತೆರೆಯಲು ಮುಂದಾಗಿರುವುದು ಅಕ್ಷಮ್ಯವಾಗಿದೆ.
ಈಗಾಗಲೆ ಇರುವ ಎರಡು ತಾಸುಗಳ ನಿರಂತರ ಹೆಚ್ಚುವರಿ ದುಡಿಮೆಯು, ಕಾರ್ಮಿಕರ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ತೀವ್ರ ಕೆಟ್ಟ ಪರಿಣಾಮ ಬೀರುತ್ತದೆಂದು ವಿಶ್ವದ ಹಲವು ಅಧ್ಯಯನಗಳು ತೋರಿಸಿವೆ. ಮಾತ್ರವಲ್ಲಾ ಅವರ ಜೀವಿತಾವಧಿಯನ್ನು ಕುಸಿಯುವಂತೆ ಮಾಡುತ್ತಿವೆ ಎಂದಿವೆ.
ಮಾಲೀಕರು ಈಗ ಮೂರು ಶಿಫ್ಟ್ ಗಳಲ್ಲಿ ದುಡಿಯುವ ಕಾರ್ಮಿಕರನ್ನು ಕೇವಲ ಎರಡು ಶಿಫ್ಟ್ ಗಳಲ್ಲಿ ದುಡಿಸಿ ಒಂದು ಶಿಫ್ಟ್ ನಲ್ಲಿ ದುಡಿಯುವ ಕಾರ್ಮಿಕರನ್ನು ಮನೆಗೆ ಕಳುಹಿಸಿ ಲೂಟಿ ಮಾಡುವ ಮತ್ತು ನಿಕುದ್ಯೋಗ ಹೆಚ್ಚಿಸುವ ಸಂಚು ಇದರಲ್ಲಡಗಿರುವುದು ಸ್ಪಷ್ಠವಿದೆ.
ಅದಾಗಲೆ ರಾಜ್ಯ ಸರಕಾರ ಐಟಿ.ಬಿಟಿ ಕಂಪನಿಗಳ ಮಾಲೀಕರುಗಳಿಗೆ ಅಲ್ಲಿನ ಕಾಯ್ದೆ ಜಾರಿಗೊಳಿಸಿ ಕಾರ್ಮಿಕರ ಹಕ್ಕುಗಳ ರಕ್ಷಣೆಗೆ ಕ್ರಮವಹಿಸುವುದರ ಬದಲು, ಅವುಗಳಿಂದ ಐದು ವರ್ಷಗಳ ರಿಯಾಯಿತಿ ನೀಡಿರುವುದು ತಾನು ಮಾಲೀಕರ ಪರ ಮತ್ತು ಕಾರ್ಮಿಕರ ವಿರೋದಿಯೆಂದು ಈಗಾಗಲೆ ಸಾಬೀತು ಮಾಡಿದೆ ಎಂದು ಸಿಪಿಐಎಂ ಕಟುವಾಗಿ ಠೀಕಿಸಿದೆ.
ಐಟಿ.ಬಿಟಿ ಕಾರ್ಮಿಕರು 3.8.24 ರಂದು ನಡೆಸುವ ಹೋರಾಟಕ್ಕೆ ಸಿಪಿಐಎಂ ಸಂಪೂರ್ಣ ಬೆಂಬಲವನ್ನು ವ್ಯಕ್ತ ಪಡಿಸುತ್ತದೆ ಮಾತ್ರವಲ್ಲಾ ರಾಜ್ಯದ ಕಾರ್ಮಿಕ ವರ್ಗ ಈ ದುರ್ನಡೆಯನ್ನು ಹಿಂಪಡೆಯುವಂತೆ ಪ್ರಬಲ ಜಂಟಿ ಹೋರಾಟ ನಡೆಸುವಂತೆ ಮನವಿ ಮಾಡುತ್ತದೆ.
ರಾಜ್ಯ ಸರಕಾರ ಮಾಲೀಕ ವರ್ಗಕ್ಕೆ ನೀಡಿದ ಐದು ವರ್ಷಗಳ ರಿಯಾಯಿತಿಯನ್ನು ಮತ್ತು 14 ತಾಸುಗಳ ದುಡಿಮೆಯ ಪ್ರಸ್ಥಾಪವನ್ನು ವಾಪಾಸು ಪಡೆಯಬೇಕೆಂದು ಸಿಪಿಐಎಂ ಮರಳಿ ಬಲವಾಗಿ ಒತ್ತಾಯಿಸುತ್ತದೆ.
AiÀÄÄ. §¸ÀªÀgÁdÄ