ಫೆಬ್ರವರಿ 07 ಹಾಗೂ 8, 2025 ರಂದು ಭೋಪಾಲ್‍ನಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ : ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್

varthajala
0

 ಬೆಂಗಳೂರು(ಕರ್ನಾಟಕ ವಾರ್ತೆ): 2025ನೇ ಫೆಬ್ರವರಿ 7 ಹಾಗೂ 8 ರಂದು ಮಧ್ಯಪ್ರದೇಶದ ಭೋಪಾಲ್‍ನಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ತಿಳಿಸಿದರು. ಅವರು ಇಂದು ಬೆಂಗಳೂರಿನ ಖಾಸಗಿ ಹೋಟೆಲ್‍ನಲ್ಲಿ ಹೂಡಿಕೆದಾರರ ಸಮಾವೇಶ ಕುರಿತು ವಿಷಯ ವಿನಿಮಯ ಮಾಡಿಕೊಳ್ಳುವ ಸಲುವಾಗಿ ಹಮ್ಮಿಕೊಳ್ಳಲಾದ ಸಂವಾದಾತ್ಮಕ ಅಧಿವೇಶನದಲ್ಲಿ ತಿಳಿಸಿದರು. ಈ ಸಮಾವೇಶದಲ್ಲಿ ವಿವಿಧ ಉದ್ದಿಮೆಗಳು, ಸ್ಟಾರ್ಟ್‍ಅಪ್‍ಗಳ ವ್ಯವಸಾಯ ಕಂಪನಿಗಳು, ನಿಪುಣರು ತಮ್ಮ ಕಲ್ಪನಾಶೀಲನೆಯನ್ನು ಅನಾವರಣ ಮಾಡಲು ಸದಾವಕಾಶವಿದೆ. ಭಾರತವು ವಿಶ್ವದ ಜಿ.ಡಿ.ಪಿ ಶ್ರೇಯಾಂಕದಲ್ಲಿ 5ನೇ ಸ್ಥಾನ ಅಲಂಕರಿಸಿದೆ. ವಿವಿಧ ಕ್ಷೇತ್ರಗಳಾದ ಪ್ರವಾಸೋದ್ಯಮ, ಐ.ಟಿ.-ಬಿ.ಟಿ, ಕೃಷಿ, ಆರೋಗ್ಯ ಹೀಗೆ ಇನ್ನಿತರ ಕ್ಷೇತ್ರಗಳಲ್ಲಿ ಹೂಡಿಕೆ ಹಾಗೂ ಉದ್ಯೋಗವಕಾಶ ಕಲ್ಪಿಸಿದರೆ ಭಾರತ ಮುನ್ನೆಡೆಯುವುದರಲ್ಲಿ ಸಂಶಯವಿಲ್ಲ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಣಿಪಾಲ್ ಗ್ರೂಪ್‍ನ ಅಧ್ಯಕ್ಷರಾದ ಪದ್ಮಶ್ರೀ ಮೋಹನ್ ದಾಸ್ ಮಾತನಾಡಿ, ಮಧ್ಯಪ್ರದೇಶದಲ್ಲಿ ಸೇವಾ ಹಾಗೂ ಉದ್ಯಮ ಕ್ಷೇತ್ರಗಳು ಬಹಳಷ್ಟು ಪ್ರಗತಿ ಸಾಧಿಸಿದೆ. ಇದರಿಂದ ಈ ರಾಜ್ಯದ ಜಿ.ಡಿ.ಪಿ. ಸಹ ಏರಿಕೆ ಆಗಿದೆ. ಈ ಜಾಗತಿಕ ಸಮಾವೇಶದಿಂದ ಈ ರಾಜ್ಯದ ಏಳಿಗೆಗೆ ವಿಪುಲ ಅವಕಾಶಗಳಿವೆ ಎಂದರು.

ಕಾರ್ಯಕ್ರಮದಲ್ಲಿ  ಮಧ್ಯಪ್ರದೇಶ ಎಂಎಸ್ ಎಂಇ ಕಾರ್ಯದರ್ಶಿಗಳಾದ ಡಾ.ನವನೀತ್ ಮೋಹನ್ ಕಟಾರಿ  ಕೈಗಾರಿಕಾ ನೀತಿಗಳ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ  ಕುಮಾರ್, ಗ್ರೀನ್‍ಕೋ ಗ್ರೂಪ್‍ನ ಅಧ್ಯಕ್ಷರಾದ ಅನಿಲ್ ಚಲ್ಮಾ ಶೆಟ್ಟಿ, ಲ್ಯಾಪ್ ಇಂಡಿಯಾದ ಮುಖ್ಯ ಅಪರೇಟಿಂಗ್ ಮತ್ತು ತಾಂತ್ರಿಕ ಅಧಿಕಾರಿ ಡಾ. ಶಿವವೆಂಕಟ್ ರಮಣಿ, ಇನ್ಫೋಸಿಸ್‍ನ ಮ್ಯಾನೇಜಿಂಗ್ ಡೈರೆಕ್ಟರ್ ಸಿದ್ದಾರ್ಥ್ ಸೇಥಿ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಮಧ್ಯಪ್ರದೇಶ ಇಂಡಸ್ಟ್ರೀಯಲ್ ಡೆವಲಪ್‍ಮೆಂಟ್ ಕಾರ್ಪೋರೇಷನ್ ಲಿಮಿಟೆಡ್ ಮತ್ತು ಇಂಡಿಯಾ ಎಲೆಕ್ಟ್ರಾನಿಕ್ ಸೆಮಿಕಂಡಕ್ಟರ್ ಅಸೋಸಿಯೇಷನ್ (ಜೆ.ಇ.ಎಸ್.ಎ) ಟೈ ಗ್ಲೋಬಲ್ ಎಲೆಕ್ಟ್ರಾನಿಕ್ ಇಂಡಸ್ಟ್ರೀಸ್ ಅಸೋಸಿಯೇಷನ್ ಆಫ್ ಇಂಡಿಯಾ (ಇ.ಎಲ್.ಸಿ.ಐ.ಎನ್.ಎ) ಮತ್ತು ಅಸೋಸಿಯೇಷನ್ ಆಫ್ ಜಿಯೋ ಸ್ಪೆಷಲ್ ಇಂಡಸ್ಟ್ರೀಸ್ ನಡುವಿನ ತಿಳುವಳಿಕಾ ಒಪ್ಪಂದದ ಸಹಿ ನಡೆಯಿತು.

Post a Comment

0Comments

Post a Comment (0)