ಬೆಂಗಳೂರು (ಕರ್ನಾಟಕ ವಾರ್ತೆ) : 2023-24ನೇ ಸಾಲಿನ ಲೆಕ್ಕಪರಿಶೋಧನೆ ಕೈಗೊಳ್ಳುವ ಸಂಬAಧ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ರ ಕಲಂ 63 ಮತ್ತು ಕರ್ನಾಟಕ ಸಹಕಾರ ಸಂಘಗಳ ನಿಯಮಗಳು 1960 ನಿಯಮ 29-ಬಿ(8) ರನ್ವಯ ಯಾವುದೇ ಸಹಕಾರ ಸಂಘದ ಮುಖ್ಯಕಾರ್ಯನಿರ್ವಾಹಕರು ಹಾಗೂ ಕರ್ನಾಟಕ ಸೌಹಾರ್ದ ಸಹಕಾರಿ ನಿಯಮಗಳು 2004 ನಿಯಮ 8-ಬಿ(8) ರನ್ವಯ ಯಾವುದೇ ಸೌಹಾರ್ದ ಸಹಕಾರಿಯ ಮುಖ್ಯಕಾರ್ಯನಿರ್ವಾಹಕರು ವಾರ್ಷಿಕ ಮಹಾಸಭೆಯಲ್ಲಿ ಲೆಕ್ಕಪರಿಶೋಧಕರ ಅಥವಾ ಲೆಕ್ಕಪರಿಶೋಧಾನಾ ಫರ್ಮ್ನ್ನು ನೇಮಕ ಮಾಡಿಕೊಂಡ ಬಗ್ಗೆ, ವಾರ್ಷಿಕ ಮಹಾಸಭೆಯ ದಿನಾಂಕದಿAದ 07 ದಿನದೊಳಗಾಗಿ ಇಲಾಖಾ ಲೆಕ್ಕಪರಿಶೋಧಕರಿಗೆ/ಸನ್ನದು ಲೆಕ್ಕಪರಿಶೋಧನಾ ಸಂಸ್ಥೆಗೆ ಮತ್ತು ಸಹಕಾರಿ ಲೆಕ್ಕಪರಿಶೋಧನಾ ನಿರ್ದೇಶಕರಿಗೆ ತಿಳಿಸಬೇಕಾಗಿರುತ್ತದೆ.
ಆದರೆ ಜಿಲ್ಲೆಯ ಬಹುಪಾಲು ಸಹಕಾರ ಸಂಘಗಳು ಮತ್ತು ಸೌಹಾರ್ದ ಸಹಕಾರಿಗಳು ಇಲಾಖಾ ಲೆಕ್ಕಪರಿಶೋಧಕರ/ಸನ್ನದು ಲೆಕ್ಕಪರಿಶೋಧನಾ ಸಂಸ್ಥೆಗೆ ನೇಮಕಾತಿ ಬಗ್ಗೆ ಈ ಕಛೇರಿಗೆ ಮಾಹಿತಿ ಸಲ್ಲಿಸಿರುವುದಿಲ್ಲ. ಆದ್ದರಿಂದ ಈವರೆಗೂ ಸದರಿ ಮಾಹಿತಿಯನ್ನು ಸಲ್ಲಿಸಿದ ಸಹಕಾರ ಸಂಘಗಳು ಈ ಪ್ರಕಟಣೆಯಾದ 07 ದಿನದೊಳಗಾಗಿ ವಾರ್ಷಿಕ ಮಹಾಸಭೆಯಲ್ಲಿ ಇಲಾಖಾ ಲೆಕ್ಕಪರಿಶೋಧಕರನ್ನು/ಸನ್ನದು ಲೆಕ್ಕಪರಿಶೋಧನಾ ಸಂಸ್ಥೆಯನ್ನು ನೇಮಕಾತಿ ಮಾಡಿಕೊಂಡಿರುವ ಬಗ್ಗೆ ಮಾಹಿತಿಯನ್ನು ವಾರ್ಷಿಕ ಮಹಾಸಭೆಯ ನಡವಳಿಯೊಂದಿಗೆ ಜಂಟಿ ನಿರ್ದೇಶಕರ ಕಛೇರಿ, ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆ, ಬೆಂಗಳೂರು ಜಿಲ್ಲೆ, ಬೆಂಗಳೂರು, ಕೊಠಡಿ ಸಂಖ್ಯೆ-421,422. ಮೊದಲನೇ ಬ್ಲಾಕ್, ನಾಲ್ಕನೇ ಮಹಡಿ, ಬಹುಮಹಡಿಗಳ ಕಟ್ಟಡ, ಡಾ. ಅಂಬೇಡ್ಕರ್ ವೀದಿ, ಬೆಂಗಳೂರು -560001 ಅಥವಾ ಇ-ಮೇಲ್ ವಿಳಾಸ jdbangaloreca421@gmail.com ಗೆ ಸಲ್ಲಿಸಬೇಕು. ಇಲ್ಲವಾದಲ್ಲಿ ಸಹಕಾರ ಸಂಘಗಳ ಅಧಿನಿಯಮ 1960 ರ ಕಲಂ 63 (2) ರಂತೆ ಸಹಕಾರ ಸಂಘಗಳ ಲೆಕ್ಕಪರಿಶೋಧನೆ ನಿರ್ದೇಶಕರಿಗೆ ದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ಸಂಘದ ಲೆಕ್ಕಪತ್ರಗಳ ಪರಿಶೋಧನೆಯನ್ನು ಮಾಡಲು ಲೆಕ್ಕಪರಿಶೋಧಕರನ್ನು ಇಲಾಖೆಯಿಂದ ನೇಮಕ ಮಾಡಲಾಗುವುದು ಎಂದು ಬೆಂಗಳೂರು ನಗರ ಜಿಲ್ಲೆಯ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.