ವಿಧಾನ ಮಂಡಲ ಅಧಿವೇಶನ

varthajala
0

 ಬೆಂಗಳೂರು, (ಕರ್ನಾಟಕ ವಾರ್ತೆ) : ಪ್ರಸಕ್ತ ಸಾಲಿನ ಕರ್ನಾಟಕ ವಿಧಾನ ಮಂಡಲದ ಅಧಿವೇಶನವು ಜುಲೈ 15 ರಿಂದ ಆರಂಭವಾಗಲಿದೆ. ಈ ಅಧಿವೇಶನದ ವರದಿಗಾಗಿ ಆಗಮಿಸುವ ಮಾಧ್ಯಮ ಮಿತ್ರರಿಗೆ ಪ್ರವೇಶ ಪತ್ರಗಳನ್ನು ವಿತರಿಸುವುದಾಗಿ ವಿಧಾನ ಪರಿಷತ್ ಮತ್ತು ವಿಧಾನಸಭೆಯ ಕಾರ್ಯದರ್ಶಿಗಳು ತಿಳಿಸಿರುತ್ತಾರೆ.

ಅದ್ದರಿಂದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿ ಇರುವ ಪತ್ರಕರ್ತರು ಮಾತ್ರ ತಮ್ಮ ಸಂಸ್ಥೆಯ ಶಿಪಾರಸ್ಸು ಪತ್ರದೊಂದಿಗೆ ಹೆಸರು, ಪದನಾಮ, ವಿಳಾಸ, ದೂರವಾಣಿ ಸಂಖ್ಯೆ, ಇ-ಮೇಲ್ ವಿವರಗಳನ್ನು ನಮೂದಿಸಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸುದ್ದಿ ಮತ್ತು ಪತ್ರಿಕಾ ಶಾಖೆಗೆ ಸಲ್ಲಿಸುವುದು. ಶಿಫಾರಸ್ಸು ಪತ್ರ ಇಲ್ಲದೇ ಇದ್ದಲ್ಲಿ ಪರಿಗಣಿಸಲಾಗುವುದಿಲ್ಲ.


ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಮಾನ್ಯತೆ ಹೊಂದಿರುವ ಮಾಧ್ಯಮ ಪ್ರತಿನಿಧಿಗಳು ನೇರವಾಗಿ ಕೊಠಡಿ ಸಂಖ್ಯೆ 227, ಎರಡನೇ ಮಹಡಿ, ವಿಧಾನಸೌಧ ಇಲ್ಲಿ ವಿಧಾನ ಪರಿಷತ್ ಸಭಾಂಗಣದ ಪತ್ರಕರ್ತರ ಗ್ಯಾಲರಿಯ ಪ್ರವೇಶ ಪತ್ರಗಳನ್ನು  ಹಾಗೂ ಕೊಠಡಿ ಸಂಖ್ಯೆ 128, ಮೊದಲನೇ ಮಹಡಿ, ವಿಧಾನಸೌಧ ಇಲ್ಲಿ  ವಿಧಾನಸಭೆ ಸಭಾಂಗಣದ ಪತ್ರಕರ್ತರ ಗ್ಯಾಲರಿಯ ಪ್ರವೇಶ ಪತ್ರಗಳನ್ನು ಪಡೆಯಬಹುದು.

ಈಗಾಗಲೇ ಈ ವರ್ಷದ ಅಧಿವೇಶನದ  ಪ್ರವೇಶ ಪತ್ರ ಹೊಂದಿರುವವರು ಪುನಃ ಪ್ರವೇಶ ಪತ್ರ ಪಡೆಯುವ ಅವಶ್ಯಕತೆ ಇರುವುದಿಲ್ಲ.

Post a Comment

0Comments

Post a Comment (0)