ಬೆಂಗಳೂರು (ಕರ್ನಾಟಕ ವಾರ್ತೆ): ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ, ಅಖಿಲ ಭಾರತ ಸುಸಂಘಿತ ಪ್ರಾಯೋಜನೆ (ಬೀಜ ಬೆಳೆಗಳು) ವತಿಯಿಂದ ಇದೇ ಪ್ರಥಮ ಬಾರಿಗೆ ಆನ್‍ಲೈನ್ ಮೂಲಕ ಬೀಜ ಮಾರಾಟ ಜಾಲತಾಣವನ್ನು ಅಭಿವೃದ್ಧಿಪಡಿಸಿದೆ. ಬೀಜಜಾಲತಾಣದಲ್ಲಿ www.uasgkvkseeds.org ರೈತ ಬಾಂಧವರು ನೊಂದಣಿ ಮಾಡಿಕೊಂಡು ನೇರವಾಗಿ ಬಿತ್ತನೆ ಬೀಜಗಳನ್ನು ಖರೀದಿಸಬಹುದಾಗಿದೆ. ನೊಂದಣಿ ಮಾಡುವಾಗ ಪೂರ್ಣವಿಳಾಸ, ಸರಿಯಾದ ಪಿನ್ ಕೋಡ್‍ಅನ್ನು ಕಡ್ಡಾಯವಾಗಿ ನಮೂದಿಸುವುದು ಹಾಗೂ ಬಿತ್ತನೆ ಬೀಜದ ಮೊತ್ತವನ್ನು ಆನ್‍ಲೈನ್ ಗೂಗಲ್ ಪೇ, ಪೋನ್ ಪೇ ಇತ್ಯಾದಿ ಮೂಲಕ ಪಾವತಿಸುವುದು.
ಬಿತ್ತನೆ ಬೀಜಗಳನ್ನು ಅಂಚೆ ಇಲಾಖೆ ಮೂಲಕ ರೈತರ ಮನೆ ಬಾಗಿಲಿಗೆ ಸರಬರಾಜು ಮಾಡಲಾಗುವುದು. ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರಿನ ವ್ಯಾಪ್ತಿಗೆ ಬರುವ 10 ಜಿಲ್ಲೆಗಳಿಗೆ ಸೂಕ್ತವಾದ ವಿವಿಧ ಬೆಳೆಗಳಾದ ರಾಗಿ, ಭತ್ತ, ತೊಗರಿ, ಅವರೆ, ಸಿರಿಧಾನ್ಯಗಳು ತಳಿಗಳ ನಿಜಬೀಜ ಹಾಗೂ ಪ್ರಮಾಣಿತ ಬಿತ್ತನೆ ಬೀಜ ಮತ್ತು ಎಣ್ಣೆಕಾಳು ಬೆಳೆಗಳಾದ ಸಂಕರಣ ಸೂರ್ಯಕಾಂತಿ ಬಿತ್ತನೆ ಬೀಜ ಲಭ್ಯವಿರುತ್ತದೆ.ಆಸಕ್ತ ರೈತರು ಬಿತ್ತನೆ ಬೀಜವನ್ನು ರಾಷ್ಟ್ರೀಯ ಬೀಜ ಪ್ರಾಯೋಜನೆ (ಎನ್.ಎಸ್.ಪಿ), ಕೃಷಿ ತಂತ್ರಜ್ಞಾನ ಮಾಹಿತಿಕೇಂದ್ರ (ಎ.ಟಿ.ಐ.ಸಿ), ಜಿ.ಕೆ.ವಿ.ಕೆ, ಮತ್ತು ಕೃಷಿ ವಿಜ್ಞಾನ ಕೇಂದ್ರಗಳಾದ ಚಾಮರಾಜನಗರ, ಕಂದಲಿ, ಹಾಸನ, ಚಿಂತಾಮಣಿ ಮತ್ತು ವಲಯ ಕೃಷಿ ಸಂಶೋಧನಾಕೇಂದ್ರ, ವಿ.ಸಿ.ಫಾರಂ, ಮಂಡ್ಯ ಹಾಗೂ ರಾಗಿ ಬ್ರಹ್ಮ ಲಕ್ನಣಯ್ಯ ನವರರೈತ ಸಲಹಾ ಕೇಂದ್ರ ಎ.ಪಿ.ಎಂ.ಸಿ.ಯಾರ್ಡ್, ಮಂಡ್ಯ ಕೇಂದ್ರಗಳಿಂದ ಖರೀದಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.