ಕುಡಿಯುವ ನೀರು ಸರಬರಾಜು ಯೋಜನೆ ಪ್ರಗತಿಯಲ್ಲಿದೆ : ಪ್ರಿಯಾಂಕ್ ಖರ್ಗೆ

varthajala
0

 ಬೆಂಗಳೂರು  (ಕರ್ನಾಟಕ ವಾರ್ತೆ) : ರಾಜ್ಯದಲ್ಲಿ ಜಲ ಜೀವನ್ ಮಿಷನ್ ಯೋಜನೆಯಡಿ ರಾಜ್ಯದ ಎಲ್ಲಾ ಗ್ರಾಮೀಣ ಜನವಸತಿಗಳಲ್ಲಿ ಕಾರ್ಯಾತ್ಮಕ ನಳ ನೀರು ಸರಬರಾಜು ಮಾಡಲು ಉದ್ದೇಶಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರಾದ ಪ್ರಿಯಾಂಕ್ ಖರ್ಗೆ ತಿಳಿಸಿದರು.

ಅವರು ಇಂದು ವಿಧಾನ ಪರಿಷತ್ ಆಧಿವೇಶನದ ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯರಾದ ಟಿ.ಎನ್. ಜವರಾಯಿ ಗೌಡ  ಅವರ ಪ್ರಶ್ನೆಗೆ  ಉತ್ತರಿಸಿದ ಸಚಿವರು,  ಬೆಂಗಳೂರು ನಗರ ಜಿಲ್ಲೆ ಯಶವಂತಪುರ ವಿಧಾನಸಬಾ ಕ್ಷೇತ್ರಕ್ಕೆ ಒಟ್ಟು 17 ಪಂಚಾಯಿತಿಗಳು ಒಳಪಡುತ್ತವೆ.  ಇವುಗಳಲ್ಲಿ 7 ಗ್ರಾಮಪಂಚಾಯಿತಿಗಳ 127 ಜನವಸತಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಸಲು ಕುಂಬಳಗೋಡು ಮತ್ತು ಇತರ 172 ಜನವಸತಿಗಳ ಬಹುಗ್ರಾಮ ಕುಡಿರುವ ನೀರು ಸರಬರಾಜು ಯೋಜನೆಗೆ ರೂ.182.40 ಕೋಟಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ ಎಂದರು.

Post a Comment

0Comments

Post a Comment (0)