ಸಮಾಜದಲ್ಲಿ ಮಹಿಳೆಯರು ಸ್ವಾವಲಂಭಿಗಳಾಗಿ ಬದುಕಬೇಕು : ಜಿ.ಪದ್ಮಾವತಿ

varthajala
0

ಸಮಾಜದಲ್ಲಿ ಮಹಿಳೆಯರು ಸ್ವಾವಲಂಭಿಗಳಾಗಬೇಕು ಅವರು ತಮ್ಮ ಕುಟುಂಬದ ಆದಾಯವನ್ನು ತಾವೇ ಸಂಪಾದಿಸಿ ಸ್ವತಂತ್ರವಾಗಿ ಜೀವನ ನಡೆಸಲು ನಿಗಮದ ಸವಿರುಚಿ ಕ್ಯಾಂಟೀನ್ ಯೋಜನೆ ತುಂಬಾ ಸಹಕಾರಿಯಾಗಿದೆ ಇದನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀಮತಿ ಜಿ.ಪದ್ಮಾವತಿ ಅವರು ತಿಳಿಸಿದರು.
ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧಿಕಾರಿಗಳು ಮತ್ತು ರಾಜ್ಯದಲ್ಲಿನ ಜಿಲ್ಲಾ ಒಕ್ಕೂಟಗಳ ಅಧ್ಯಕ್ಷರೊಂದಿಗೆ ಸಚಿರುಚಿ ಕ್ಯಾಂಟೀನ್ ಬಗ್ಗೆ ಸಭೆ ನಡೆಸಿ ಮಾತನಾಡಿದ ಅವರು, ಸವಿರುಚಿ ಕ್ಯಾಂಟೀನ್ ಪ್ರಾರಂಭವಾದ ರೀತಿ ಅದನ್ನು ಯಾವ ಆಧಾರದ ಮೇಲೆ ಜಿಲ್ಲಾ ಒಕ್ಕೂಟಗಳಿಗೆ ನೀಡಲಾಗಿತ್ತು ಹಾಗೂ ಅದರ ಸಾಲದ ಮೊತ್ತವನ್ನು ಮರುಪಾವತಿ ಮಾಡುವ ಬಗ್ಗೆ ಚರ್ಚಿಸಲಾಯಿತು. ಒಕ್ಕೂಟಗಳು ಸಹ ಕ್ಯಾಂಟೀನ್ ನಡೆಸಲು ಇರುವ ಜಾಗದ ಅನುಮತಿ, ವಾಹನ ರಿಪೇರಿ, ಬೋರ್ಡ್ ಮತ್ತು ಸ್ಕೀಕ್ಕರ್ ಸಮಸ್ಯೆಗಳು, ವಾಹನ ನಿರ್ವಹಣೆ ಮತ್ತು ಸಾಲ ಮರುಪಾವತಿಯಂತಹ ಹಲವು ಕುಂದುಕೊರತೆಗಳಿದ್ದು ಅವುಗಳನ್ನು ಬಗೆಹರಿಸಿಕೊಡುವ ಬಗ್ಗೆ ಮನವಿ ಮಾಡಿದರು. ಅದಕ್ಕೆ ಮಾನ್ಯ ಅಧ್ಯಕ್ಷರು ಉತ್ತರಿಸಿ ಎಲ್ಲಾ ಸಮಸ್ಯೆಗಳ ಬಗ್ಗೆ ಸರ್ಕಾರದ ಸಚಿವರ ಗಮನಕ್ಕೆ ತಂದು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದರ ಜೊತೆಗೆ ಮಹಿಳೆಯರು ಸ್ವಾವಲಂಭಿಗಳಾಗಿ ಜೀವನ ನಡೆಸಬೇಕು ಎಂದರು.

ಸಭೆಯಲ್ಲಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮತಿ ಪುಷ್ಪಲತಾ, ಪ್ರಧಾನ ವ್ಯವಸ್ಥಾಪಕರಾದ ಶ್ರೀಮತಿ ಅಕ್ಕಮಹಾದೇವಿ ಮತ್ತು ಶ್ರೀಮತಿ ಇಂದಿರಮ್ಮ, ರಾಜ್ಯ ಮಹಿಳಾ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ರೆಹನಾ ಸುಲ್ತಾನಾ, ಉಪಾಧ್ಯಕ್ಷರಾದ ಶ್ರೀಮತಿ ಸಂಗಮ್ಮ, ಕಾರ್ಯದರ್ಶಿಗಳಾದ ಶ್ರೀಮತಿ ಶ್ರೀನಿವಾಸ್ ಇನ್ನಿತರೆ ಒಕ್ಕೂಟಗಳ ಅಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

Post a Comment

0Comments

Post a Comment (0)