ವಿದ್ಯಾರ್ಥಿಗಳು ಪ್ರಶ್ನೆ ಮಾಡಿ ಕಲಿಯುವ ಮತ್ತು ತಿಳಿಯುವ ಸಾಮರ್ಥ್ಯವನ್ನು ಬೆಳಸಿಕೊಳ್ಳಬೇಕು ಎಂದು ಖ್ಯಾತ ಶಿಕ್ಷಣ ತಜ್ಞೆ ಐಶ್ವರ್ಯ ಡಿ.ಕೆ.ಎಸ್.ಹೆಗಡೆ ಹೇಳಿದರು. ನಗರದ ಬಾಲ್ಡ್ವಿನ್ ಬಾಲಕಿಯರ ಪ್ರೌಢಶಾಲೆಯ ವಾರ್ಷಿಕ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ವಿಧಾರ್ಥಿಗಳು ಪ್ರಶ್ನೆ ಕೇಳುವ ಶಕ್ತಿಯನ್ನು ಬೆಳಸಿಕೊಳ್ಳಬೇಕು. ಈ ಕೌಶಲ್ಯವು ವಿದ್ಯಾರ್ಥಿಗಳ ಬೆಳವಣಿಗೆ ಮತ್ತು ಯಶಸ್ಸಿಗೆ ನಿರ್ಣಾಯಕವಾಗಿದೆ ಎಂದು ಸಲಹೆ ನೀಡಿದರು.
ಆಧುನಿಕ ತಂತ್ರಜ್ಞಾನ ಕುರಿತು ಮಾತನಾಡಿದ ಅವರು ಇಂದು ಜಗತ್ತನ್ನು ನೋಡಿ ಪರಿವರ್ತನೆ ಹೊಂದುತ್ತಿದೆ.ವಿದ್ಯಾರ್ಥಿಗಳು ಪಠ್ಯಪುಸ್ತಕಗಳಿಂದ ChatGPT ಯಂತಹ ಸಾಧನಗಳ ಮೊರೆ ಹೋಗುತ್ತಿದ್ದಾರೆ. ChatGPT ಯ ಸಾರವು ಸರಿಯಾದ ಪ್ರಶ್ನೆಗಳನ್ನು ಕೇಳಿದಾಗ ಉತ್ತರ ಸಿಗುವುದು. ಅದೇ ರೀತಿ ನೀವು ಸರಿಯಾದ ಪ್ರಶ್ನೆಗಳನ್ನು ಕೇಳುವ ಮೂಲಕ ಮಾತ್ರ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ಪಡೆಯುವಿರಿ. ನೀವು ಪ್ರಶ್ನೆ ಕೇಳುವ ಧೈರ್ಯವನ್ನು ಹೊಂದಿದಾಗ ಮಾತ್ರ ನೀವು ನಿಮ್ಮ ಜೀವನದಲ್ಲಿ ಉತ್ತರ ಕಂಡುಕೊಳ್ಳಲು ಸಾಧ್ಯ ಎಂದರು.
ಪ್ರತಿಯೊಬ್ಬ ವಿದ್ಯಾರ್ಥಿಯು ತನ್ನದೇ ಆದ ರೀತಿಯಲ್ಲಿ ಶಕ್ತಿಶಾಲಿಯಾಗಿದ್ದಾನೆ. ಸಬಲೀಕರಣವು ಕೇವಲ ಒಂದು ಪದವಲ್ಲ, ಅದು ಸರಿಯಾದದ್ದನ್ನು ವ್ಯಕ್ತಪಡಿಸುವ ಧೈರ್ಯವನ್ನು ತಂದು ಕೊಡುವಂತದ್ದು. ಪರಸ್ಪರರ ದೌರ್ಬಲ್ಯಗಳಿಂದ ಪಾಠ ಕಲಿತು ಒಬ್ಬರಿಗೊಬ್ಬರು ಶಕ್ತಿಯಾಗುವಂತೆ ಪ್ರೇರೇಪಿಸುವ ಮೂಲಕ ಐಶ್ವರ್ಯ ಅವರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನುಡಿಗಳನ್ನು ಆಡಿದರು.
ಪ್ರಾಂಶುಪಾಲೆ ಆಶಾ ಮಾರ್ಗರೇಟ್ ಮಾತನಾಡಿ, "ಶತಮಾನಗಳಿಂದ ಬಾಲ್ಡ್ ವಿನ್ ವಿದ್ಯಾಸಂಸ್ಥೆ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಬಾಲ್ಡ್ ವಿನ್ ಸಂಸ್ಥೆಗಳ
ಅಧ್ಯಕ್ಷರಾದ ಬಿಷಪ್ ಎನ್. ಎಲ್. ಕರ್ಕರೆಯವರ ನೇತೃತ್ವದಲ್ಲಿ ಮಕ್ಮಳಿಗೆ ಸಮಗ್ರ ಜ್ಞಾನ ನೀಡುವುದನ್ನ ತನ್ನ ಧ್ಯೇಯವಾಗಿಸಿಕೊಂಡು ಆ ನಿಟ್ಟಿನಲ್ಲಿ ನಿರಂತರವಾಗಿ ಶ್ರಮಿಸುತ್ತಿದೆ", ಎಂದರು. ಮ್ಯಾನೇಜರ್ ಫೆಬೆ ಶೀಲಾ ರಾಣಿ ಮಾತನಾಡಿ, "ಬಾಲ್ಡ್ ವಿನ್ ಮಕ್ಕಳ ಶೈಕ್ಷಣಿಕ ಪ್ರಗತಿಯ ಜೊತೆಗೆ ಶೈಕ್ಷಣಿಕೇತರ ಚಟುವಟಿಕೆಗಳಲ್ಲಿಯೂ ಕ್ರಿಯಾಶೀಲವಾಗಿ ತೊಡಗಿಕೊಳ್ಳಲು ನೆರವಾಗುತ್ತಿದೆ. ಸಮಾಜಕ್ಕೆ ಜವಾಬ್ದಾರಿಯುತ ಮಕ್ಕಳನ್ನ ನೀಡುವುದು ನಮ್ಮ ಉದ್ದೇಶವಾಗಿದೆ", ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗೌರವಾನ್ವಿತ ಕಮಲ್ ಕರ್ಕರೆ (ಅಧ್ಯಕ್ಷರು), ಡಾ ಜೋಶುವಾ ಸ್ಯಾಮ್ಯುಯೆಲ್ (ಕಾರ್ಯದರ್ಶಿ, ಬಾಲ್ಡ್ ವಿನ್ ಸಂಸ್ಥೆಗಳು), HR ಮುಖ್ಯಸ್ಥೆ (ಬಾಲ್ಡ್ ವಿನ್ ಸಂಸ್ಥೆಗಳು) ಶ್ರೀಮತಿ ಅನಿತಾ ಐಸಾಕ್, ಉಪ-ಪ್ರಾಂಶುಪಾಲೆ ಶ್ರೀಮತಿ ಸುಜಾತಾ ಕ್ಯಾಥರೀನ್, ವಿಶೇಷ ಅತಿಥಿಗಳಾಗಿ ಮೀಡಿಯಾ ಕನೆಕ್ಟ್ ಸಂಸ್ಥೆಯ ಸಂಸ್ಥಾಪಕಿ ಹಾಗೂ ಸಿಇಒ ದಿವ್ಯಾ ರಂಗೇನಹಳ್ಳಿ ಮತ್ತು ಶೀತಲ್ ಖುಲ್ಲಾರ್ ಉಪಸ್ಥಿತರಿದ್ದರು.
ಈ ವರದಿಯನ್ನು ತಮ್ಮ ಮಾಧ್ಯಮದಲ್ಲಿ ಪ್ರಕಟಿಸಬೇಕೆಂದು ಕೋರಿಕೆ
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 6364466240, 6364409651