ಪಾರ್ಕಿಂಗ್ ಪಾಲಿಸಿ ರೂಪಿಸಲು ಕ್ರಮ : ಸಚಿವ ಡಾ: ಜಿ ಪರಮೇಶ್ವರ

varthajala
0

 ಬೆಂಗಳೂರು (ಕರ್ನಾಟಕ ವಾರ್ತೆ): ಬೆಂಗಳೂರು ನಗರದಲ್ಲಿ ಪಾರ್ಕಿಂಗ್ ವ್ಯವಸ್ಥೆಗೆ ಈಗಾಗಲೇ ಹಲವಾರು ಕ್ರಮಗಳನ್ನು ವಹಿಸಲಾಗಿದ್ದು, ಈ ಕುರಿತು ಪಾರ್ಕಿಂಗ್ ಪಾಲಿಸಿಯನ್ನು ರೂಪಿಸಲಾಗುವುದು ಎಂದು ಗೃಹ ಸಚಿವರಾದ ಡಾ: ಜಿ.ಪರಮೇಶ್ವರ್ ರವರು ತಿಳಿಸಿದರು.ಇಂದು ವಿಧಾನಸಭೆಯಲ್ಲಿ ಯಲಹಂಕ ಶಾಸಕರಾದ ವಿಶ್ವನಾಥ್ ಎಸ್.ಆರ್. ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪಾರ್ಕಿಂಗ್ ವ್ಯವಸ್ಥೆಗೆ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಬೆಂಗಳೂರು ನಗರದಲ್ಲಿ ಒಟ್ಟು 1,194 ಪ್ರಮುಖ ರಸ್ತೆಗಳನ್ನು ನೋ ಪಾರ್ಕಿಂಗ್ ಸ್ಥಳಗಳೆಂದು ಗುರುತಿಸಲಾಗಿದೆ. 

ಪ್ರತಿನಿತ್ಯ 50 ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಠಾಣಾ ಸರಹದ್ದುಗಳನ್ನು ವಿವಿಧ ಸೆಕ್ಟರ್‍ಗಳೆಂದು ವಿಂಗಡಿಸಲಾಗಿದ್ದು, ಸಂಬಂಧಪಟ್ಟ ಸೆಕ್ಟರ್ ಅಧಿಕಾರಿಗಳು ಪಿ.ಎ(ಪಬ್ಲಿಕ್ ಅಡ್ರಸ್) ಸಿಸ್ಟಮ್‍ನಲ್ಲಿ ಸಂದೇಶವನ್ನು ನೀಡುವ ಮೂಲಕ ನೋ ಪಾರ್ಕಿಂಗ್ ಸ್ಥಳಗಳಲ್ಲಿ ಪಾರ್ಕಿಂಗ್ ಮಾಡದಂತೆ ಕ್ರಮ ವಹಿಸಲಾಗಿರುತ್ತದೆ. ನೊ ಪಾರ್ಕಿಂಗ್ ಸ್ಥಳಗಳಲ್ಲಿ ಪಾರ್ಕಿಂಗ್ ಮಾಡಿರುವ ವಾಹನಗಳ ನೊಂದಣಿ ಸಂಖ್ಯೆ ಸಮೇತ ಛಾಯಾಚಿತ್ರಗಳನ್ನು ಸಂಗ್ರಹಿಸಿ, ಸದರಿ ವಾಹನಗಳ ವಿರುದ್ಧ ಐ.ಎಂ.ವಿ ಕಾಯ್ದೆ 177 ರೀತ್ಯಾ ಪ್ರಕರಣಗಳನ್ನು ದಾಖಲಿಸಿ ವಾಹನ ಮಾಲೀಕರ ವಿಳಾಸಕ್ಕೆ ಕಲಂ 133 ಐ.ಎಂ.ವಿ ಕಾಯ್ದೆ ರೀತ್ಯಾ ದಂಡ ಪಾವತಿಸುವಂತೆ ಸೂಚಿಸಿ ನೋಟೀಸ್‍ಗಳನ್ನು ನಿರಂತರವಾಗಿ ಕಳುಹಿಸಲಾಗಿರುತ್ತದೆ ಎಂದು ಮಾಹಿತಿ ನೀಡಿದರು.

 
ವಾಣಿಜ್ಯ ಮಳಿಗೆಗಳಿರುವ ರಸ್ತೆಗಳಲ್ಲಿ ಸಮ ಬೆಸ ಸಂಖ್ಯೆ ರೀತಿ ವಾಹನಗಳ ನಿಲುಗಡೆಗೆ ಅಧಿಸೂಚನೆಯನ್ನು ಹೊರಡಿಸಿದ್ದು ವಾಹನ ಚಾಲಕರು ಮತ್ತು ಸವಾರರು ತಮ್ಮ ವಾಹನಗಳನ್ನು ಸದರಿ ರಸ್ತೆಯಲ್ಲಿ ನಿಗದಿಪಡಿಸಿರುವ ಸಮ ಬೆಸ ಸಂಖ್ಯೆಯ ದಿನಗಳ ರೀತಿಯಲ್ಲಿ ವಾಹನಗಳನ್ನು ನಿಲುಗಡೆ ಮಾಡದಿದ್ದರೆ ಅಂತಹ ವಾಹನಗಳ ವಿರುದ್ಧ ವ್ಹೀಲ್‍ಕ್ಲಾಂಪ್‍ಗಳನ್ನು ಅಳವಡಿಸುವುದರ ಜೊತೆಗೆ  ಎಫ್.ಟಿ.ವಿ.ಆರ್ ಮೂಲಕ ಪಾರ್ಕಿಂಗ್ ಮಾಡದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳನ್ನು ನಿಲುಗಡೆಯಾಗದಂತೆ ನಿಗಾವಹಿಸಲು ಕೋಬ್ರಾ ಸಿಬ್ಬಂದಿಗಳನ್ನು  ಎರಡು ಪಾಳಿಗಳಲ್ಲಿ  ಕರ್ತವ್ಯ ನಿರ್ವಹಿಸಲು ನೇಮಕ ಮಾಡಲಾಗಿದೆ.  ಇತ್ತೀಚೆಗೆ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ  ನೋ ಪಾರ್ಕಿಂಗ್ ಸ್ಥಳಗಳಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಿದ್ದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಕಠಿಣವಾದ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.

Post a Comment

0Comments

Post a Comment (0)