ನಿರುಪಯುಕ್ತ ವಾಹನಗಳ ಟೆಂಡರ್ ಕಂ ಹರಾಜು

varthajala
0

 ಬೆಂಗಳೂರು (ಕರ್ನಾಟಕ ವಾರ್ತೆ): ಹಳಿಯಾಳ ಅರಣ್ಯ ವಿಭಾಗದಲ್ಲಿನ ನಿರುಪಯುಕ್ತ ವಾಹನಗಳಾದ ಮಹೀಂದ್ರ ಬೋಲೆರೋ, ಮಹೀಂದ್ರ ಕಾಂಪೆರ್, ಜಿಪ್‌ಸ್ಸಿ ಮತ್ತು ಮಹೀಂದ್ರ ಜೀಪ್ ಗಳನ್ನು ಬಹಿರಂಗವಾಗಿ ಟೆಂಡರ್ ಕಮ್ ಹರಾಜಿನ ಮೂಲಕ ವಿಲೇವಾರಿ ಮಾಡಲಾಗುವುದು. ಟೆಂಡರ್ ಕಂ ಹರಾಜನ್ನು ಆಗಸ್ಟ್ 8 ರಂದು ಕರೆಯಲಾಗಿದ್ದು, ಅದೇ ದಿನ ಮಧ್ಯಾಹ್ನ 3.00 ಗಂಟೆಗೆ ಮೊದಲು ಸವಾಲನ್ನು ಮಾಡಿ ನಂತರ ಟೆಂಡರ್‌ಗಳನ್ನು ತೆರೆಯಲಾಗುವುದು. ಒಂದೊಮ್ಮೆ ಸದರಿ ದಿನದಂದು ಹರಾಜು ನಡೆಯದೇ ಬಾಕಿ ಉಳಿದಲ್ಲಿ ವಾಹನಗಳನ್ನು ಮೂಲ ಷರತ್ತುಗಳಲ್ಲಿ ಯಾವುದೇ ಬದಲಾವಣೆ ಇಲ್ಲದೇ ಪುನಃ ಆಗಸ್ಟ್ 9 ರಂದು ಮಧ್ಯಾಹ್ನ 3.00 ಗಂಟೆಗೆ ಮೊದಲ ಸವಾಲನ್ನು ಮಾಡಿ ನಂತರ ಟೆಂಡರ್‌ಗಳನ್ನು ತೆರೆಯಲಾಗುವುದು.

 

ಟೆಂಡರ್ ಕಮ್ ಸವಾಲನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಹಳಿಯಾಳ ವಿಭಾಗ, ಹಳಿಯಾಳ ಅವರು ಸದರಿ ದಿನಾಂಕದAದು ಖುದ್ದಾಗಿ ಅಥವಾ ಅವರಿಂದ ಅಧಿಕಾರವನ್ನು ಪಡೆದಂತಹ ಅಧಿಕಾರಿಗಳು ಹಳಿಯಾಳ ವಿಭಾಗೀಯ ಕಚೇರಿಯಲ್ಲಿ ನೆರವೇರಿಸುವರು. ಖರೀದಿದಾರರು ಸವಾಲಿನಲ್ಲಿ ಭಾಗವಹಿಸಿ ತಮ್ಮ ಅತೀ ಹೆಚ್ಚಿನ ಬೇಡಿಕೆಗಳನ್ನು ನೀಡಬಹುದು ಅಥವಾ ಟೆಂಡರ್‌ನಲ್ಲಿಯೂ ಸಹ ಭಾಗವಹಿಸಿ ತಮ್ಮ ಬೇಡಿಕೆ ನಿಡಬಹುದಾಗಿದೆ. ಹೀಗೆ ನೀಡಲಾದ ಬೇಡಿಕೆಗಳಲ್ಲಿ ಯಾವುದು ಹೆಚ್ಚು ಅದನ್ನು ಮಾತ್ರ ಪರಿಗಣಿಸಲಾಗುವುದು. ಆಸಕ್ತಿಯುಳ್ಳವರು ಸದರಿ ಟೆಂಡರ್ ಕಂ ಹರಾಜಿನಲ್ಲಿ ಭಾಗವಹಿಸಿ ವಾಹನಗಳನ್ನು ಪಡೆದುಕೊಳ್ಳಬಹುದಾಗಿದೆ.
 
ಹೆಚ್ಚಿನ ಮಾಹಿತಿಯನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿ, ಹಳಿಯಾಳ ವಿಭಾಗ, ಹಳಿಯಾಳ ಇವರ ಕಚೇರಿಗೆ ಖುದ್ದು ಭೇಟಿ ನೀಡಿ ಅಥವಾ ದೂರವಾಣಿ ಸಂ. 08284-220128 ಅಥವಾ ಇ-ಮೇಲ್ ವಿಳಾಸ dcfhalyal@gmail.com ನ್ನು ಸಂಪರ್ಕಿಸಿ ಪಡೆಯಬಹುದಾಗಿದೆ ಎಂದು ಹಳಿಯಾಳ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತಕುಮಾರ್ ಕೆ.ಸಿ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post a Comment

0Comments

Post a Comment (0)