ಬೆಂಗಳೂರು : ಮಹಿಳೆ ಎಲ್ಲಾ ಕ್ಷೇತ್ರದಲ್ಲೂ ಮುಂದುವರೆದಿದ್ದಾಳೆ. ಆಕೆಗೆ ಮಾತ್ರ ಎಲ್ಲವನ್ನೂ ನಿಭಾಯಿಸುವ ಶಕ್ತಿಯಿದೆ ಎಂದು ಮೀಡಿಯಾ ಕನೆಕ್ಟ್ ಸಂಸ್ಥಾಪಕಿ ಹಾಗೂ ಸಿಇಒ ದಿವ್ಯಾ ರಂಗೇನಹಳ್ಳಿ ಹೇಳಿದರು. ನಗರದಲ್ಲಿ ವರ್ಲ್ಡ್ ಆರ್ಯವೈಶ್ಯ ಮಹಸಭಾ ವತಿಯಿಂದ ಆಯೋಜಿಸಲಾದ ಗ್ಲಿಟರಿಂಗ್ ಎಂಟರ್‌ಪ್ರಿನರ್ಸ್ ವೇದಿಕೆಯ ಉದ್ಘಾಟನಾ ಸಮಾರಂಭದಲ್ಲಿ ವಿಶೇಷ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಮಹಿಳೆಗೆ ಮಾತ್ರ ಎಲ್ಲವನ್ನು ನಿಭಾಯಿಸುವ ಶಕ್ತಿಯಿದೆ. ಆಕೆ ಎಲ್ಲಾ ಕ್ಷೇತ್ರಗಳಲ್ಲೂ ಇಂದು ತಲೆ ಎತ್ತಿ ನಿಂತಿದ್ದಾಳೆ. ಮಹಿಳೆಯರ ಸ್ಥೈರ್ಯ, ಸ್ಫೂರ್ತಿಯೇ ಇಂದು ಆಕೆಯ ಶಕ್ತಿಯನ್ನು ಜಗತ್ತಿಗೆ ಪರಿಚಯಿಸುವಂತೆ ಮಾಡಿರುವುದು. ಇದೊಂದು ಉತ್ತಮ ಅವಕಾಶಗಳನ್ನು ಒದಗಿಸುವ ಉಪಯುಕ್ತ ವೇದಿಕೆಯಾಗಲಿ ಎಂದು ಆಶಿಸಿದರು.
ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷರಾದ ಮಂಜುಳಾ ಶಂಕರ್ ಮಾತನಾಡಿ, ಮಹಿಳೆಯರು ಬೆಳೆಯುವುದನ್ನು ನಾವು ಪ್ರೋತ್ಸಾಹಿಸುತ್ತೇವೆ. ನೀವು ಯಾವುದೇ ರೀತಿಯ ಸಹಾಯಗಳನ್ನು ಕೋರಿದ್ದಲ್ಲಿ ಖಂಡಿತಾ ನಾವು ಸಹಾಯ ಮಾಡಲು ಸಿದ್ಧರಿದ್ದೇವೆ ಎಂದು ಭರವಸೆಯ ಮಾತುಗಳಾಡಿದರು.
ಕಾರ್ಯಕ್ರಮದ ಗೌರವಾನ್ವಿತ ಅತಿಥಿಗಳಾದ ಹಾಗೂ ವರ್ಲ್ಡ್ ಆರ್ಯವೈಶ್ಯ ಮಹಾಸಭಾ ಸಮಾಜದ ಜಾಗತಿಕ ಅಧ್ಯಕ್ಷರಾದ ರಾಮಕೃಷ್ಣ ಟಂಗುಟೂರಿ ಮಾತನಾಡಿ, ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಇಂದಿನ ಯುಗದಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಮುಂದುವರೆದಿದ್ದಾಳೆ. ಪುರುಷರಿಗಿಂತ ಮಹಿಳಾ ಉದ್ಯಮಿಗಳೇ ಹೆಚ್ಚಾಗಿದ್ದಾರೆ. ಅವರ ಆತ್ಮಸ್ಥೈರ್ಯದಿಂದ ಇಂದು ಜಗತ್ತಿನೆಲ್ಲೆಡೆ ದಾಪುಗಲನ್ನು ಇಟ್ಟಿದ್ದಾರೆ. ಇದಕ್ಕೆ ವರ್ಲ್ಡ್ ಆರ್ಯವೈಶ್ಯ ಮಹಾಸಭಾ ಕೂಡ ಪ್ರೋತ್ಸಾಹಿಸುತ್ತಾ ಬಂದಿದೆ. ಈ ವೇದಿಕೆ ಮಹಿಳಾ ಉದ್ಯಮಿಗಳಿಗೆ ಇನ್ನಷ್ಟು ಭರವಸೆಗಳನ್ನು ನೀಡಲು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವರ್ಲ್ಡ್ ಆರ್ಯವೈಶ್ಯ ಮಹಸಭಾ ಅಧ್ಯಕ್ಷೆ ಲಕ್ಷ್ಮಿ ಸಿ.ಪಿ, ಕಾರ್ಯದರ್ಶಿ ಪ್ರತಿಭಾ ಪ್ರಸಾದ್, ಪ್ರವೀಣ, ಅಶ್ವಿನಿ, ದೀಪಶ್ರೀ, ಶಿಲ್ಪಾ ಉಮೇಶ್, ಕವಿತಾ ಪಣಿರಾಜ್, ಸ್ನೇಹಾ ಕಾರ್ತಿಕ್, ಗೌರಿ ದತ್ತ, ಸುಬ್ಬಲಕ್ಷ್ಮಿ, ಸುನಿತಾ ಪ್ರಸಾದ್, ಸಿಂಧು ಸಫರಂ ಮತ್ತು ವರ್ಲ್ಡ್ ಆರ್ಯವೈಶ್ಯ ಮಹಸಭಾ ಸದಸ್ಯರು ಉಪಸ್ಥಿತರಿದ್ದರು.
ಈ ವರದಿಯನ್ನು ತಮ್ಮ ಮಾಧ್ಯಮದಲ್ಲಿ ಪ್ರಕಟಿಸಬೇಕೆಂದು ಕೋರಿಕೆ
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 6364466240, 6364409651