"ಮಯೋಪಿಯಾ ಓಟ" ಎಂಬ ಕಾರ್ಯಕ್ರಮವನ್ನು ನಾರಾಯಣ ನೇತ್ರಾಲಯದಿಂದ ಆಯೋಜಿಸಲಾಗಿದೆ. ಇದೊಂದು ಕೌಟುಂಬಿಕ ಕಾರ್ಯಕ್ರಮ

varthajala
0

 ಬೆಂಗಳೂರು:  ಮಯೋಪಿಯಾ (ಸಮೀಪದೃಷ್ಟಿ) ವಿರುದ್ಧ ಹೋರಾಟಕ್ಕಾಗಿ ಜುಲೈ 28ಕ್ಕೆ ಓಟ ಸೇರಿದಂತೆ ವಿವಿಧ ಸ್ಪರ್ಧೆಗಳು ಮಯೋಪಿಯಾ ಎಂಬ ಸಾಂಕ್ರಾಮಿಕವಾಗಿ ಹೆಚ್ಚುತ್ತಿರುವ ರೋಗವನ್ನು ಎದುರಿಸುವುದಕ್ಕಾಗಿ "ಮಯೋಪಿಯಾ ಓಟ" ಎಂಬ ಕಾರ್ಯಕ್ರಮವನ್ನು ನಾರಾಯಣ ನೇತ್ರಾಲಯದಿಂದ ಆಯೋಜಿಸಲಾಗಿದೆ. ಇದೊಂದು ಕೌಟುಂಬಿಕ ಕಾರ್ಯಕ್ರಮವಾಗಿದೆ. 

ಮಯೋಪಿಯಾ ಎಂಬುದು ಜಾಗತಿಕ ಸಾಂಕ್ರಾಮಿಕ ರೋಗವಾಗಿ ಕಾಣಿಸಿಕೊಳ್ಳುತ್ತಿದ್ದು, 2050ನೇ ಇಸವಿಯ ಹೊತ್ತಿಗೆ ವಿಶ್ವದ ಶೇಕಡಾ 50ರಷ್ಟು ಜನಸಂಖ್ಯೆಯ ಮೇಲೆ ಇದರ ಪರಿಣಾಮ ಆಗಬಹುದು ಎಂದು ಅಂದಾಜಿಸಲಾಗಿದೆ. ಸದ್ಯಕ್ಕೆ ಪ್ರತಿ ನಾಲ್ಕು ಮಕ್ಕಳಲ್ಲಿ ಒಂದು ಮಗುವಿಗೆ ಈ ಮಯೋಪಿಯಾ ಬಾಧಿಸುತ್ತಿದೆ. ಮತ್ತು ಈ ಸ್ಥಿತಿಯು ಸುಧಾರಣೆ ಕಾಣುವುದಿಲ್ಲ, ಬದಲಿಗೆ ವಯಸ್ಸು ಹೆಚ್ಚಾದಂತೆ ಉಲ್ಬಣ ಆಗಬಹುದು. ಹೆಚ್ಚಾದ ಮಯೋಪಿಯಾ, ಕಣ್ಣಿನ ಪೊರೆ, ರೆಟಿನಾದ ಬೇರ್ಪಡುವಿಕೆ, ಮಾಕ್ಯುಲೋಪತಿ ಹಾಗೂ ಗ್ಲುಕೋಮಾದಂಥ ಅಪಾಯಗಳನ್ನು ಹೆಚ್ಚಿಸಬಹುದು.

ಮಕ್ಕಳಲ್ಲಿ ಮಯೋಪಿಯಾಗೆ ಕಾರಣ ಆಗುತ್ತಿರುವ ಅಪಾಯಕಾರಿ ಅಂಶವೆAದರೆ, ವಂಶವಾಹಿ, ಹೆಚ್ಚಿದಂಥ ಹತ್ತಿರದ ಚಟುವಟಿಕೆಗಳು, ಹೊರಾಂಗಣ ಆಟದಲ್ಲಿ ಕಡಿಮೆ, ಸ್ಕಿçÃನ್‌ಗಳನ್ನು (ಮೊಬೈಲ್, ಟಿ.ವಿ, ಕಂಪ್ಯೂಟರ್) ನೋಡುವುದರಲ್ಲೇ ಹೆಚ್ಚಿನ ಸಮಯ ಕಳೆಯುವುದು ಹಾಗೂ ಪೌಷ್ಟಿಕಾಂಶಗಳ ಕೊರತೆಯಾಗಿದೆ. ಮಯೋಪಿಯಾ ಹೊಂದಿರುವ ಮಕ್ಕಳು ಸಾಮಾನ್ಯವಾಗಿ ಕ್ರೀಡೆಯಿಂದ ದೂರ ಸರಿಯುತ್ತಾರೆ ಮತ್ತು ಮಯೋಪಿಯಾದಿಂದಾಗಿ ದೃಷ್ಟಿ ಮಂದ ಆಗುವುದರಿಂದ ತರಗತಿಯಲ್ಲಿನ ಏಕಾಗ್ರತೆಯನ್ನು ಕಡಿಮೆ ಮಾಡುತ್ತದೆ. ಮಯೋಪಿಯಾವನ್ನು ಗುರುತಿಸದೇ ಇದ್ದಲ್ಲಿ ಇದು ಶೈಕ್ಷಣಿಕ ಕಾರ್ಯಕ್ಷಮತೆ ಕುಂಠಿತವಾಗುವುದಕ್ಕೆ ಕಾರಣವಾಗಬಹುದು ಮತ್ತು ಆತ್ಮವಿಶ್ವಾಸದ ಕೊರತೆ ಅಥವಾ ಸಾಮಾಜಿಕವಾಗಿ ಪಾಲ್ಗೊಳ್ಳುವುದರಿಂದ ತಪ್ಪಿಸುವಂತಹ ಮಾನಸಿಕ ಪರಿಣಾಮಗಳನ್ನು ಉಂಟುಮಾಡಬಹುದು. ಆದ್ದರಿಂದ ಸಮೀಪದೃಷ್ಟಿಯ ಆರಂಭಿಕ ಚಿಹ್ನೆಗಳನ್ನು ಗುರುತಿಸುವುದಕ್ಕೆ ಮತ್ತು ಅದನ್ನು ನಿಗ್ರಹಿಸಲು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಶಿಕ್ಷಕರು ಮತ್ತು ಪೋಷಕರು ನಿರ್ಣಾಯಕ ಪಾತ್ರ ವಹಿಸುತ್ತಾರೆ.

                          

“ಇತ್ತೀಚಿನ ಶಾಲಾ ಮಕ್ಕಳ ಛಾಯಾಚಿತ್ರಗಳನ್ನು ನೀವು ನೋಡಿದರೆ, ಬಹುತೇಕ ಎಲ್ಲಾ ಮಕ್ಕಳು ಕನ್ನಡಕ ಧರಿಸಿರುವುದನ್ನು ನೀವು ಕಾಣಬಹುದು. ಇದು ಆತಂಕಕಾರಿಯಾಗಿದೆ. ಕನ್ನಡಕವು ಅಂಗವೈಕಲ್ಯವಾಗಿದೆ, ಮಯೋಪಿಯಾಗೆ ಚಿಕಿತ್ಸೆ ಇಲ್ಲ ಎಂದು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಅದರ ತಡೆಗಟ್ಟುವಿಕೆಯ ಬಗ್ಗೆ ಶಿಕ್ಷಣ ನೀಡುವುದೇ ಚಿಕಿತ್ಸೆಯಾಗಿದೆ. ಪ್ರತಿದಿನ ಹೊರಾಂಗಣದಲ್ಲಿ ಮತ್ತು ಸೂರ್ಯನ ಬೆಳಕಿಗೆ 2 ಗಂಟೆಗಳ ಕಾಲ ಕಡ್ಡಾಯವಾಗಿ ಒಡ್ಡಿಕೊಳ್ಳುವುದು ಮಯೋಪಿಯಾದ ಅಪಾಯವನ್ನು ಕಡಿಮೆ ಮಾಡುವಲ್ಲಿ ಗಮನಾರ್ಹ ಪರಿಣಾಮ ಬೀರುತ್ತದೆ ಎಂದು ಅಧ್ಯಯನಗಳು ತೋರಿಸಿವೆ. ಶಾಲೆಗಳಲ್ಲಿ ಮಕ್ಕಳನ್ನು ಕಡ್ಡಾಯವಾಗಿ ಪರೀಕ್ಷಿಸಲು, ಮಕ್ಕಳಿಗೆ ಕನ್ನಡಕವನ್ನು ಒದಗಿಸಲು ಮತ್ತು ಸರಿಯಾದ ಚಿಕಿತ್ಸೆಗಾಗಿ ಮಯೋಪಿಯಾ ಆರಂಭಿಕ ಚಿಹ್ನೆಗಳನ್ನು ಗುರುತಿಸಲು ಶಿಕ್ಷಕರಿಗೆ ಶಿಕ್ಷಣ/ತರಬೇತಿ ನೀಡಬೇಕೆಂದು ನಾವು ಸರ್ಕಾರವನ್ನು ಒತ್ತಾಯಿಸಿ, ಕನ್ನಡಕ ಮುಕ್ತ ಜಗತ್ತನ್ನು ಸೃಷ್ಟಿಸುತ್ತೇವೆ” ಎಂದು ನಾರಾಯಣ ನೇತ್ರಾಲಯದ ಅಧ್ಯಕ್ಷರಾದ ಡಾ ರೋಹಿತ್ ಶೆಟ್ಟಿ ತಿಳಿಸಿದರು. 

ಮಯೋಪಿಯಾ ಕ್ಲಿನಿಕ್, ಅತ್ಯಾಧುನಿಕ ಸಂಶೋಧನೆ ಮತ್ತು ಮಯೋಪಿಯಾ ನಿಯಂತ್ರಣ ಕ್ರಮಗಳೊಂದಿಗೆ ಮಯೋಪಿಯಾದ ವಿರುದ್ಧ ಹೋರಾಡುವಲ್ಲಿ ನಾರಾಯಣ ನೇತ್ರಾಲಯವು ಮುಂಚೂಣಿಯಲ್ಲಿದೆ. ಎಲ್ಲಾ ಶಾಲೆಗಳು ಮತ್ತು ಕುಟುಂಬಗಳು ಮಕ್ಕಳ ಹೊರಾಂಗಣ ಆಟಕ್ಕೆ ಪ್ರೋತ್ಸಾಹ ನೀಡುವಂತೆ ನಾವು ಒತ್ತಾಯಿಸುತ್ತೇವೆ ಆದ್ದರಿಂದ ಅವರು “ವಿಟಮಿನ್ ಡಿ” ಗೆ ಒಡ್ಡಿಕೊಳ್ಳುತ್ತಾರೆ, ಇದು ಕಣ್ಣಿನ ಬೆಳವಣಿಗೆಯನ್ನು ನಿಯಂತ್ರಿಸಲು ಸಹಾಯ ಮಾಡುವ ಡೋಪಮೈನ್ ಬಿಡುಗಡೆಯನ್ನು ಪ್ರಚೋದಿಸುತ್ತದೆ ಮತ್ತು ಹತ್ತಿರದ ಕೆಲಸದ ಪರಿಣಾಮಗಳನ್ನು ಪ್ರತಿರೋಧಿಸುತ್ತದೆ, ಅಂತಿಮವಾಗಿ ಮಯೋಪಿಯಾ ಬೆಳವಣಿಗೆಯ ಅಪಾಯವನ್ನು ಕಡಿಮೆ ಮಾಡುತ್ತದೆ.

“ಡಾ ಕೆ ಭುಜಂಗ್ ಶೆಟ್ಟಿ ಅವರ ದೂರದೃಷ್ಟಿ ಹಾಗೂ ನಾಯಕತ್ವದಲ್ಲಿ ಮಯೋಪಿಯಾ ಕ್ಲಿನಿಕ್ ಅನ್ನು ಪ್ರಾರಂಭಿಸಿದ ಕರ್ನಾಟಕದ ಮೊದಲ ಕಣ್ಣಿನ ಆಸ್ಪತ್ರೆ ನಮ್ಮದು. ಸುಧಾರಿತ ರೋಗನಿರ್ಣಯ ಮತ್ತು ಮಯೋಪಿಯಾ ಮಾಸ್ಟರ್, ಇದು ಮಕ್ಕಳು 18 ವರ್ಷ ವಯಸ್ಸು ತಲುಪುವುದರಲ್ಲಿ ಮಯೋಪಿಯಾದ ಪ್ರಗತಿಯನ್ನು ಊಹಿಸುತ್ತದೆ. ಹಾಗಾಗಿ ನಾವು ಮಯೋಪಿಯಾ ಪ್ರಗತಿಯನ್ನು ತಡೆಗಟ್ಟುವ ಗುರಿಯನ್ನು ಹೊಂದಿದ್ದೇವೆ. ಈ ದಿನಗಳಲ್ಲಿ ಡಿಜಿಟಲೀಕರಣವು ಹೊಸ ಜೀವನ ವಿಧಾನವಾಗಿದೆ ಮತ್ತು ಅಗತ್ಯವಾಗಿದೆ, ಈ ಸಮಸ್ಯೆಯನ್ನು ನಿಭಾಯಿಸಲು ತಡೆಗಟ್ಟುವ ಕ್ರಮಗಳನ್ನು ಕೈಗೊಳ್ಳಲು ಆಸ್ಪತ್ರೆಗಳು, ಶಾಲೆಗಳು, ಪೋಷಕರು ಮತ್ತು ಸರ್ಕಾರವು ಒಗ್ಗೂಡುವುದು ಬಹಳ ಮುಖ್ಯ” ಎಂದು ಗ್ರೂಪ್ ಕ್ಯಾಪ್ಟನ್ ಎಸ್ ಕೆ ಮಿತ್ತಲ್ ವಿಎಸ್‌ಎಂ, (ವೆಟೆರನ್) ಸಿ.ಇ.ಓ, ನಾರಾಯಣ ನೇತ್ರಾಲಯ, ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. 

“10 ವರ್ಷಗಳ ಹಿಂದೆ, ಗ್ರಾಮೀಣ ಶಾಲೆಗಳಲ್ಲಿ ಮಯೋಪಿಯಾ ಹೊಂದಿರುವ ಮಕ್ಕಳ ಸಂಖ್ಯೆ ಇಂದಿನಕ್ಕಿAತ ಕಡಿಮೆಯಿತ್ತು ಆದರೆ ಈಗ ಮುಖ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿನ ಮಕ್ಕಳಲ್ಲಿ ಸ್ಮಾರ್ಟ್ಫೋನ್‌ಗಳ ಬಳಕೆಯೂ ಹೆಚ್ಚಾಗಿದೆ. ಹಾಗಾಗಿ ಕಣ್ಣಿನ ತಪಾಸಣೆ ಮತ್ತು ಅಂತಹ ಪ್ರಕರಣಗಳನ್ನು ಗುರುತಿಸುವ ಅಗತ್ಯತೆ ಮತ್ತು ಕನ್ನಡಕಗಳನ್ನು ಒದಗಿಸುವುದು ನಿರ್ಣಾಯಕವಾಗಿದೆ ಎಂದು ಮಕ್ಕಳ ನೇತ್ರವಿಭಾಗದ ಮುಖ್ಯಸ್ಥರು, ಸ್ಟಾçಬಿಸ್ಮೋಲೋಜಿ ಮತ್ತು ಮಕ್ಕಳ ನೇತ್ರತಜ್ಞೆಯಾದ ಡಾ ಭಾನುಮತಿ ಎಂ, ತಿಳಿಸಿದರು.

ಇದು ಕೇವಲ ಓಟವಲ್ಲ; ಇದು ಮಯೋಪಿಯಾ ಮೋಜಿನವಲಯದಲ್ಲಿ ಮೋಜು-ತುಂಬಿದ ಕಾರ್ಯಕ್ರಮ ಆಗಿದ್ದು, ಇದು ಇಡೀ ಕುಟುಂಬಕ್ಕಾಗಿ ಚಟುವಟಿಕೆಗಳನ್ನು ಒಳಗೊಂಡಿರುತ್ತದೆ, ಮಕ್ಕಳನ್ನು ತೊಡಗಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ ಮತ್ತು ಮಯೋಪಿಯಾ ಹಾಗೂ ಅದರ ತಡೆಗಟ್ಟುವಿಕೆಯ ಬಗ್ಗೆ ಅವರಿಗೆ ಶಿಕ್ಷಣವೂ ನೀಡುತ್ತದೆ.

ಕಾರ್ಯಕ್ರಮ ಮುಖ್ಯಾಂಶಗಳು:

•⁠ ⁠1.5 ಕೆ ಕುಟುಂಬದ ಓಟ

•⁠ ಮ್ಯಾಜಿಕ್ ಶೋ

•⁠ ಫೇಸ್ ಪೇಂಟಿAಗ್

•⁠ ⁠ಬೌನ್ಸಿ ಕ್ಯಾಸಲ್

•⁠ ಮಕ್ಕಳಿಗಾಗಿ ಬಹುಮಾನಗಳೊಂದಿಗೆ ವಿನೋದ ಮತ್ತು ಶೈಕ್ಷಣಿಕ ಆಟಗಳು

•⁠ ⁠ಜಾನಪದ ಅಕಾಡೆಮಿಯಿಂದ ಸಾಂಪ್ರದಾಯಿಕ ಜಾನಪದ ಪ್ರದರ್ಶನ

•⁠ ⁠ಮಕ್ಕಳಿಗೆ ಆರೋಗ್ಯಕರ ತಿಂಡಿಗಳು ಮತ್ತು ಪೌಷ್ಟಿಕಾಂಶದ ಸಲಹೆ


ಕಾರ್ಯಕ್ರಮ ವಿವರಗಳು:

•⁠ ⁠ಕಾರ್ಯಕ್ರಮ: "ಮಯೋಪಿಯಾ ಓಟ"

•⁠ ⁠ದಿನಾಂಕ ಮತ್ತು ಸಮಯ: ಭಾನುವಾರ, 28ನೇ ಜುಲೈ 2024, ಬೆಳಗ್ಗೆ 7:30 ರಿಂದ 11ರವರೆಗೆ

•⁠ ⁠ಸ್ಥಳ: ರಾಜೇಂದ್ರ ಸಿಂಗ್‌ಜಿ ಸೇನಾ ಅಧಿಕಾರಿಗಳ ಸಂಸ್ಥೆ, ಎಂ.ಜಿ ರಸ್ತೆ, ಬೆಂಗಳೂರು.

"ಗಮನಿಸಬೇಕಾದ ಅಂಶವೆAದರೆ, ಮಯೋಪಿಯಾದಲ್ಲಿ ಅನುವಂಶಿಕ, ಅಪಾಯಕಾರಿ ಅಂಶವಾಗಿ ಪಾತ್ರವಹಿಸುತ್ತದೆ, ಆದರೆ ಪ್ರಸ್ತುತ ಜೀವನಶೈಲಿಯು ಅದರ ಬೆಳವಣಿಗೆಗೆ ಪ್ರಮುಖ ಕಾರಣವಾಗಿದೆ. ಕುಟುಂಬಗಳಲ್ಲಿ ಜೀವನಶೈಲಿಯ ಬದಲಾವಣೆಗಳನ್ನು ಪ್ರಾರಂಭಿಸಿದರೆ, ಉದಾಹರಣೆಗೆ ಹೊರಾಂಗಣ ಆಟವನ್ನು ಹೆಚ್ಚಿಸುವುದು, ದಿನಕ್ಕೆ 2 ಗಂಟೆಗಳಿಗಿAತ ಕಡಿಮೆ ಮೊಬೈಲ್, ಟಿ.ವಿ, ಕಂಪ್ಯೂಟರ್ ಪರದೆಯ ಸಮಯವನ್ನು ಕಡಿಮೆ ಮಾಡುವುದು ಬಹಳ ಮುಖ್ಯವಾಗಿ, ವಯಸ್ಕರು ಮಕ್ಕಳ ಮೇಲೆ ಸಕಾರಾತ್ಮಕ ಪ್ರಭಾವ ಬೀರಲು ಡಿಜಿಟಲ್ ಸಾಧನಗಳ ಬಳಕೆಯನ್ನು ಕಡಿಮೆಗೊಳಿಸಿದರೆ, ಅದು ಗಮನಾರ್ಹವಾದ ವ್ಯತ್ಯಾಸ ಉಂಟಾಗಬಹುದು." ಎಂದು ಡಾ. ಬಿ ಎ ಮೈತ್ರಿ, ಸ್ಟಾçಬಿಸ್ಮೋಲೋಜಿ ಮತ್ತು ಮಕ್ಕಳ ನೇತ್ರತಜ್ಞೆ ತಿಳಿಸಿದರು.ಮಯೋಪಿಯಾದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ನಿಮ್ಮ ಬೆಂಬಲವನ್ನು ನಾವು ವಿನಮ್ರರಾಗಿ ವಿನಂತಿಸುತ್ತೇವೆ. ನಮ್ಮ ಮಕ್ಕಳಿಗೆ ಸ್ಪಷ್ಟವಾದ ಮತ್ತು ಉಜ್ವಲ ಭವಿಷ್ಯವನ್ನು ಖಚಿತಪಡಿಸಿಕೊಳ್ಳಲು ಆರಂಭದಲ್ಲೇ ಗುರುತಿಸುವುದು ಮತ್ತು ಚಿಕಿತ್ಸೆಗಾಗಿ ಈ ಕಾಳಜಿಯ ಕುರಿತು ಜನರಿಗೆ ಶಿಕ್ಷಣ ನೀಡುವುದು ಬಹಳ ಮುಖ್ಯ. ಬನ್ನಿ ಮತ್ತು ಮ್ಯಾಜಿಕ್ ಅನ್ನು ಅನುಭವಿಸಿ ಹಾಗೂ ಮಯೋಪಿಯಾ ವಿರುದ್ಧದ ಹೋರಾಟದಲ್ಲಿ ನಮ್ಮೊಂದಿಗೆ ಒಂದಾಗಿ.

ಗ್ರೂಪ್ ಕ್ಯಾಪ್ಟನ್ ಎಸ್ ಕೆ ಮಿತ್ತಲ್ ವಿಎಸ್‌ಎಂ (ವೆಟೆರನ್)

ಸಿ ಇ ಓ 

ನಾರಾಯಣ ನೇತ್ರಾಲಯ

Post a Comment

0Comments

Post a Comment (0)