ವಿಶ್ವ ಕನ್ನಡ ಹಬ್ಬಕ್ಕೆ, ಸಿಂಗಾಪುರ ಕನ್ನಡ ಸಂಘ ಹಾಗೂ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಒಪ್ಪಂದದ ಸಹಿ..

varthajala
0

 ಸಿಂಗಾಪುರದಲ್ಲಿ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಆಯೋಜಿಸಲಿರುವ ವಿಶ್ವ ಕನ್ನಡ ಹಬ್ಬದ ಪೂರ್ವಬಾವಿ ಸಿದ್ಧತೆ ಹಾಗೂ ಪತ್ರಿಕಾಗೋಷ್ಠಿ ನಡೆಸಲು ಅಧ್ಯಕ್ಷರಾದ ಶಿವಕುಮಾರ್ ನಾಗರ ನವಿಲೆಯವರು  ಸಿಂಗಪುರಕ್ಕೆ ಭೇಟಿ ನೀಡಿ ಅಲ್ಲಿನ ಸಿಂಗಪುರ ಕನ್ನಡ ಸಂಘದ ಅಧ್ಯಕ್ಷ ವೆಂಕಟರತ್ನಯ್ಯ ಹಾಗೂ ಉಪಾಧ್ಯಕ್ಷ ಶಿವಕುಮಾರ್ ರವರೊಂದಿಗೆ ವಿಶ್ವ ಕನ್ನಡ ಹಬ್ಬದ ಕುರಿತು ಸುದೀರ್ಘ ಚರ್ಚೆ ನಡೆಸಿ ಮಹತ್ತರ ತೀರ್ಮಾನಗಳನ್ನು ಕೈಗೊಳ್ಳಲಾಯಿತು. 



ಕನ್ನಡ ನಾಡು ನುಡಿಗಾಗಿ ಸೇವೆ ಸಲ್ಲಿಸಿರುವ ಸಾಧಕರಿಗೆ 'ವಿಶ್ವಮಾನ್ಯ ಪ್ರಶಸ್ತಿ' ನೀಡುವ ಕುರಿತು ತಿಳಿಸಲಾಯಿತು.  ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಸಂಪೂರ್ಣ ಯಶಸ್ವಿಗೆ ಸಿಂಗಪುರ ಕನ್ನಡ ಸಂಘದೊಂದಿಗೆ  ಒಪ್ಪಂದದ ಮೂಲಕ ಕಾರ್ಯಕ್ರಮ ಸಂಪೂರ್ಣ ಯಶಸ್ವಿಗೆ ಅಧ್ಯಕ್ಷರಿಬ್ಬರೂ ಸಹಿ ಮಾಡಿದರು. ಸಭೆಯಲ್ಲಿ ಭಾಗವಹಿಸಿದ ಕನ್ನಡ ಸಂಘದ ಪದಾಧಿಕಾರಿಗಳು ಕನ್ನಡ ಭಾವುಟವನ್ನು ಹಿಡಿದು ಬೆಂಬಲ ಸೂಚಿಸಿದರು. ಹಾಗೆಯೇ ಕಾರ್ಯಕ್ರಮಕ್ಕೆ ನಾವೆಲ್ಲರೂ ಕನ್ನಡ ತಾಯಿಯ ಸೇವೆಗೆ ತನು ಮನ  ಅರ್ಪಿಸಿ ದುಡಿಯುವುದಾಗಿ ಅಧ್ಯಕ್ಷರಿಗೆ ತಿಳಿಸಿದರು. ನಂತರ ಸ್ಥಳ ವೀಕ್ಷಣೆ ಹಾಗೂ ಸಭಾಂಗಣ ವೀಕ್ಷಿಸಿ ಕಾರ್ಯಕ್ರಮದ ಸ್ಥಳ ನಿಗಧಿ ಮಾಡಲಾಯಿತು. ಅಧ್ಯಕ್ಷರು ಸಿಂಗಾಪುರದಲ್ಲಿ ಪತ್ರಿಕಾ ಗೋಷ್ಠಿಯನ್ನು ಏರ್ಪಡಿಸಿ ಕಾರ್ಯಕ್ರಮದ ಉದ್ದೇಶ ಹಾಗೂ ರೂಪುರೇಶೆಗಳನ್ನು ತಿಳಿಸಿದರು. ವಿಶ್ವ ಕನ್ನಡ ಹಬ್ಬದ ಮೂಲ ದ್ಯೇಯ ಅನಿವಾಸಿ ಕನ್ನಡಿಗರ ಹಾಗೂ ಮೂಲ ಕನ್ನಡಿಗರ ಹೃದಯ ಬೆಸೆಯುವುದು ಹಾಗೂ ನಾಡಿನ ಭಾಷಾ ಪರಂಪರೆಯನ್ನು ವಿಶ್ವಕ್ಕೆ ತಿಳಿಸುವುದಾಗಿದೆ. ಈ ಕಾರ್ಯಕ್ರಮಕ್ಕೆ ಸಿಂಗಪುರದ ಕನ್ನಡಿಗರ ಸಹಕಾರ ಅಗತ್ಯವಾಗಿದ್ದು, ಕನ್ನಡ ಹಬ್ಬಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ವಿಶ್ವ ಕನ್ನಡ ಹಬ್ಬದ ಪದಾಧಿಕಾರಿಗಳಾದ ಸುನೀಲ್,  ರಜತ್  ಹಾಗೂ ಸಿಂಗಾಪುರ ಕನ್ನಡ ಸಂಘದ ಪದಾಧಿಕಾರಿಗಳಾದ  ಸುದೀಪ್ ಪೆರ್ಡೂರ್, ಲಕ್ಷ್ಮಿ ಶ್ರೀ, ರಮ್ಯಾ ಎಸ್.ವೈ, ಶ್ರೀನಿವಾಸ್ ಕೆ.ಜೆ,  ಶ್ರೀಕಾಂತ್ ಪುರುಷೋತ್ತಮ,  ⁠ನಿಖಿತಾ ಪ್ರಸಾದ್  ಮುಂತಾದವರು  ಉಪಸ್ಥಿತರಿದ್ದರು.

Post a Comment

0Comments

Post a Comment (0)