ಬೆಂಗಳೂರು; ತುಮಕೂರು ವಿ.ವಿ ಮಾಜಿ ಕುಲಪತಿ ಪ್ರೊ.ಎಸ್ ಸಿ.ಶರ್ಮಾ ಅವರು ಮೆಟೀರಿಯಲ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದಲ್ಲಿ ಅಂತಾರಾಷ್ಟ್ರೀಯ ಫೆಲೋಶಿಪ್ ಗೌರವಕ್ಕೆ ಪಾತ್ರರಾಗಿದ್ದಾರೆ.
ಇಂಟರ್ನ್ಯಾಷನಲ್ ಎಫ್.ಸಿ ಅಸೋಸಿಯೇಷನ್ ಆಫ್ ಅಡ್ವಾನ್ಸ್ಡ್ ಮೆಟೀರಿಯಲ್ಸ್ [ಐಎಎಎಂ] ಸಂಸ್ಥೆ ಈ ಗೌರವ ನೀಡಿದೆ. ಈ ಮೂಲಕ ಅವರು ಫಿಮಾ ಎಂಬ ಶ್ರೇಷ್ಠ ಗೌರವಕ್ಕೆ ಭಾಜನರಾದವರ ಸಾಲಿಗೆ ಸೇರಿದ್ದಾರೆ.ಪ್ರೊ.ಶರ್ಮಾ ಎಪಿಎಸ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾಗಿದ್ದು, ಅವರು ನ್ಯಾಕ್ [ಎನ್.ಎ.ಎ.ಸಿ] ಮಾಜಿ ತುಮಕೂರು ಹಾಗು ಛತ್ತೀಸ್ ಗಢ ವಿಶ್ವವಿದ್ಯಾಲಯದ ಕುಲಪತಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಮಹತ್ವದ ಗೌರವಕ್ಕೆ ಪಾತ್ರರಾದ ಪ್ರೋ. ಶರ್ಮಾ ಅವರನ್ನು ಎಪಿಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ವಿಷ್ಣು ಭರತ್ ಅಲಂಪಲ್ಲಿ ಮತ್ತಿತರರು ಅಭಿನಂದನೆ ಸಲ್ಲಿಸಿದ್ದಾರೆ.