ಬೆಂಗಳೂರು; ಕನ್ನಡ ಕರಾವಳಿ ವೇದಿಕೆ ಆರಂಭವಾಗಿ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಜು. 14 ಭಾನುವಾರ ದಂದು ವಿಜಯನಗರದ ಬಂಟರ ಸಂಘದಲ್ಲಿ “ರಜಿತ ಮಹೋತ್ಸವ ಕಾರ್ಯಕ್ರಮ" ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಕರಾವಳಿ ವೇದಿಕೆಯ ಅಧ್ಯಕ್ಷರಾದ ನಾಗರಾಜ ಶೆಟ್ಟಿ ತಿಳಿಸಿದರು.
ಕರ್ನಾಟಕ ವಿಧಾನಸಭಾಧ್ಯಕ್ಷರಾದ ಯುಟಿ ಖಾದರ್ ಅವರಿಂದ ಕರಾವಳಿ ಸಿರಿ ಸಮಾರೋಪ ಸಮಾರಂಭ ಉದ್ಘಾಟಿಸಲಿದ್ದಾರೆ ಹಾಗೂ ಮಾಜಿ ಮುಖ್ಯಮಂತ್ರಿ ಮತ್ತು ಮಾಜಿ ಕೇಂದ್ರ ಸಚಿವರಾದ ಡಿ ವಿ ಸದಾನಂದ ಗೌಡ, ಕುಮಾರಿ ಶೋಭಾ ಕರಂದ್ಲಾಜೆ, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಸಚಿವರು, ಭಾರತ ಸರಕಾರ, ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಶಿವರಾಜ ತಂಗಡಗಿ, ಹಾಗೂ ದಕ್ಷಿಣ ಕನ್ನಡ ಲೋಕಸಭಾ ಸದಸ್ಯರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ರ ಉಪಸ್ಥಿತಿಯಲ್ಲಿ ಕಾರ್ಯಕ್ರಮಗಳಿರುತ್ತವೆ.
ಅಂದು ಬೆಳಿಗ್ಗೆ 9:00 ಗಂಟೆಯಿಂದ ರಕ್ತದಾನ ಶಿಬಿರ ಹಾಗೂ ಆರೋಗ್ಯ ತಪಾಸಣಾ ಶಿಬಿರವನ್ನು ಗೋವಿಂದರಾಜ ನಗರ ಶಾಸಕ ಪ್ರಿಯ ಕೃಷ್ಣ ರವರು ಉದ್ಘಾಟಿಸಲಿದ್ದಾರೆ ಮಾಜಿ ಲೋಕಾಯುಕ್ತ ಜಸ್ಟಿಸ್ ಎನ್ ಸಂತೋಷ್ ಹೆಗ್ಡೆ ಅವರು ಸ್ಮರಣ ಸಂಚಿಕೆ "ರಜತ ಸಿರಿ" ಬಿಡುಗಡೆ ಮಾಡಲಿದ್ದಾರೆ ಎಂದರು
''ಕರಾವಳಿ ಸಿರಿ" ಪ್ರಶಸ್ತಿ ಪ್ರಧಾನವನ್ನು ಮಾಜಿ ಮುಖ್ಯಮಂತ್ರಿ ಡಾ. ಎಂ ವೀರಪ್ಪಮೊಯಿಲಿ ಮಾಜಿ ವಿಧಾನಪರಿಷತ್ ಸದಸ್ಯರಾದ ಬಿ ಎಂ ಫಾರೂಕ್ ಹಾಗೂ ಆರ್ಯಭಟ ಪ್ರಶಸ್ತಿ ಪುರಸ್ಕೃತ ದೇವೇಂದ್‌ರ ಹೆಗಡೆ ಕೊಕ್ರಾಡಿಯವರಿಗೆ ನೀಡಲಾಗುವುದು ಎಂದು ಮಾಹಿತಿ ನೀಡಿದರು
ಕನ್ನಡ ಕರಾವಳಿ ವೇದಿಕೆ 1997ರಲ್ಲಿ ಸ್ಥಾಪನೆಯಾಗಿ ಇದೀಗ ರಜತ ಮಹೋತ್ಸವದ ಸಂಭ್ರಮಕ್ಕೆ ಮುನ್ನಡೆಯುತ್ತಿದೆ ಕರಾವಳಿಯ ವಿಶಿಷ್ಟ ಕಲೆ ಸಾಹಿತ್ಯ ಸಂಸ್ಕೃತಿಗಳ ಜೊತೆಗೆ ಕನ್ನಡದ ಸೊಗಡನ್ನು ಉಳಿಸಿ ಬೆಳೆಸಿ ಪ್ರೋತ್ಸಾಹಿಸುವ ಗುರಿಯೊಂದಿಗೆ ಸಾಮಾಜಿಕ ಶೈಕ್ಷಣಿಕ ಬೆಳವಣಿಗೆಯ ಹೊಣೆಗಾರಿಕೆಯೊಂದಿಗೆ ಮುನ್ನಡೆಯುತ್ತಿದೆ. ಈ ಪ್ರಯುಕ್ತ ಮಧ್ಯಾಹ್ನ ಒಂದು ಗಂಟೆಯಿಂದ ಜಾನಪದ ನೃತ್ಯ, ಗಂಗಾವತಿ ಪ್ರಾಣೇಶ್,ಬಸವರಾಜ್ ಮಹಾಮನಿ ಹಾಗೂ ಡಾ. ಕೆಪಿ ಪುತ್ತೂರಾಯರಿಂದ ಹಾಸ್ಯಕಾರ್ಯಕ್ರಮಗಳು, ಫ್ಯಾಶನ್ ಶೋ ಮತ್ತು ಯಕ್ಷಗಾನ ಕಾರ್ಯಕ್ರಮಗಳಿರುತ್ತವೆ.
ಪತ್ರಿಕಾಗೋಷ್ಠಿಯಲ್ಲಿ ಗೌರವ ಕಾರ್ಯದರ್ಶಿ ಪಣಿರಾಜ್ ಜೈನ್, ಖಜಾಂಜಿ ಗೋವಿಂದರಾಜ ಪೈ, ನಿಧಿ ಸಂಗ್ರಹ ಸಮಿತಿಯ ಅಧ್ಯಕ್ಷ ಕೆ ಜಯರಾಮ ಸೂಡ ಉಪಾಧ್ಯಕ್ಷ ವಸಂತ್ ಎಸ್ ಶೆಟ್ಟಿ, ರವಿರಾಜ್ ಶೆಟ್ಟಿ ಸಂಘಟನಾ ಕಾರ್ಯದರ್ಶಿ ರವಿರಾಜ ಶೆಟ್ಟಿ, ಮಹಿಳಾ ಉಪಾಧ್ಯಕ್ಷ ಇಂದಿರಾ ಸಿ ಎಸ್ ಉಪಸ್ಥಿತರಿದ್ದರು