ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ಗುರುಪೂರ್ಣಿಮಾ ಮಹೋತ್ಸವ

varthajala
0

ಬೆಂಗಳೂರು : ರವಿವಾರ ಜುಲೈ 21 ರಂದು ವೈಟ್ ಫೀಲ್ಡ್ ನ ಚೈತನ್ಯ ಭಾರತಿ ಸಭಾಗೃಹದಲ್ಲಿ ಗುರುಪೂರ್ಣಿಮಾ ಮಹೋತ್ಸವವು ಸಂಪನ್ನಗೊಂಡಿತು. ಗುರುಶಿಷ್ಯ ಪರಂಪರೆಯು ಭಾರತದ ಅಮೂಲ್ಯ ವೈಶಿಷ್ಟ್ಯವಾಗಿದೆ. ಯುಗಯುಗಗಳಿಂದ ಈ ಪರಂಪರೆಯು ಭಾರತದಲ್ಲಿ ನಿರಂತರವಾಗಿ ನಡೆದುಕೊಂಡು ಬಂದಿದೆ. ಈ ಗುರುಶಿಷ್ಯ ಪರಂಪರೆಯನ್ನು ಕೃತಜ್ಞತಾಭಾವದಿಂದ ಸ್ಮರಿಸಿ ಗುರುಗಳಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವ ದಿನವೇ ಗುರುಪೂರ್ಣಿಮೆ.


`ಗುರು-ಶಿಷ್ಯ ಪರಂಪರೆಯು ಕೇವಲ ಧಾರ್ಮಿಕ ಅಥವಾ ಆಧ್ಯಾತ್ಮಿಕ ಕ್ಷೇತ್ರಕ್ಕೆ ಸಂಬಂಧಿಸಿದೆ' ಎಂದೇನಿಲ್ಲ, ಇದು ಸಂಗೀತ, ಕಲೆ, ನೃತ್ಯ, ವೇದಗಳ ಅಧ್ಯಯನ ಮತ್ತು ಯುದ್ಧ ಕಲೆ ಹೀಗೆ ವಿಭಿನ್ನ ಕ್ಷೇತ್ರಗಳಿಗೆ ಸಂಬಂಧಿಸಿವೆ. ಈ ಗುರು-ಶಿಷ್ಯ ಪರಂಪರೆಯು ಧರ್ಮಸಂಸ್ಥಾಪನೆಯ ಕಾರ್ಯದಲ್ಲಿಯೂ ಕೊಡುಗೆ ನೀಡಿದೆ. ಗುರುಪೂರ್ಣಿಮೆಯ ಸಂದರ್ಭದಲ್ಲಿ ಋಷಿಮುನಿಗಳು ನೀಡಿರುವ ಆತ್ಮೋನ್ನತಿ ಮಾಡಿಕೊಳ್ಳುವ ದೈವೀ ಮಾರ್ಗ ಸುಗಮಗೊಳಿಸುವ ಪ್ರತಿಜ್ಞೆಯನ್ನು ಮಾಡಬೇಕು. ‘ಗುರು-ಶಿಷ್ಯ ಪರಂಪರೆ ಮತ್ತು ಸನಾತನ ಧರ್ಮದ ವೈಜ್ಞಾನಿಕತೆ’ ಈ ವಿಷಯವನ್ನು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ಆಯೋಜಿಸಲಾಗಿದ್ದ ಗುರುಪೂರ್ಣಿಮೆಯ ಕಾರ್ಯಕ್ರಮದಲ್ಲಿ ಮಾರ್ಗದರ್ಶನ ನೀಡಲಾಯಿತು. ಎಲ್ಲಾ ಜಿಜ್ಞಾಸುಗಳು ಮತ್ತು ಧರ್ಮಪ್ರೇಮಿ ಹಿಂದೂಗಳು ಈ ಸಮಾರಂಭದ ಲಾಭವನ್ನು ಪಡೆದುಕೊಂಡರು.


14 ವಿದ್ಯೆ ಮತ್ತು 64 ಕಲೆಗಳ ಈಶ್ವರಪ್ರಾಪ್ತಿಯ ದೃಷ್ಟಿಯಿಂದ ಶಿಕ್ಷಣ ನೀಡಬೇಕೆಂಬುದು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಕಲ್ಪವಾಗಿದ್ದು, ಪ್ರಸ್ತುತ ‘ಮಹರ್ಷಿ ಆಧ್ಯಾತ್ಮ ವಿಶ್ವವಿದ್ಯಾಲಯ’ ವತಿಯಿಂದ ವೇದಾಧ್ಯಯನದ ಮೂಲಕ, ಹಾಗೆಯೇ ಚಿತ್ರಕಲೆ, ಶಿಲ್ಪಕಲೆ, ಸಂಗೀತ ಮತ್ತು ನೃತ್ಯ ಮುಂತಾದ ಇತರ ಕಲೆಗಳ ಮೂಲಕ ಸಾಧನೆ ಮಾಡುವವರಿಗೆ ಈಶ್ವರ ಪ್ರಾಪ್ತಿಯ ದೃಷ್ಟಿಯಿಂದ ಶಿಕ್ಷಣ ನೀಡಲಾಗುತ್ತಿದೆ. ಇಲ್ಲಿಯವರೆಗೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು 20 ರಾಷ್ಟ್ರೀಯ ಮತ್ತು 95 ಅಂತರರಾಷ್ಟ್ರೀಯ ಹೀಗೆ ಒಟ್ಟು 115 ವೈಜ್ಞಾನಿಕ ಮಂಡಳಿಗಳಲ್ಲಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದೆ. ಇವುಗಳಲ್ಲಿ 14 ಅಂತರರಾಷ್ಟ್ರೀಯ ಮಂಡಳಿಗಳಲ್ಲಿ 'ಅತ್ಯುತ್ತಮ ಮಂಡನೆ' ಪ್ರಶಸ್ತಿಗಳು ಲಭಿಸಿವೆ. ಗುರುಪೂರ್ಣಿಮೆಯ ನಿಮಿತ್ತ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ಸಿದ್ಧಪಡಿಸಿರುವ ಆಧ್ಯಾತ್ಮಿಕ ಸಂಶೋಧನೆಗಳ ಬಗ್ಗೆ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ಜಿಜ್ಞಾಸುಗಳಿಗೆ ಮಾಹಿತಿ ನೀಡಲಾಯಿತು' ಎಂದು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

Post a Comment

0Comments

Post a Comment (0)