ಬೆಂಗಳೂರ, ಜು, 30; ಡಾ. ಎಪಿಜೆ ಅಬ್ದುಲ್ ಕಲಾಂ ಸೇವಾ ಸಮಿತಿಯಿಂದ ದೇಶದ ಹೆಮ್ಮೆಯ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ - ಇಸ್ರೋ ಆವರಣದಲ್ಲಿ ವಿವಿಧ ಬಗೆಯ ಫಲ ಕೊಡುವ ಸಸಿಗಳನ್ನು ನೆಡಲಾಯಿತು.
ಇಸ್ರೋ ವಾತಾವರಣವನ್ನು ಮತ್ತಷ್ಟು ಆಕರ್ಷಕಗೊಳಿಸಲು, ದೇಶದ ಪ್ರಮುಖ ವಿಜ್ಞಾನಿಗಳು ಹೆಚ್ಚಿನ ಸಾಧನೆ ಮಾಡಲು ಸೂಕ್ತ ಪರಿಸರ ನಿರ್ಮಿಸುವ ಮತ್ತು ಕ್ಷಿಪಣಿ ಪಿತಾಹಮ ಡಾ. ಅಬ್ದುಲ್ ಕಲಾಂ ಅವರ ನೆನಪಿಗಾಗಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಇಸ್ರೋ ಸಂಸ್ಥೆಯ ನಿರ್ದೇಶಕರು ಡಾ. ಎಪಿಜೆ ಅಬ್ದುಲ್ ಕಲಾಂ ಸೇವಾ ಸಮಿತಿಯ ಅಧ್ಯಕ್ಷರಾದ ಶಾಲಿನಿ ಗಿರಿ ಅವರಿಗೆ ಚಂದ್ರಯಾನ 3 ಮಾದರಿ ನೀಡಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಐ.ಎಸ್.ಟಿ.ಆರ್.ಎ.ಸಿ ನಿರ್ದೇಶಕರಾದ ಬಿ.ಎನ್. ರಾಮಕೃಷ್ಣ, ಸಹ ನಿರ್ದೇಶಕರಾದ ಅನಿಲ್ ಕುಮಾರ್, ಉಪ ನಿರ್ದೇಶಕರಾದ ರೂಪಾ ಎಂ ವಿ, ಉಪನಿರ್ದೇಶಕರಾದ ನಂದಿನಿ ಶ್ರೀನಾಥ್ ಹಾಗೂ ಸಮಿತಿಯ ಪ್ರಮುಖರು ಉಪಸ್ಥಿತರಿದ್ದರು.