ಕನ್ನಡ ಸಾಹಿತ್ಯವನ್ನು ಕ್ರಿಯಾಶೀಲಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಎಲ್.ಎಸ್.ಎಸ್ ಶೇಷಗಿರಿರಾವ್

varthajala
0

 ಬಹುಮುಖಿ ನೆಲೆಯಲ್ಲಿ ಕನ್ನಡದ ಕೆಲಸವನ್ನು ಮಾಡಿ ಕನ್ನಡ ಸಾಂಸ್ಕೃತಿಕಲೋಕವನ್ನು ಶ್ರೀಮಂತಗೊಳಿಸಿದವರಲ್ಲಿ ಪ್ರೊ.ಎಲ್.ಎಸ್.ಶೇಷಗಿರಿರಾವ್ ಒಬ್ಬರು ಎಂದು ಹಿರಿಯ ವಿದ್ವಾಂಸ ಡಾ.ಆರ್. ಲಕ್ಷ್ಮೀನಾರಾಯಣ ಅವರು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಕನ್ನಡ ಕ್ರಿಯಾ ಸಮಿತಿ ಮತ್ತು ಕನ್ನಡ ಗೆಳೆಯರ ಬಳಗದ ಸಂಯುಕ್ತಾಶ್ರಯದಲ್ಲಿ ನಡೆದ ‘ಪ್ರೊ.ಎಲ್.ಎಸ್.ಶೇಷಗಿರಿರಾವ್ ಶತಮಾನೋತ್ಸವ ವರ್ಷ’ದ ನೆನಪಿನ ಕಾರ್ಯಕ್ರಮದಲ್ಲಿ ತಿಳಿಸಿದರು.


ಎಲ್.ಎಸ್.ಎಸ್. ಅವರು ಹಲವು ಬಗೆಯ ಬರಹಗಳು ಕನ್ನಡ ಸಾಹಿತ್ಯವನ್ನು ಕ್ರಿಯಾಶೀಲಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ ಎಂದು ಹೇಳಿ ಇವರ ವಿಮರ್ಶಾ ಕೃತಿಗಳು ಸೇರಿದಂತೆ ಎಲ್ಲ ಕೃತಿಗಳು ಸರಳ ನೇರ ನಿರೂಪಣೆಯಿಂದ ಶ್ರೀಸಾಮಾನ್ಯರನ್ನು ತಲುಪುವಲ್ಲಿ ಯಶಸ್ವಿಯಾದವು. ನವೋದಯ ಕಾಲದಲ್ಲಿ ಯಾರೂ ನಿರೀಕಿಸದ ಅತ್ಯುತ್ತಮ ವಿಮರ್ಶ ಕೃತಿಗಳನ್ನು ಕನ್ನಡಕ್ಕೆ ನೀಡಿದ ಕೊಡುಗೆ ಅಪಾರ. ಮಾಸ್ತಿಯವರ ಸಾಹಿತ್ಯವನ್ನು ಕನ್ನಡಿಗರಿಗೆ ತಿಳಿಸಿಕೊಟ್ಟ ಹೆಗ್ಗಳಿಕೆ ರಾಯರಿಗೆ ಸಲ್ಲಬೇಕು. ಬಿಎಂಶ್ರೀ, ಡಿವಿಜಿ, ಬೇಂದ್ರೆ ಹೀಗೆ ಎಲ್ಲ ಪ್ರಮುಖ ಸಾಹಿತಿಗಳ ಸಾಹಿತ್ಯದ ಕೊಡುಗೆಯನ್ನು ಎಲ್ಲರಿಗೂ ಅರ್ಥವಾಗುವಂತೆ ಬರೆದ ಹೆಗ್ಗಳಿಕೆ ಇವರದು. ಸಾಹಿತಿಗಳಲ್ಲದ ಎಂ.ವಿಶ್ವೇಶ್ವರಯ್ಯ, ಜನರಲ್ ಕಾರ್ಯಪ್ಪ ಮುಂತಾದ ಸಾಧಕರ ಜೀವನ ಚರಿತ್ರೆಯನ್ನು ಬರೆದು ಕನ್ನಡ ಸಾಹಿತ್ಯವನ್ನು ವಿಸ್ತರಣೆ ಗೊಳಿಸಿದರು ಎಂದರು.

                  ಅಧ್ಯಕ್ಷತೆವಹಿಸಿದ್ದ  ಕಸಾಪ ನಿಕಟಪೂರ್ವ ಅಧ್ಯಕ್ಷ ಡಾ. ಮನುಬಳಿಗಾರ್ ಮಾತನಾಡಿ ಅವರು ಭಾರತ-ಭಾರತಿ ಮಾಲೆಯಲ್ಲಿ ರಾಷ್ಟçದ ೫೦೦ಕ್ಕೂ ಹೆಚ್ಚು ವಿವಿಧ ಕ್ಷೇತ್ರದ ಸಾಧಕರ ಪರಿಚಯಿಸುವ ಕಿರು ಪುಸ್ತಕಗಳನ್ನು ತಂದ ಇವರ ಸಾಧನೆ ವಿಶಿಷಷ್ಟಿ. ಇವರ ವಿಮರ್ಶೆ, ಕಥೆ, ಜೀವನಚಿತ್ರ, ನಾಟಕ ಸೇರಿದಂತೆ ರಚಿಸಿದ ಎಲ್ಲ ಕೃತಿಗಳೂ ಕನ್ನಡಿಗರ ಮನಸೆಳದಿವೆ. ಕನ್ನಡ ಸಾಹಿತ್ಯ, ಸಂಸ್ಕೃತಿಗೆ ನೀಡಿದ ಆಪಾರಕೊಡುಗೆಯನ್ನು ಪರಿಗಣಿಸಿ ರಾಜ್ಯ ಸರ್ಕಾರವೇ ಎಲ್.ಎಸ್.ಶೇಷಗಿರಿರಾವ್ ಅವರ ಶತಮಾನೋತ್ಸವ ವರ್ಷ ಆಚರಣೆ ಮಾಡಬೇಕು. ಸಾಹಿತ್ಯ ಪರಿಷತ್ತು ಇವರು ಶತಮಾನೋತ್ಸವವನ್ನು ವಿಷಿಷ್ಟವಾಗಿ ಆಚರಿಸಲು ಉತ್ಸಾಹ ತೋರುವ ಅಗತ್ಯವಿದೆ ಎಂದು ಹೇಳಿದರು.

                     

 ಪ್ರಾಸ್ತವಿಕ ನುಡಿಗಳನ್ನಾಡಿದ ಕನ್ನಡ ಹೋರಾಟಗಾರ ರಾ.ನಂ. ಚಂದ್ರಶೇಖರ ಕನ್ನಡ ಕಣ್ವ ಬಿ.ಎಂ.ಶ್ರೀ. ಅವರ ನೇರ ವಿದ್ಯಾರ್ಥಿಯಾಗಿ, ಕನ್ನಡ ನಾಡು-ನುಡಿಯ ರಕ್ಷಣೆಗೆ ‘ಕನ್ನಡ ಚಳವಳಿ’ ಆರಂಭಿಸಿದ ಅ.ನ.ಕೃ. ಅಪ್ತವಲಯದವರಾಗಿ ಎಲ್.ಎಸ್.ಎಸ್. ಈ ಇಬ್ಬರ ಕನ್ನಡ ಜಾಗೃತಿಯ ಮಾದರಿಗಳನ್ನು ಮೇಖೈಸಿಕೊಂಡು ಕನ್ನಡತನವನ್ನು ಬದುಕಿನ ಭಾಗವಾಗಿಸಿ ಕೊಂಡು ಮಾಡಿದ ಕನ್ನಡ ಪರಿಚಾರಿಕೆ ಅನನ್ಯವಾದದ್ದು. ಅವರ ಬಹುಮುಖಿ ಕನ್ನಡ   ಕೆಲಸಕ್ಕೆ ಕನ್ನಡಿಗರು ಕೃತಜ್ಞತೆ ಅರ್ಪಿಸಲು ಅವರ ಶತಮಾನೋತ್ಸವ ಅಚರಿಸುವ ಅಗತ್ಯವಿದೆ ಎಂದರು.

ಕನ್ನಡ ಹೋರಾಟಗಾರ ವ.ಚ. ಚನ್ನೇಗೌಡ ಅವರು ಎಲ್.ಎಸ್.ಶೇಷಗಿರಿರಾವ್ ಅವರು ಯಾವ ಮುಜುಗರವೂ ಇಲ್ಲದೆ ನೇರ ಕನ್ನಡ ಹೋರಾಟಗಳಲ್ಲಿ ಪಾಲ್ಗೊಂಡಿದ್ದುದನ್ನು ತಿಳಿಸಿ, ಕ.ರಾ.ರ.ಸಾ.ಸಂ. ಕನ್ನಡ ಕ್ರಿಯಾ ಸಮಿತಿಯ ಚಟುವಟಿಕೆಗಳಿಗೆ ಮಾರ್ಗದರ್ಶನ ಮಾಡುತ್ತಿದ್ದುದನ್ನು ಸ್ಮರಿಸಿದರು. ಎಲ್.ಎಸ್.ಶೇಷಗಿರಿರಾವ್ ಅವರ ಪತ್ನಿ ಭಾರತಿ ಅವರು ಉಪಸ್ಥಿತರಿದ್ದರು.

Post a Comment

0Comments

Post a Comment (0)