ಶಿವಮೊಗ್ಗ ಜಿಲ್ಲೆಯ ಸಾಗರದ ಮಲೆನಾಡಿನಲ್ಲಿ ಅಂದು ಹಾಡಿದ ಸಂಗೀತ ರಸದ ಕೊಂಡಿ ಇದೀಗ ಬೆಂಗಳೂರನ್ನು ಪಸರಿಸಿದೆ. ಅಣ್ಣ ಉದಯ್‌ಕುಮಾರ್ ನಾಯ್ಡು ಆರ್ಕೇಸ್ಟ್ರಾದಲ್ಲಿ ಹಾಡು ಹೇಳುತ್ತಾ ಡ್ರಮ್ ಬಾರಿಸುತ್ತಾ ಬೆಳೆದ ಆ ಹುಡುಗ ವೆಂಕಟೇಶ್ ನಾಯ್ಡು. ಬೆಂಗಳೂರಿನ ಯಶವಂತಪುರ ಬಳಿ ವಾಸಿಸುತ್ತಿರುವ ವೆಂಕಟೇಶ್ ನಾಯ್ಡು ಕೆಲವು ಶೈಕ್ಷಣಿಕ ಸಂಸ್ಥೆಗಳಿಗೆ ಡ್ರಮ್ಸ್ ಹಾಗೂ ರಿದಂ ಪ್ಯಾಡ್, ಪಾಠ ಮಾಡುತ್ತಿದ್ದಾರೆ. ಸುಮಾರು 20 ವರ್ಷಗಳಿಗೂ ಹೆಚ್ಚು ಕಾಲ ಬೆಂಗಳೂರಿನಲ್ಲಿ ನೆಲಸಿರುವ ಇವರು ಹಲವರಿಗೆ ತುತ್ತು ಅನ್ನ ಕೊಟ್ಟು ಮತ್ತೆ ಕೆಲವರಿಗೆ ಬದುಕಿನ ದಾರಿ ತೋರಿಸಿದವರು ಹೌದು.
ಇದೆಲ್ಲಾದರ ಪರಿಣಾಮ ಇವರೀಗ ಕಲಾವಿದರ ಸಂತೆಯನ್ನೇ ತಮ್ಮ ಹೃದಯದಲ್ಲಿಟ್ಟುಕೊಂಡಿದ್ದಾರೆ ಆ ಪರಿಣಾಮ ಹಲವು ವರ್ಷಗಳ ನಂತರ ವೆಂಕಟೇಶ್ ನಾಯ್ಡು ಅವರ ನೇತೃತ್ವದಲ್ಲಿ ಜನ್ಮ ತಾಳಿದೆ ಕಲಾಸಾಗರ.
ನಿನ್ನೆ ಬೆಂಗಳೂರಿನ ಮಲ್ಲೇಶ್ವರಂನ ದಿ ಗ್ರೀನ್ ಫಾತ್ ಆಡಿಟೋರಿಯಂನಲ್ಲಿ ಕಲಾಸಾಗರ ಉದ್ಘಾಟನೆ ನಡೆಯಿತು. ಹಿರಿಯ ಉಪನ್ಯಾಸಕಿ ಕವಿಯಿತ್ರಿ ಗೀತಾ ಸಿಂಧೆ ಅವರು ದೀಪಾ ಬೆಳಗಿಸಿ ಶುಭ ಹಾರೈಸಿದರು. ಈ ವೇಳೆ ಗ್ಯಾರಂಟಿ ನ್ಯೂಸ್‌ನ ನಿರ್ದೇಶಕ ಅರವಿಂದ ಸಾಗರ, ಗ್ರೀನ್ ಫಾತ್‌ನ ಹೆಚ್ ಆರ್ ಜಯರಾಂ, ಎಸ್‌ಎಂ ರಾಘವೇಂದ್ರ ರಾವ್, ಚಲನಚಿತ್ರ ಗಾಯಕಿ ಆಶಾ ಭಟ್, ಸಿನಿಮಾ ಹಾಗೂ ಕಿರುತೆರೆ ನಟ ವಿಹಾನ್ ಪ್ರಭಂಜನ್, ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಯ ಉಪಾಧ್ಯಕ್ಷರ ವಿಶೇಷ ಕರ್ತವ್ಯ ಅಧಿಕಾರಿ ಸುಬ್ರಮಣ್ಯ ಕುಮಟಾ, ಚಲನಚಿತ್ರ ಹಾಗೂ ದೂರದರ್ಶನ ಕಲಾವಿದೆ ಅನುಷಾ ಕಿಣಿ, ಸಮಾಜ ಸೇವಕ ಕಾಂತರಾಜ್ ಇನ್ನಿತರರು ಉಪಸ್ಥಿತರಿದ್ದರು.
ಭರತನಾಟ್ಯ ಕಲಾವಿದೆ ಮಂಧಸ್ಮಿತಾ ಗಾಯಕರಾದ ಸರ್ವಮಂಗಳ, ಮಾಸ್ಟರ್ ಶಂಕರ್, ರಾಜೇಶ್ ಕಶ್ಯಪ್, ಗಣೇಶ್ ಕುಮಾರ್ ಸೂತ್ರರಂ, ಕುಣಿಗಲ್ ರಾಮಚಂದ್ರ, ಗುರುಪ್ರಕಾಶ್, ಗಿರೀಶ್ ಸಾಗರ್, ಕಿರಣ್‌ಕುಮಾರ್, ಗಣೇಶ್ ಚೌಹಾಣ್, ಕುಮಾರಿ ಇಂಚರಾ, ಸೌಮ್ಯ ರಾವ್, ಮಂಗಳಹರ್ಷ, ಗೀತಾ ಭತ್ತದ, ದಿವ್ಯಾ ವಿನಯ್, ಮುರುಳಿಧರ ನಾವಡ ಇನ್ನು ಆನೇಕ ಗಾಯಕ, ಗಾಯಕಿಯರನ್ನ ಕಲಾಸಾಗರದಲ್ಲಿ ಸನ್ಮಾನಿ ಅಭಿನಂದಿಸಲಾಯಿತು. ಉದ್ಘಾಟನೆ ವೇಳೆ ಕಿರಿಯರಿಂದ ಹಿರಿಯರವರೆಗೂ ಹೇಳಿದ ಹಾಡುಗಳಂತೂ ಎಲ್ಲರ ಮನಸೂರೆಗೊಂಡಿತ್ತು. ಕೀಬೋರ್ಡ್ ಬಿಆರ್ ಪ್ರಕಾಶ್, ತಬಲ ಸುಂದರೇಶ ಕೃಷ್ಣ ಅವಧಾನಿ, ರಿದಂ ಪ್ಯಾಡ್ ಮಹೇಶ್ ಇವರುಗಳಿಗೂ ವಿಶೇಷವಾಗಿ ಅಭಿನಂದಿಸಲಾಯಿತು. ಮಲೆನಾಡಿನ ಸಾಗರದಿಂದ ಬಂದು ಕಲಾವಿದರ ಪ್ರೀತಿಗೆ ಪಾತ್ರರಾಗಿ “ಕಲಾಸಾಗರ”ದ ಮೂಲಕ ಕಲಾವಿದರನ್ನ ಮತ್ತಷ್ಟು ಬೆಳೆಸುತ್ತಿರುವ ವೆಂಕಟೇಶ್ ನಾಯ್ಡು ಅವರಿಗೆ ಯಶಸ್ಸು ಸಿಗಲಿ ಎಂದು ಸಾವಿರಾರು ಕಲಾವಿದರು ಹಾರೈಸಿದ್ದಾರೆ.