ಖ್ಯಾತ ನಿರೂಪಕಿ ಅಪರ್ಣರವರ ಬಗ್ಗೆ ನನ್ನ ಎರಡು ಮಾತುಗಳು.

varthajala
0

 ಖ್ಯಾತ ನಿರೂಪಕಿ ಅಪರ್ಣರವರ ಬಗ್ಗೆ ನನ್ನ ಎರಡು ಮಾತು....

ಅಪರ್ಣಾ, ದೂರದರ್ಶನ ಎಂದರೆ ಕನ್ನಡ, ಕನ್ನಡ ನಿರೂಪಕಿ ಎಂಬುದು ಎಲ್ಲ ಕನ್ನಡಿಗರಿಗೂ ಅರ್ಥವಾಗುವುದು.1992 ರಲ್ಲಿ ನಾನು ತಿಪಟೂರಿನ ಸರ್ಕಾರಿ, ಬಾಲಕಿಯರ ಪ್ರೌಢಶಾಲೆಯಲ್ಲಿ ಎಂಟನೇ ತರಗತಿ ಓದುತ್ತಿದ್ದೆ.ನಾನು ಸಂಸ್ಕೃತ ಪ್ರಥಮ ಭಾಷೆಯಾಗಿ ಆಯ್ಕೆ ಮಾಡಿದ್ದೆ.ಅದಕ್ಕೆ ನಮ್ಮ ಶಾಲೆಯಲ್ಲಿ ಶಿಕ್ಷಕರು ಇರಲಿಲ್ಲ.ಹಾಗಾಗಿ ಟಿ,ಎನ್ ಸರಸ್ವತಿ ಎನ್ನುವ ಸಂಸ್ಕೃತ ಶಿಕ್ಷಕಿಯ ಬಳಿ ನಾವು ನಾಲ್ಕು ಜನ ವಿದ್ಯಾರ್ಥಿನಿಯರು ಸಂಸ್ಕೃತ ಪಾಠ ಕಲಿಯುತ್ತಿದ್ದೆವು.ಅವರು ಖ್ಯಾತ ಸಂಸ್ಕೃತ ಶಿಕ್ಷಕ ಟಿ.ಎನ್ ಪ್ರಭಾಕರ್ ರವರ ಸೋದರಿ.ಅವರು ನಮಗೆಲ್ಲ ಬೆಂಗಳೂರು ದೂರದರ್ಶನದ ಸಂಸ್ಕೃತ ಸೌರಭದಲ್ಲಿ ಒಂದು ರಸಪ್ರಶ್ನೆ ಕಾರ್ಯಕ್ರಮ ಏ ರ್ಪಾಡು ಮಾಡಿದ್ದರು.ನಾವು ಸ್ಪರ್ಧಿಗಳೆಲ್ಲ ನಮ್ಮ ಶಿಕ್ಷಕಿ ಯೊಂದಿಗೆ ದೂರದರ್ಶನ ಸ್ಟುಡಿಯೋ ತಲುಪಿದೆವು.ಆಗ ಅಲ್ಲಿ ಕಾರ್ಯಕ್ರಮಕ್ಕೆ ಮುಂಚೆ ನಮಗೆಲ್ಲ ಮೇಕಪ್ ಮಾಡುತ್ತಿದ್ದರು.

ಅಪರ್ಣಾ ನಮ್ಮ ತಂದೆಯ ಊರಾದ ಗರುಡನಾಗಿರಿಗೆ ಹತ್ತಿರದ ಪಂಚನಹಳ್ಳಿ ಯವರು ಎನ್ನುವು ದು ನನ್ನ ಹೆಮ್ಮೆ.''

ನಮ್ಮ ಮೇಕಪ್ ನಡುವೆ ನಮ್ಮ ಶಿಕ್ಷಕಿ ಅಲ್ಲಿಗೆ ಬಂದಿದ್ದ ಅಪರ್ಣಾ ರವರನ್ನು ಕುರಿತು ನಮಸ್ಕಾರ ಅಪರ್ಣಾರವರಿಗೆ ಎಂದು ತಿಳಿಸಿದರು.ಆಗ ಅಪರ್ಣಾ ರವರು ಕೂಡಾ ಕೈ ಜೋಡಿಸಿ ನಮಸ್ಕಾರ ಎಂದು ನಮ್ಮ ಶಿಕ್ಷಕಿ ಗೆ ಪ್ರತಿವಂದಿಸಿದರು.ಅವರು ಅದನ್ನು ಹೇಳಿದ ಶೈಲಿ ಥೇಟ್ ನಿರೂಪಣೆ ಮಾಡುವಾಗ ಮಾತನಾಡುವಂತೆಯೇ ಇತ್ತು.ನಂತರ ಅವರು ನಕ್ಕು, ನಮ್ಮನ್ನೆಲ್ಲ ನೋಡಿ ತಮ್ಮ ಕಾರ್ಯಕ್ರಮಕ್ಕೆ ಹೋದರು.ನಾವು ನಂತರ ನಮ್ಮ ರಸಪ್ರಶ್ನೆ ಕಾರ್ಯಕ್ರಮ ಮುಗಿಸಿ ತಿಪಟೂರು ಸೇರಿದೆವು.ಆಗೆಲ್ಲ ಕನ್ನಡ ಕಾರ್ಯಕ್ರಮ ಬೆಂಗಳೂರು ದೂರದರ್ಶನದಲ್ಲಿ ನಿರೂಪಕಿ ಎಂದರೆ ಅಪರ್ಣಾರವರೆ ನಮಗೆ ಮೊದಲು ತಿಳಿದಿದ್ದು.ಕನ್ನಡ ನಿರೂಪಣೆ ಎಂದರೆ ಅಪರ್ಣಾ ಎಂದು ಒಂದೇ ನಾಣ್ಯದ ಎರಡು ಮುಖಗಳು ಇದ್ದಂತೆ ಆಗ ಕಾಲವಿತ್ತು.ನಾವು ಯಾರೂ  ಅವರ ಆಟೋಗ್ರಾಫ್ ಅಂದು ಪಡೆಯದಿದ್ದರೂ ಅವರ ನಗೆ, ನಮಸ್ಕಾರ, ಕನ್ನಡ ಭಾಷೆ ಎಲ್ಲವೂ ಇಂದಿಗೂ ಕಣ್ಣಿಗೆ ಕಟ್ಟಿದಂತೆ ಇದೆ.ಪರಿಚಯ ಇಲ್ಲದಿದ್ದರೂ ಸೌಜನ್ಯ, ಶಿಷ್ಟಾಚಾರ ಅವರ ನಡೆಯಲ್ಲಿತ್ತು.

ಮತ್ತೆ ಹುಟ್ಟಿ ಬನ್ನಿ ಅಪರ್ಣಾ ಮೇಡಂ.ಮತ್ತೊಮ್ಮೆ ಕನ್ನಡದ ಸೇವೆ ಮಾಡಿ.

ರಾಧಿಕಾ ಜಿ.ಎನ್

ಟಿವಿ ಹೋಸ್ಟ್ 

7019990492


Post a Comment

0Comments

Post a Comment (0)