ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇದ್ದ 8,833 ಪ್ರಕರಣಗಳ ಕಕ್ಷಿದಾರರಿಗೆ ಕಾನೂನು ನೆರವು ನೀಡಲಾಗಿದೆ

varthajala
0

 ಬೆಂಗಳೂರು (ಕರ್ನಾಟಕ ವಾರ್ತೆ)ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು  ಮೇ-2023 ರಿಂದ ಮೇ-2024 ರವರೆಗೆ ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇದ್ದ ಪ್ರಕರಣಗಳಿಗೆ ಸಂಬAಧಿಸಿದAತೆ. ಕಾನೂನು ನೆರವಿಗಾಗಿ ಅರ್ಜಿ ಸಲ್ಲಿಸಿದ್ದ 8,833 ಅರ್ಹ ಕಕ್ಷಿದಾರರಿಗೆ ಕಾನೂನು ನೆರವನ್ನು ನೀಡಲಾಗಿದೆ. ರಾಜ್ಯಾದ್ಯಂತ ಸುಮಾರು 63,729 ಕಾನೂನು ಅರಿವು/ಸಾಕ್ಷರಥಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಸದರಿ ಕಾರ್ಯಕ್ರಮಗಳ ಉಪಯೋಗವನ್ನು ಸುಮಾರು 57,37,821 ಜನರು ಪಡೆದುಕೊಂಡಿರುತ್ತಾರೆ.

ಖಾಯಂ ಜನತಾ ನ್ಯಾಯಾಲಯದ 700 ಬೈಠಕ್ ನಲ್ಲಿ 4.192 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. ಮೇ 2023 ರಿಂದ ಮೇ-2024ರವರೆಗೆ 28 ಜಿಲ್ಲಾ ಮಧ್ಯಸ್ಥಿಕೆ ಕೇಂದ್ರಗಳ ಮೂಲಕ ಒಟ್ಟು 2,637 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ.

ರಾಜ್ಯದ ಎಲ್ಲಾ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳು ಹಾಗೂ ತಾಲ್ಲೂಕು ಕಾನೂನು ಸೇವೆಗಳ ಸಮಿತಿಗಳ ವತಿಯಿಂದ ವಿವಿಧ ಸ್ಥಳಗಳಲ್ಲಿ ಸ್ಥಾಪಿಸಲಾಗಿರುವ ಉಚಿತ ಕಾನೂನು ಸಲಹಾ ಕೇಂದ್ರದ ಮೂಲಕ 1,07,967 ಜನರಿಗೆ ಉಚಿತ ಕಾನೂನು ಸಲಹೆ ನೀಡಲಾಗಿದೆ.
ಮೇ-2023 ರಿಂದ ಮೇ-2024 ರವರೆಗೆ ನಡೆದ ರಾಷ್ಟ್ರೀಯ ಲೋಕ್ ಅದಾಲತ್ನಲ್ಲಿ ರಾಜ್ಯದಾದ್ಯಂತ 9,41,626 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಅವುಗಳಲ್ಲಿ 1,13,27,156 ಪ್ರಕರಣಗಳು ವ್ಯಾಜ್ಯ ಪೂರ್ವ ಪ್ರಕರಣಗಳು ಮತ್ತು 1,13,27,156 ಬಾಕಿ ಇದ್ದ ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ.

ಸಂತ್ರಸ್ಥ ಪರಿಹಾರ ಯೋಜನೆ (Victim Compensation Scheme) ಅಡಿಯಲ್ಲಿ ಪರಿಹಾರ ಕೋರಿ ಬಂದ 551 ಸಂತ್ರಸ್ಥರಿಗೆ ಪರಿಹಾರದ ಮೊತ್ತವಾಗಿ ರೂ.10,26,70,765.00 ಗಳನ್ನು ವಿತರಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post a Comment

0Comments

Post a Comment (0)