5% ವಾರ್ಷಿಕ ವೇತನ ಹೆಚ್ಚಳ ಬಿಡುಗಡೆಗೊಳಿಸಿ ಆದೇಶ ಹೊರಡಿಸಿದ ಆರೋಗ್ಯ ಇಲಾಖೆ

varthajala
0

 ಸಮುದಾಯ ಆರೋಗ್ಯ ಅಧಿಕಾರಿಗಳ ವಾರ್ಷಿಕ ವೇತನ ಹೆಚ್ಚಳ 2022-2023 & 2023-24 ನೇ ಸಾಲಿನ ತಡೆಹಿಡಿದಿರುವ 5% ವೇತನ ಮತ್ತು ಲಾಯಲಿಟಿ ಬೋನಸ್ ಬಿಡುಗಡೆಗೊಳಿಸಬೇಕೆಂದು ಈ ಹಿಂದೆ  ಬೆಂಗಳೂರು  freedom park ನಲ್ಲಿ ದಿನಾಂಕ 19/02/204 ರಿಂದ 22/02/2024ರ ವರೆಗೆ ಮುಷ್ಕರ ಹಮ್ಮಿಕೊಳ್ಳಲಾಗಿತ್ತು.

ಮುಷ್ಕರ ನಿರತ ನೌಕರರ ಸ್ಥಳಕ್ಕೆ   ಮಾನ್ಯ ಆರೋಗ್ಯ ಸಚಿವರು ಆಗಮಿಸಿ ತಮ್ಮ ಅವಧಿಯಲ್ಲಿ ತಡೆ ಹಿಡಿದಿರುವ 5% ವೇತನ ಹೆಚ್ಚಳವನ್ನು ನೀಡುವುದಾಗಿ ಭರವಸೆಯನ್ನು ನೀಡಿರುತ್ತಾರೆ ಅದರ ಭಾಗವಾಗಿ ದಿನಾಂಕ 16.07.2024ರಂದು ಆರೋಗ್ಯ ಇಲಾಖೆಯಿಂದ 2023-24 ಸಾಲಿನ  5% ವಾರ್ಷಿಕ ವೇತನ ಹೆಚ್ಚಳ ನೀಡುವುದಾಗಿ ಆದೇಶಿಸಿ ಅಧಿಕೃತವಾಗಿ ಇಂದು ಆರೋಗ್ಯ ಇಲಾಖೆ ವತಿಯಿಂದ   ಪತ್ರ ಬಿಡುಗಡೆ ಮಾಡಿರುತ್ತಾರೆ.

ನಮ್ಮ ಪ್ರಮುಖ ಬೇಡಿಕೆಯಾದ 5% ವಾರ್ಷಿಕ ವೇತನ ಹೆಚ್ಚಳಕ್ಕೆ ಪರೋಕ್ಷವಾಗಿ ಬೆಂಬಲ ನೀಡಿದ KSHCOEA ಸಂಘ, NHM ಒಳಗುತ್ತಿಗೆ ನೌಕರರ ಸಂಘ ಮತ್ತು ಇನ್ನಿತರ ಸಂಘಗಳಿಗೆ ರಾಜ್ಯ ಸಮುದಾಯ ಆರೋಗ್ಯ ಅಧಿಕಾರಿಗಳ ಸಂಘದ ವತಿಯಿಂದ ಅಭಿನಂದನೆಗಳು ಸಲ್ಲಿಸುತ್ತಲಿದೆ.

ಹಾಗೂ ನಮ್ಮ ಬೇಡಿಕೆಗಳಿಗೆ ಸ್ಪಂದಿಸಿದ ಆರೋಗ್ಯ ಇಲಾಖೆ ಸಚಿವರಾದ ಸನ್ಮಾನ್ಯ ಶ್ರೀ ದಿನೇಶ್ ಗುಂಡೂರಾವ ರವರಿಗೆ ಹಾಗೂ ಲೋಕೋಪಯೋಗಿ ಇಲಾಖೆ ಸಚಿವರಾದ ಸನ್ಮಾನ್ಯ ಶ್ರೀ ಸತೀಶ್ ಜಾರಕಿಹೊಳಿ ರವರಿಗೂ ಮತ್ತು ಮಾನ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯವರಿಗೆ, ಮಾನ್ಯ ಅಭಿಯಾನ ನಿರ್ದೇಶಕರಿಗೆ  ಹಾಗೂ ಆರೋಗ್ಯ ಇಲಾಖೆಯ ಎಲ್ಲಾ ಅಧಿಕಾರಿ ವೃಂದದವರಿಗೂ ಅದರ ಜೊತೆಗೆ TUCI ನ ರಾಜ್ಯ ಸಮಿತಿಗೂ ಕೂಡ ಸಂಘದ ವತಿಯಿಂದ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ.

ನಮ್ಮ ಪ್ರಮುಖ ಬೇಡಿಕೆಗಳಲ್ಲಿ ಒಂದಾದ ಬಾಕಿ ಉಳಿದಿರುವ 2022-23ನೇ ಸಾಲಿನ ಹಾಗೂ ಲಾಯಲಿಟಿ ಬೋನಸ್ ಸಹ ಕೂಡಲೇ ಬಿಡುಗಡೆ ಮಾಡಬೇಕೆಂದು ಆಗ್ರಹಿಸುತ್ತಿದ್ದೇವೆ .

ಇಂತಿ
ಮಮಿತ ಗಾಯಕವಾಡ
ರಾಜ್ಯಾಧ್ಯಕ್ಷರು
7406027689

Post a Comment

0Comments

Post a Comment (0)