ಕಾರ್ಗಿಲ್ ರಾಷ್ಟ್ರಧ್ವಜಕ್ಕೆ ಸ್ವಾಗತ ; ಕಾರ್ಗಿಲ್ ವಿಜಯೋತ್ಸವದಲ್ಲಿ ರಾಷ್ಟ್ರಾಭಿಮಾನ ಮೆರೆದ 4000 ಕ್ಕೂ ಅಧಿಕ ವಿದ್ಯಾರ್ಥಿಗಳು

varthajala
0

 ಬೆಂಗಳೂರು,; ಕಾರ್ಗಿಲ್ ವಿಜಯೋತ್ಸವದ 25 ನೇ ವರ್ಷಾಚರಣೆ ಎಪಿಎಸ್ ಶಿಕ್ಷಣ ಸಂಸ್ಥೆಯಲ್ಲಿ ಅದ್ದೂರಿಯಾಗಿ ನಡೆಯಿತು. ನಾಲ್ಕು ಸಹಸ್ರ ವಿದ್ಯಾರ್ಥಿಗಳು ಪಾಲ್ಗೊಂಡು ರಾಷ್ಟ್ರಾಭಿಮಾನ ಮೆರೆದರು. ಕಾರ್ಗಿಲ್ ಯುದ್ಧ ಗೆದ್ದ ನಂತರ ಕಾರ್ಗಿಲ್ ನಲ್ಲಿ ಸ್ಥಾಪಿಸಲಾದ ಭಾರತೀಯ  ರಾಷ್ಟ್ರಧ್ವಜವನ್ನು 25 ವರ್ಷದ ವಿಜಯೋತ್ಸವ ಸಂದರ್ಭದಲ್ಲಿ ಮತ್ತೊಮ್ಮೆ ಕಾರ್ಗಿಲ್ ನಿಂದ ತಂದು, ಎಪಿಎಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಮತ್ತೊಮ್ಮೆ ದ್ವಜಾರೋಹಣ ನೆರವೇರಿಸಲಾಯಿತು.

   

ಸಂಸ್ಥೆಯ ಅಧ್ಯಕ್ಷ ಡಾ. ವಿಷ್ಣು ಭರತ್ ಅಲಂಪಲ್ಲಿ ಮಾತನಾಡಿ, ಈ ರಾಷ್ಟ್ರಧ್ವಜವನ್ನು  ರಾಜ್ಯದಾದ್ಯಂತ  ರಥಯಾತ್ರೆಯ ಮೂಲಕ ಪ್ರತಿ ಜಿಲ್ಲೆಗೂ ಕೊoಡಯ್ಯಲಾಗುತ್ತಿದೆ. ಈ ಶ್ರೇಷ್ಠ ಕಾರ್ಯಕ್ರಮಕ್ಕೆ ನಮ್ಮ ಸಂಸ್ಥೆಯಿಂದ ಚಾಲನೆ ಸಿಕ್ಕಿದ್ದು ನಮ್ಮ ಸೌಭಾಗ್ಯ. ಕಾರ್ಗಿಲ್ ಯುದ್ಧದ ಚಿತ್ರಣಗಳ ಸಂಚಾರಿ ವಸ್ತುಪ್ರದರ್ಶನವನ್ನು ಸಹ ಏರ್ಪಡಿಸಲಾಗಿತ್ತು. ಇದೊಂದು ಅವಿಸ್ಮರಣೀಯ, ಹರ್ಷದಾಯಕ ಕ್ಷಣ ಎಂದು ಹೇಳಿದರು.

                           
ಸಂಸ್ಥೆಯ ಪ್ರದಾನ ಕಾರ್ಯದರ್ಶಿ ಪ್ರೊ. ಎ.ಪ್ರಕಾಶ್. ಉಪಾಧ್ಯಕ್ಷ ವಿಜಯಭಾಸ್ಕರ್, ಜಂಟಿ ಕಾರ್ಯದರ್ಶಿ ಮಂಜುನಾಥ, ಎಲ್ಲ ಸಮೂಹ ಸಂಸ್ಥೆಗಳ ಪ್ರಾಂಶುಪಾಲರು, ಭೋಧಕ, ಬೋಧಕೇತರ ಸಿಬ್ಬಂದಿ,ಅಪಾರಸಂಖ್ಯೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಈ ರಥಯಾತ್ರೆಯು ಚಕ್ರವರ್ತಿ ಸೂಲಿಬೆಲೆ ಯುವ ಬ್ರಿಗೇಡ್ ಕಾರ್ಯಕರ್ತರ ಸಹಯೋಗದಲ್ಲಿ ಆಯೋಜಿಸಲಾಗಿತ್ತು.

Post a Comment

0Comments

Post a Comment (0)