ಕಲ್ಯಾಣವೃಷ್ಟಿ ಮಹಾಭಿಯಾನ : ಜುಲೈ 21 ರಿಂದ ಚಾತುರ್ಮಾಸ ಧಾರ್ಮಿಕ ಕಾರ್ಯಕ್ರಮ

varthajala
0

 ಬೆಂಗಳೂರು ; ಮೈಸೂರಿನ ಕೆ.ಆರ್. ನಗರದಲ್ಲಿರುವ ಯಡತೊರೆ ಶ್ರೀ ಯೋಗಾನಂದೇಶ್ವರ ಸರಸ್ವತಿ ಮಠದ ಪೀಠಾಧೀಶ್ವರರಾದ  ಶಂಕರ ಭಾರತಿ ಸ್ವಾಮೀಜಿ,   ಬ್ರಹ್ಮಾನಂದ ಭಾರತಿ ಸ್ವಾಮೀಜಿಗಳ ನೇತೃತ್ವದಲ್ಲಿ ಜಯನಗರದ ಶ್ರೀ ಜಯರಾಮ ಸೇವಾ ಮಂಡಳಿಯಲ್ಲಿ ಜುಲೈ 21 ರಿಂದ ಈ ಬಾರಿ ವೈಭವದ ಚಾತುರ್ಮಾಸ ಧಾರ್ಮಿಕ ಕಾರ್ಯಕ್ರಮ ನೆರವೇರಲಿದೆ ಎಂದು ವೇದಾಂತ ಭಾರತಿ ಸಂಸ್ಥೆಯ ನಿರ್ದೇಶಕರಾದ  ಡಾ|| ಶ್ರೀಧರ ಹೆಗಡೆ ತಿಳಿಸಿದ್ದಾರೆ.


ಕಲ್ಯಾಣವೃಷ್ಟಿ ಸ್ತೋತ್ರಗಳ ಕುರಿತಾಗಿ ಎಲ್ಲಾ ಭಕ್ತಾದಿಗಳಿಗೂ ಗುರುಗಳು ಮಾರ್ಗದರ್ಶನ ಮಾಡಲಿದ್ದಾರೆ. ಕಳೆದ 24 ವರ್ಷಗಳಿಂದ ಶಾಲಾ-ಕಾಲೇಜುಗಳು, ವಿವಿಧ ಕೇಂದ್ರಗಳಲ್ಲಿ ಸೌಂದರ್ಯಲಹರೀ ಹಾಗೂ ದಕ್ಷಿಣಾಮೂರ್ತಿ ಅಷ್ಟಕಗಳನ್ನು ಪಠಿಸುವುದನ್ನು ವೇದಾಂತ ಭಾರತಿ ಸಂಸ್ಥೆ ಕಲಿಸುತ್ತಿದ್ದು,  ಈ ಬಾರಿಯ ಚಾತುರ್ಮಾಸ ಅತ್ಯಂತ ವೈಭವದಿಂದ ಕೂಡಿರಲಿದೆ ಎಂದು ಹೇಳಿದ್ದಾರೆ.
                                           

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ತುಂಗಾತೀರದ  ಶೃಂಗೇರಿ ಕ್ಷೇತ್ರದ  ಪೀಠಾಧೀಶ್ವರರಾದ  ಭಾರತೀ ತೀರ್ಥಮಹಾ ಸ್ವಾಮೀಜಿಯವರು  ಸಂನ್ಯಾಸಾಶ್ರಮ ಸ್ವೀಕರಿಸಿ ಐವತ್ತು ವರ್ಷಗಳು ಸಂದಿರುವ ಹಿನ್ನೆಲೆಯಲ್ಲಿ ವಿಧುಶೇಖರ ಭಾರತೀ ಸ್ವಾಮೀಜಿಯವರು ರಾಜ್ಯಾದ್ಯಂತ ಶ್ರೀ ಶಂಕರಭಗವತ್ಪಾದರ ಉಪದೇಶಗಳನ್ನು ವಿವಿಧ ಕಾರ್ಯಕ್ರಮಗಳ ಮೂಲಕ ವ್ಯಾಪಕವಾಗಿ ತಲುಪಿಸುವ ದಿವ್ಯಸಂಕಲ್ಪ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ವೇದಾಂತ ಭಾರತೀ ಸಂಸ್ಥೆಯು ಸಮಸ್ತ ಭಕ್ತಸಮೂಹಕ್ಕೆ ಶಂಕರಭಗವತ್ಪಾದರ ಮೂರು ಸ್ತೋತ್ರಗಳನ್ನು ಹೇಳಿಕೊಡುವ ಮತ್ತು ಅವುಗಳ ಸಾಮಾನ್ಯ ಅರ್ಥಜ್ಞಾನದೊಂದಿಗೆ ಪಾರಾಯಣ ಮಾಡುವ ಕಾರ್ಯಕ್ರಮವನ್ನು ನಡೆಸಲು ನಿಶ್ಚಯಿಸಲಾಗಿದೆ ಎಂದಿದ್ದಾರೆ.

ಈ ಹಿನ್ನೆಲೆಯಲ್ಲಿ ಕಲ್ಯಾಣವೃಷ್ಟಿಸ್ತವ, ಶಿವಪಂಚಾಕ್ಷರ ನಕ್ಷತ್ರಮಾಲಾ, ಲಕ್ಷ್ಮೀನೃಸಿಂಹ ಕರುಣಾರಸಸ್ತೋತ್ರ ಈ ಮೂರು ಸ್ತೋತ್ರಗಳ ವಿಶೇಷ ಮಹಾಭಿಯಾನವನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ...

Post a Comment

0Comments

Post a Comment (0)