ಬೆಂಗಳೂರು : ಅಪ್ಪು ನೆನಪನ್ನು ಚಿರಸ್ಥಾಯಿಯಾಗಿಸುವ ನಿಟ್ಟಿನಲ್ಲಿ ಅಪ್ಪು ಕಪ್ ಸೀಸನ್ 2 ಬ್ಯಾಡ್ಮಿಂಟನ್ ಟೂರ್ನಿಗೆ ಇಂದು ನಾಗರಬಾವಿಯ ಕಿಂಗ್ಸ್ ಕ್ಲಬ್‌ನಲ್ಲಿ ಚಾಲನೆ ನೀಡಲಾಯಿತು. ಕಾರ್ಯಕ್ರಮವನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ಉದ್ಘಾಟಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಅಶ್ವಿನಿ ಪುನೀತ್ ರಾಜ್‌ಕುಮಾರ್ ಸ್ಪರ್ಧಾಳುಗಳಿಗೆ ಶುಭ ಕೋರಿ, ಮೊದಲ ಪಂದ್ಯದ ಆರಂಭಕ್ಕೆ ಟಾಸ್ ಹಾಕಿದರು.
PRK ಸಂಸ್ಥೆಯ ಸಹಯೋಗದೊಂದಿಗೆ ಚೇತನ್ ಸೂರ್ಯ ಅವರು ಈ ಟೂರ್ನಮೆಂಟ್ ಅನ್ನು ಆಯೋಜಿಸಿದ್ದು, ಈ ಪಂದ್ಯಾವಳಿಯು ಮೂರು ದಿನಗಳ ಕಾಲ ನಡೆಯಲಿದೆ. ಅಪ್ ಕಪ್ ಸೀಸನ್ 2ನಲ್ಲಿ ಹತ್ತು ತಂಡಗಳು ಭಾಗವಹಿಸಲಿದ್ದು, ಸಿನಿಮಾ, ಧಾರಾವಾಹಿ ಮತ್ತು ಮಾಧ್ಯಮದವರು ಆಡಲಿದ್ದಾರೆ.
ಸೀಸನ್ 1 ಯಶಸ್ವಿಯಾಗಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಈ ಬಾರಿ ಅದ್ದೂರಿಯಾಗಿ ಸೀಸನ್ 2 ಅನ್ನು ಆಯೋಜಿಸಲಾಗಿದೆ. ಇತ್ತೀಚೆಗೆ ಅಪ್ಪು ಕಪ್ ಸೀಸನ್ 2 ಆಕರ್ಷಕ ಟ್ರೋಫಿ ಜೊತೆಗೆ ತಂಡಗಳ ಜೆರ್ಸಿಗಳನ್ನು ಅನಾವರಣಗೊಳಿಸಲಾಗಿತ್ತು. ಇದೀಗ ಅದ್ದೂರಿಯಾಗಿ ಪಂದ್ಯಾವಳಿಗಳನ್ನು ಆರಂಭಿಸಲಾಗಿದ್ದು, ಅಂತಿಮ ವಿಜೇತರಿಗೆ ಭಾರೀ ಬಹುಮಾನ ಘೋಷಣೆ ಮಾಡಲಾಗಿದೆ.
ಕಾರ್ಯಕ್ರಮದಲ್ಲಿ ಮೀಡಿಯಾ ಕನೆಕ್ಟ್ ಸಂಸ್ಥಾಪಕಿ ಹಾಗೂ ಸಿಇಒ ದಿವ್ಯಾ ರಂಗೇನಹಳ್ಳಿ, ಡಿಪಿಐಎಸ್ ಫೌಂಡರ್, ಚೇರ್‌ಪರ್ಸನ್ ಸುನಿತಾ ಗೌಡ, ಹಿರಿಯ ನಿರ್ಮಾಕರಾದ ಸಾರಾ ಗೋವಿಂದು ಉಪಸ್ಥಿತರಿದ್ದರು.
ಈ ವರದಿಯನ್ನು ತಮ್ಮ ಮಾಧ್ಯಮದಲ್ಲಿ ಪ್ರಕಟಿಸಬೇಕೆಂದು ಕೋರಿಕೆ
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 6364466240, 6364409651