ರಿಯಾಲಿಟಿ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ವಿಶ್ವ ದಾಖಲೆಗೆ 19 ಸಾಧಕರ ಸೇರ್ಪಡೆ

varthajala
0

ಬೆಂಗಳೂರು : ರಿಯಾಲಿಟಿ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಗೆ 19 ಜನ ಸಾಧಕರು ವಿಶ್ವ ದಾಖಲೆಗೆ ಸೇರ್ಪಡೆಯಾದರು.

ಇದೇ ದಿನಾಂಕ ೩೦-೭-೨೦೨೪ ಶುಭ ಮಂಗಳವಾರ ದಿನ ರಿಯಾಲಿಟಿ ಬುಕ್ ಆಫ್ ವರ್ಲ್ಡ್ ರೆಕಾರ್ಡ್ನ ೧೯ ಜನ ವಿಶ್ವ ದಾಖಲೆ ಹಾಗೂ ಸರಿ ಸುಮಾರು ೫೦ ಸೇವ ಮಹನೀಯರಿಗೆ ಕರ್ನಾಟಕ ಯೂತ್ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ನೀಡಿ ಪುರಸ್ಕರಿಸಲಾಯಿತು.






ಸೇವಾ ಯೋಧರತ್ನ ರಾಜ್ಯ ಪ್ರಶಸ್ತಿ ಹಾಗೂ ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿಯನ್ನು ನೀಡಿ ವಿಶ್ವಭಾಗಗಳಿಗೆ ಸೇರ್ಪಡೆಯಾದರು ಈ ಸಂದರ್ಭದಲ್ಲಿ ಡಾ.ಗಂಡಸಿ ಸದಾನಂದಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.

ಪುರಸ್ಕೃತರಲ್ಲಿ ಪ್ರಮುಖವಾಗಿ ಪತ್ರಿಕಾ ಲೋಕದಲ್ಲಿ ಮೂರು ದಶಕಗಳಿಗೂ ಅಧಿಕವಾಗಿ ಶ್ರಮಿಸಿದ ವಾರ್ತಾಜಾಲ ಮಿಡಿಯಾ ನೆಟ್ ವರ್ಕ್ನ ಶ್ರೀ ಬಿ.ಕೆ.  ಪ್ರಸನ್ನರವರು, ಸೀಮೆಸುಣ್ಣ ಮೇಲೆ ಕಲೆ ಮೂಡಿಸಿ ಚಿತ್ತಾರವನ್ನು ಮೈಗೂಡಿಸಿಕೊಂಡಿರುವ ಮಲ್ಲೇಶ್ವರದ ಶ್ರೀ ಮಲ್ಲೇಶ್ ವಿಶ್ವಕರ್ಮ ಇವರುಗಳನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಭಾರತದ ಶ್ರೇಷ್ಠ ಪದ್ಮಶ್ರೀ ಪುರಸ್ಕೃತ ಡಾ. ಕೆ ವೈ. ವೆಂಕಟೇಶ್, ಶ್ರೀ ಪಾರ್ಥ ಎಸ್.,ಗೀತಾ ಚಂದ್ರಶೇಖರ್, ಡಾ.ನಂದನ್, ಡಾ. ಬಿಕೆ ಪ್ರಕಾಶ್ ಭಾರದ್ವಾಜ್, ಡಾ. ಪ್ರೇಮಾ, ಪ್ರಕಾಶ್ ಕುಂಬ್ಳೆ   ಉಪಸ್ಥಿತರಿದ್ದರು.

ರಿಯಾಲಿಟಿ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಂಸ್ಥಾಪಕರಾದ ಡಾ. ಕರಾಟೆ ಎ.ಪಿ.ಶ್ರೀನಾಥ್ ಅವರು ಶುಭ ಕೋರಿ ಅಭಿನಂದನೆ ಸಲ್ಲಿಸಿದರು.

Post a Comment

0Comments

Post a Comment (0)