ಪ್ರವಾಸೋದ್ಯಮ ಅಭಿವೃದ್ದಿ ನಿಗಮದಿಂದ 03 ಹೊಸ ವೋಲ್ವೋ ವಾಹನಗಳಿಗೆ ಹಸಿರು ನಿಶಾನೆ

varthajala
0

 ಬೆಂಗಳೂರು  (ಕರ್ನಾಟಕ ವಾರ್ತೆ) : ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀನಿವಾಸ್.ಎಂ ಅವರು ಇಂದು  ವ್ಯವಸ್ಥಿತ ಪ್ರವಾಸಿಗಳಿಗೆ ನಿಯೋಜಿಸಲು 03 ಹೊಸ ವೋಲ್ವೋ ಪ್ರವಾಸಿ ವಾಹನಗಳಿಗೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.

  ತಿರುಪತಿ ಪ್ರವಾಸಕ್ಕೆ 55 ಆಸನಗಳ ಮಲ್ಟಿ ಆಕ್ಸೆಲ್ ವಾಹನ , ಶಿರಡಿ ಪ್ರವಾಸಕ್ಕೆ 47 ಆಸನಗಳ ವೋಲ್ವೋ ವಾಹನ, ಪಾಂಡಿಚೆರಿ ಪ್ರವಾಸಕ್ಕೆ 47 ಆಸನಗಳ ವೋಲ್ವೋ ವಾಹವನ್ನು ಪ್ರವಾಸಿಗಳಿಗೆ ನಿಯೋಜಿಸಲಾಗಿದೆ.

ಈ ಪ್ರವಾಸದ ಸೇವೆಗಳ ಸದುಪಯೋಗ ಪಡೆಯಲಿಚ್ಛಿಸುವ ಪ್ರವಾಸಿಗರು ನಿಗಮದ ಯಶವಂತಪುರ ಕೇಂದ್ರ ಕಛೇರಿಯ ಬುಕ್ಕಿಂಗ್ ಕೌಂಟರ್, ಮೈಸೂರು ಸಾರಿಗೆ ವಿಭಾಗದ ಬುಕ್ಕಿಂಗ್ ಕೌಂಟರ್, ಕೆಂಪೇಗೌಡ ಬುಕ್ಕಿಂಗ್ ಕೌಂಟರ್, ರೆಡ್‍ಬಸ್ ¥ÉÆÃlð¯ï
, ಕೆ.ಎಸ್.ಆರ್.ಟಿ.ಸಿ ಅವತಾರ್ ಹಾಗೂ ನಿಗಮದ ಅಧಿಕೃತ ಟ್ರಾವೆಲ್ ಏಜೆಂಟ್‍ಗಳ ಮುಖಾಂತರ ಮುಂಗಡ ಬುಕ್ಕಿಂಗ್ ಮಾಡಬಹುದಾಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಆನ್‍ಲೈನ್ ಬುಕ್ಕಿಂಗ್ : : www.kstdc.co ಹಾಗೂ ದೂರವಾಣಿ ಸಂಖ್ಯೆ : 080-4334 4334/35, 8970650070,  8970650075 ನ್ನು ಸಂಪರ್ಕಿಸಬಹುದಾಗಿದೆ.
ಕಾರ್ಯಕ್ರಮದಲ್ಲಿ ನಿಗಮದ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

Post a Comment

0Comments

Post a Comment (0)